ಭಾರತದಲ್ಲಿ ಸ್ಟ್ಯಾಂಡರ್ಡ್ Xiaomi 17 ಫೋನ್ ಬಿಡುಗಡೆ: ಸಂಪೂರ್ಣ ಮಾಹಿತಿ ಇಲ್ಲಿದೆ!
ಭಾರತದಲ್ಲಿ Xiaomi ತನ್ನ ಹೊಸ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Xiaomi 17 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇಂದು ಕಂಪೆನಿಯ ಅತ್ಯಂತ ಪ್ರೀಮಿಯಂ ಫ್ಲಾಗ್‌ಶಿಪ್ Xiaomi 17 Ultra ಜೊತೆಗೆ ಸ್ಟ್ಯಾಂಡರ್ಡ್ ಫ್ಲ್ಯಾಗ್‌ಶಿಪ್ Xiaomi 17 ಫೋನ್ ಸಹ ಪರಿಚಯಗೊಂಡಿದೆ. ಈ ಫೋನ್ 3nm ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ Qualcomm ನ ಇತ್ತೀಚಿನ Snapdragon 8 Elite Gen 5 ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಿದ್ದು, ಲೈಕಾ ಕ್ಯಾಮೆರಾ ತಂತ್ರಜ್ಞಾನ ಮತ್ತು ಶಕ್ತಿಶಾಲಿ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳಿಂದ ಗಮನಸೆಳೆಯುತ್ತಿದೆ. ಹಾಗಾದರೆ, ಹೊಸ Xiaomi 17 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು? ಹಾಗೂ ಸಂಪೂರ್ಣ ಫಿಚರ್ಸ್? ಯಾವುವು ಎಂಬುದನ್ನು ನೋಡೋಣ ಬನ್ನಿ.
Xiaomi 17: ಭಾರತದಲ್ಲಿ ಬೆಲೆ ಮತ್ತು ಮಾರಾಟ ವಿವರಗಳು
ಭಾರತದಲ್ಲಿ Xiaomi 17 ಫೋನ್‌ನ ಆರಂಭಿಕ ಬೆಲೆ ₹89,999 ಆಗಿದೆ. ಈ ಬೆಲೆಯಲ್ಲಿ 12GB RAM ಮತ್ತು 256GB ಸ್ಟೋರೇಜ್ ಮಾದರಿ ಪರಿಚಯಗೊಂಡಿದೆ. ಇನ್ನೊಂದು ಹೆಚ್ಚಿನ 12GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ ₹99,999 ಕ್ಕೆ ನಿಗದಿಯಾಗಿದೆ. ದೇಶದಲ್ಲಿ ಇದೇ ಮಾರ್ಚ್ 13ರಿಂದ ಮಾರ್ಚ್ 17ರವರೆಗೆ ಈ ಫೋನಿನ Early Bird ಸೇಲ್ ಆರಂಭವಾಗಲಿದ್ದು, ಈ ಸಮಯದಲ್ಲಿ ಗ್ರಾಹಕರು ₹9,999 ಮೌಲ್ಯದ Phone Damage Protection Plan ಉಚಿತವಾಗಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.
ಇಷ್ಟೇ ಅಲ್ಲದೆ, ಕಂಪನಿಯ "Never Run Out" ಲಾಂಚ್ ಆಫರ್‌ನ ಭಾಗವಾಗಿ 512GB ಸ್ಟೋರೇಜ್ ಮಾದರಿಯನ್ನು 256GB ಮಾದರಿಯ ಬೆಲೆಯಲ್ಲೇ ಖರೀದಿಸುವ ಅವಕಾಶ ನೀಡಿದೆ. ಜೊತೆಗೆ ಗ್ರಾಹಕರಿಗೆ ತಿಂಗಳಿಗೆ ₹9,999ರಿಂದ ಆರಂಭವಾಗುವ 9 ತಿಂಗಳ EMI ಆಯ್ಕೆಯೂ ಲಭ್ಯವಿದೆ.ಇನ್ನು ಈ ಫೋನಿನ ಸಾಮಾನ್ಯ ಮಾರಾಟವು ಮಾರ್ಚ್ 18 ರಿಂದ ಆರಂಭವಾಗಲಿದ್ದು, Black, Ice Blue ಮತ್ತು Venture Green ಎಂಬ ಮೂರು ಬಣ್ಣಗಳಲ್ಲಿ ಅಮೆಜಾನ್, ಶಿಯೋಮಿ ಇಂಡಿಯಾ ಮತ್ತು ಶಿಯೋಮಿ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು.

Xiaomi 17: ಪ್ರಮುಖ ವೈಶಿಷ್ಟ್ಯಗಳು
Xiaomi 17 ಫೋನ್‌ನಲ್ಲಿ 6.3 ಇಂಚಿನ CrystalRes OLED ಡಿಸ್ಪ್ಲೇ ನೀಡಲಾಗಿದೆ. ಇದರ ರೆಸಲ್ಯೂಶನ್ 2656×1220 ಪಿಕ್ಸೆಲ್ ಆಗಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 3,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಇರುವುದರಿಂದ ಡಿಸ್ಪ್ಲೇ ಬಹಳ ಪ್ರಕಾಶಮಾನ ಮತ್ತು ಸ್ಪಷ್ಟವಾಗಿರುತ್ತದೆ ಎನ್ನಲಾಗಿದೆ. ಜೊತೆಗೆ DCI-P3 ಕಲರ್ ಕವರೆಜ್, 12-ಬಿಟ್ ಕಲರ್ ಡೆಪ್ತ್, HDR10+ ಮತ್ತು Dolby Vision ಬೆಂಬಲವೂ ಇದೆ. ಕಣ್ಣುಗಳಿಗೆ ಸುರಕ್ಷಿತವಾಗಿರುವಂತೆ TÜV Rheinland ಕಡಿಮೆ ಬ್ಲೂ ಲೈಟ್ ಮತ್ತು ಫ್ಲಿಕ್ಕರ್ ಫ್ರೀ ಪ್ರಮಾಣೀಕರಣಗಳನ್ನು ಕೂಡ ಹೊಂದಿದೆ. ಇನ್ನು ಈ ಫೋನ್ IP68 ಧೂಳು ಮತ್ತು ನೀರು ನಿರೋಧಕ ಪ್ರಮಾಣೀಕರಣ ಹೊಂದಿದ್ದು, ಇದರ ಗಾತ್ರ 151.1 × 71.8 × 8.06 ಮಿಮೀ ಆಗಿದೆ. ತೂಕ 191 ಗ್ರಾಂ ಆಗಿದೆ.
ಕಾರ್ಯಕ್ಷಮತೆಯ ದೃಷ್ಟಿಯಿಂದ ಈ ಫೋನ್‌ನಲ್ಲಿ ಸಂಸ್ಥೆಯ 3nm ತಂತ್ರಜ್ಞಾನದಲ್ಲಿ ನಿರ್ಮಿತವಾದ Snapdragon 8 Elite Gen 5 ಪ್ರೊಸೆಸರ್ ಬಳಸಲಾಗಿದೆ. ಇದಕ್ಕೆ Adreno GPU ಮತ್ತು Qualcomm AI Engine ಸಹ ಜೊತೆಯಾಗಿದೆ. ಫೋನ್‌ನಲ್ಲಿ 16GB ವರೆಗೆ LPDDR5x RAM ಮತ್ತು 512GB ವರೆಗೆ UFS 4.1 ಸ್ಟೋರೇಜ್ ಆಯ್ಕೆಗಳು ದೊರೆಯುತ್ತವೆ. ಹೆಚ್ಚಿನ ಗೇಮಿಂಗ್ ಅಥವಾ ಭಾರವಾದ ಕಾರ್ಯಗಳ ಸಮಯದಲ್ಲಿ ಫೋನ್ ತಾಪಮಾನ ನಿಯಂತ್ರಣಕ್ಕಾಗಿ Xiaomi ತನ್ನ 3D IceLoop ಕೂಲಿಂಗ್ ಸಿಸ್ಟಮ್ ಅನ್ನು ಬಳಸಿದೆ. ಸಾಫ್ಟ್‌ವೇರ್ ಭಾಗದಲ್ಲಿ ಈ ಫೋನ್ ಆಧಾರಿತ ಮೇಲೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಕಂಪನಿಯ HyperAI ಸ್ಯೂಟ್‌ನಡಿ AI Writing, AI Speech Recognition, AI Interpreter, AI Search, AI Dynamic Wallpapers ಹಾಗೂ ಸಹಿತ Circle to Search ಮುಂತಾದ AI ವೈಶಿಷ್ಟ್ಯಗಳು ಲಭ್ಯವಿವೆ.
ಲೈಕಾ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ
ಫೋಟೋಗ್ರಫಿ ಪ್ರಿಯರಿಗಾಗಿ Xiaomi 17 ನಲ್ಲಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. Summilux ಲೆನ್ಸ್ ಹೊಂದಿರುವ ಈ ಸೆಟ್‌ಅಪ್‌ನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ (1/1.31-ಇಂಚಿನ Light Fusion 950 ಸೆನ್ಸರ್ ಮತ್ತು OIS), 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ (60mm ಫೋಕಲ್ ಲೆಂತ್ ಮತ್ತು OIS) ಹಾಗೂ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ (102 ಡಿಗ್ರಿ ಫೀಲ್ಡ್ ಆಫ್ ವ್ಯೂ) ಸೇರಿವೆ.ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 50 ಮೆಗಾಪಿಕ್ಸೆಲ್ ಆಟೋಫೋಕಸ್ ಫ್ರಂಟ್ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ರಿಯರ್ ಕ್ಯಾಮೆರಾ 30fps ನಲ್ಲಿ 8K ವೀಡಿಯೊ ಮತ್ತು 60fps ನಲ್ಲಿ 4K ವೀಡಿಯೊ ಚಿತ್ರಿಸುವ ಸಾಮರ್ಥ್ಯ ಹೊಂದಿದೆ.
ಬ್ಯಾಟರಿ, ಕನೆಕ್ಟಿವಿಟಿ ಮತ್ತು ಭದ್ರತೆ
ಗಮನಿಸುವುದಾದರೆ, ಚೀನಾದಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಮಾದರಿಯಲ್ಲಿ 7,000mAh ಬ್ಯಾಟರಿ ನೀಡಲಾಗಿತ್ತು. ಆದರೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಂದಂತೆಯೇ ಭಾರತದಲ್ಲಿ ಬಿಡುಗಡೆಯಾಗಿರುವ Xiaomi 17 ಫೋನ್‌ನಲ್ಲಿ 6,330mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದಕ್ಕೆ 100W ವೈರ್ಡ್ HyperCharge ಮತ್ತು 50W ವೈರ್‌ಲೆಸ್ HyperCharge ವೇಗದ ಚಾರ್ಜಿಂಗ್ ಬೆಂಬಲವಿದೆ. ಸಂಪರ್ಕ ಆಯ್ಕೆಗಳಲ್ಲಿ Wi-Fi 7, Bluetooth 6.0, NFC ಮತ್ತು USB Type-C (USB 3.2 Gen 1) ಪೋರ್ಟ್ ಸೇರಿವೆ. ಧ್ವನಿಗಾಗಿ Dolby Atmos ಬೆಂಬಲದ ಸ್ಟೀರಿಯೋ ಸ್ಪೀಕರ್‌ಗಳು ಮತ್ತು Hi-Res Audio ಪ್ರಮಾಣೀಕರಣ ನೀಡಲಾಗಿದೆ. ಭದ್ರತೆಗಾಗಿ ಅಲ್ಟ್ರಾಸೋನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ AI ಆಧಾರಿತ ಫೇಸ್ ಅನ್ಲಾಕ್ ವ್ಯವಸ್ಥೆ ನೀಡಲಾಗಿದೆ.


Click it and Unblock the Notifications








