Home
ಮೊಬೈಲ್

ಭಾರತಕ್ಕೆ Xiaomi 17 Ultra ಆಗಮನ ಖಚಿತ: ಯಾವಾಗ ಗೊತ್ತಾ?

ಶಿಯೋಮಿಯ ಮುಂದಿನ ಪೀಳಿಗೆಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಾದ Xiaomi 17 Ultra, Xiaomi 17 ಫೋನ್‌ಗಳು ಇತ್ತೀಚೆಗಷ್ಟೇ BIS (Bureau of Indian Standards) ಪ್ರಮಾಣೀಕರಣ ಪಡೆದಿರುವುದು, ಭಾರತದಲ್ಲಿ ಬಿಡುಗಡೆ ಬಹುತೇಕ ಖಚಿತ ಎಂಬ ಸೂಚನೆಯನ್ನು ನೀಡಿದೆ. ಆದರೆ, ದೇಶದಲ್ಲಿ ಈ ಬಹುನಿರೀಕ್ಷಿತ ಸರಣಿ ಬಿಡುಗಡೆ ಸಮಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣ, ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಆದರೆ, ಇದೀಗ ಈ ಕುತೂಹಲವನ್ನು ತಣಿಸುವಂತಹ ಸುದ್ದಿಯೊಂದನ್ನು ಜನಪ್ರಿಯ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರು ಹೊರಹಾಕಿದ್ದಾರೆ.!

ಹೌದು, ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಭಾರತದಲ್ಲಿ Xiaomi 17 Ultra ಮತ್ತು Xiaomi 17 ಫೋನ್‌ಗಳು ಮಾರ್ಚ್ 2026 ರಲ್ಲಿ ಬಿಡುಗಡೆ ಆಗಬಹುದು ಎಂದು ಹೇಳಿಕೊಂಡಿದ್ದಾರೆ. ಅಲ್ಟ್ರಾ ಮತ್ತು ಸ್ಟ್ಯಾಂಡರ್ಡ್ ಮಾದರಿಗಳ ಬಿಡುಗಡೆಯ ನಂತರ ಏಪ್ರಿಲ್ 2026ರ ವೇಳೆಗೆ Xiaomi 17T ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ. ಶಿಯೋಮಿ ತನ್ನ ಫ್ಲ್ಯಾಗ್‌ಶಿಪ್ ಮತ್ತು ಅಪರ್-ಪ್ರೀಮಿಯಂ ಸೆಗ್ಮೆಂಟ್ ಅನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುವ ತಂತ್ರ ಅನುಸರಿಸುತ್ತಿರುವ ಹೊಸ ಕ್ರಮಕ್ಕೆ ಈ ಸುದ್ದಿಯೂ ಪೂರಕವಾಗಿದೆ.

ಗ್ಲೋಬಲ್ ಮಟ್ಟದಲ್ಲಿ ನೋಡಿದರೆ, ಶಿಯೋಮಿ ಗ್ರೂಪ್‌ನ ಉಪಾಧ್ಯಕ್ಷ ಮತ್ತು ಚೀಫ್ ಮಾರ್ಕೆಟಿಂಗ್ ಅಧಿಕಾರಿ Xu Fei ಅವರು Xiaomi 17 Ultra ಅನ್ನು ಜನವರಿ 2026ರಲ್ಲಿ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತಕ್ಕೆ ಈ ಫೋನ್ ಬರಲು ಸುಮಾರು ಎರಡು ತಿಂಗಳಷ್ಟು ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಸರಣಿಯು ಈಗಾಗಲೇ BIS ಅನುಮೋದನೆ ಪಡೆದಿರುವುದರಿಂದ ಭಾರತೀಯ ಲಾಂಚ್ ಖಂಡಿತವಾಗಿಯೂ ಶೀಘ್ರದಲ್ಲೇ ನಡೆಯಲಿದೆ ಎನ್ನುವ ನಿರೀಕ್ಷೆ ಕೂಡ ಇದೆ.

ಭಾರತಕ್ಕೆ Xiaomi 17 Ultra ಆಗಮನ ಖಚಿತ: ಯಾವಾಗ ಗೊತ್ತಾ?

ಕ್ಯಾಮೆರಾ ಕೇಂದ್ರಿತ ಫ್ಲಾಗ್‌ಶಿಪ್ Xiaomi 17 Ultra ಫೋನ್ ಈಗಾಗಲೇ ಚೀನಾದಲ್ಲಿ ಡಿಸೆಂಬರ್ 25ರಂದು ಬಿಡುಗಡೆಗೊಂಡಿದೆ. ಈ ಫೋನ್ ಶಿಯೋಮಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಫ್ಲ್ಯಾಗ್‌ಶಿಪ್ ಆಗಿದ್ದು, ಪ್ರೀಮಿಯಂ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಚೀನಾದಲ್ಲಿ ಇದರ ಆರಂಭಿಕ ಬೆಲೆ ಸುಮಾರು ರೂ. 90,000ಕ್ಕೆ ಸಮನಾಗಿದ್ದು, ಟಾಪ್ ವೇರಿಯಂಟ್ ಸುಮಾರು ರೂ. 1.09 ಲಕ್ಷದವರೆಗೆ ಹೋಗುತ್ತದೆ. ಇದರಲ್ಲಿ 6.9 ಇಂಚಿನ 1.5K LTPO AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಉತ್ತಮ ಬ್ರೈಟ್‌ನೆಸ್ ಸಪೋರ್ಟ್ ನೀಡಲಾಗಿದೆ.

ಇನ್ನೊಂದೆಡೆ, Xiaomi 17 ಸ್ಟ್ಯಾಂಡರ್ಡ್ ಮಾದರಿ ಹೆಚ್ಚು ಕಾಂಪ್ಯಾಕ್ಟ್ ಮತ್ತು ಬ್ಯಾಲೆನ್ಸ್ಡ್ ಫ್ಲ್ಯಾಗ್‌ಶಿಪ್ ಅನುಭವವನ್ನು ನೀಡುತ್ತದೆ. 6.3 ಇಂಚಿನ 1.5K OLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಅತ್ಯಧಿಕ ಬ್ರೈಟ್‌ನೆಸ್ ಇದರ ಪ್ರಮುಖ ಆಕರ್ಷಣೆಗಳು. ಈ ಫೋನ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಕಡಿಮೆ ಗಾತ್ರದಲ್ಲಿ ಬಯಸುವ ಬಳಕೆದಾರರಿಗೆ ಸೂಕ್ತ ಆಯ್ಕೆಯಾಗಿ ಕಾಣಿಸುತ್ತದೆ. ಕಾರ್ಯಕ್ಷಮತೆಯ ವಿಚಾರದಲ್ಲಿ, Xiaomi 17 Ultra ಮತ್ತು Xiaomi 17 ಎರಡೂ ಫೋನ್‌ಗಳು ಕ್ವಾಲ್‌ಕಾಮ್‌ನ ಹೊಸ Snapdragon 8 Elite Gen 5 (3nm) ಪ್ರೊಸೆಸರ್‌ನಿಂದ ಚಾಲಿತವಾಗಿವೆ.

ಒಟ್ಟಾರೆಯಾಗಿ, 2026ರಲ್ಲಿ ಶಿಯೋಮಿ ತನ್ನ ಫ್ಲ್ಯಾಗ್‌ಶಿಪ್ ತಂತ್ರವನ್ನು ಭಾರತದಲ್ಲಿ ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ. ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಲೀಕ್‌ಗಳು ಮತ್ತು ಪ್ರಮಾಣೀಕರಣಗಳು Xiaomi 17 ಸರಣಿ ಭಾರತಕ್ಕೆ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಗೆ ಯೋಚಿಸುತ್ತಿರುವವರಿಗೆ, Xiaomi 17 Ultra ಮತ್ತು Xiaomi 17 ಸರಣಿಯು 2026ರ ಆರಂಭದಲ್ಲಿ ಗಮನಿಸಲೇಬೇಕಾದ ಫೋನ್‌ಗಳಾಗಿವೆ. ಬಹುನಿರೀಕ್ಷಿತ Xiaomi 17 Ultra ಫೋನ್‌ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
Xiaomi is reportedly gearing up to launch its next-generation flagship smartphones in India. According to tipster Abhishek Yadav, the Xiaomi 17 Ultra and Xiaomi 17 could debut in March 2026, while the Xiaomi 17T may arrive in April, following the brand’s phased premium launch strategy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+