Subscribe to Gizbot

ಶಿಯೋಮಿ ಬ್ಲಾಕ್‌ಶಾರ್ಕ್‌ ಗೇಮಿಂಗ್ ಸ್ಮಾರ್ಟ್‌ಫೋನ್: ಇದರ ಮುಂದೆ ಗ್ಯಾಲೆಕ್ಸಿ S9 ಕೂಡ ಸ್ಲೋ ಅಂತೆ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್್ಫೋನ್ ಮಾರಾಟ ಮಾಡುವ ನಂಬರ್ ಒನ್ ಕಂಪನಿ ಎನ್ನವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಶಿಯೋಮಿ, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲು ಮುಂದಾಗಿದೆ. ಯುವ ಸಮೂಹದಲ್ಲಿ ಗೇಮಿಂಗ್ ಒಲವು ಹೆಚ್ಚಾಗುತ್ತಿರುವುದನ್ನು ಗಮನಿಸಿ ಬೊಂಬಾಟ್ ಗೇಮಿಂಗ್ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.

ಶಿಯೋಮಿ ಬ್ಲಾಕ್‌ಶಾರ್ಕ್‌ ಗೇಮಿಂಗ್ ಸ್ಮಾರ್ಟ್‌ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ ಫೋನ್‌ಗಳನ್ನು ಲಾಂಚ್ ಮಾಡಿ ಕೈ ಸುಟ್ಟುಕೊಂಡಿರುವ ಶಿಯೋಮಿ, ಹೊಸ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ಬ್ಲಾಕ್ ಶಾರ್ಕ್ ಎನ್ನುವ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಸಿದ್ಧಪಡಿಸುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಹೊಸ ದಾಖಲೆಗೆ ಕಾರಣವಾಗಲಿದೆ. ತನ್ನ ಪ್ರತಿ ಸ್ಪರ್ಧಿ ಸ್ಯಾಮ್‌ಸಂಗ್ ಟಾಪ್ ಎಂಡ್ ಫೋನ್‌ಗಿಂತಲೂ ವೇಗದ ಪೋನ್‌ ಅನ್ನು ಪರಿಚಯಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಶಿಯೋಮಿ ನಿರ್ಮಾಣ ಮಾಡುತ್ತಿರುವ ಗೇಮಿಂಗ್ ಸ್ಮಾರ್ಟ್‌ಫೋನಿನಲ್ಲಿ ಟಾಪ್ ಎಂಡ್ ಗೇಮ್‌ಗಳನ್ನು ಸುಲಭವಾಗಿ ಆಡುವ ಸಲುವಾಗಿ ಟಾಪ್ ಪ್ರೋಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಅನ್ನು ಅಳವಡಿಸಿದೆ ಎನ್ನಲಾಗಿದ್ದು, 1.77GHz ವೇಗವನ್ನು ಇದು ಹೊಂದಿದೆ. ಅಲ್ಲದೇ ದೊಡ್ಡ GPU ವನ್ನು ಅಳವಡಿಸುವ ಸಾಧ್ಯತೆ ಇದೆ.

8GB RAM:

8GB RAM:

ಇದಲ್ಲದೇ ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನಿನಲ್ಲಿ 8GB RAM ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ 128GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದ್ದು, ದೊಡ್ಡ ದೊಡ್ಡ ಗೇಮ್‌ಗಳನ್ನು ಇದರಲ್ಲಿ ಸ್ಟೋರ್ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9ಗಿಂತಲೂ ವೇಗ:

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9ಗಿಂತಲೂ ವೇಗ:

ಇದಲ್ಲದೇ ಶಿಯೋಮಿ ಸ್ಮಾರ್ಟ್‌ಫೋನ್ ಬ್ಲಾಕ್ ಶಾರ್ಕ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್ ಟಾಪ್‌ ಫೋನ್ ಗ್ಯಾಲೆಕ್ಸಿ S9 ಗಿಂತಲೂ ಹೆಚ್ಚಿನ ಅಂಕವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಶಿಯೋಮಿ ಫೋನ್ ಹೆಚ್ಚಿನ ವೇಗವನ್ನು ಹೊಂದಿರಲಿದೆ.

ಹೊಸ ಮಾದರಿ ಪ್ರೋಸೆಸರ್:

ಹೊಸ ಮಾದರಿ ಪ್ರೋಸೆಸರ್:

ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನು ಬಳಕೆ ಮಾಡುವ ಸಂದರ್ಭದಲ್ಲಿ ಬೇಗನೇ ಬಿಸಿಯಾಗುವುದನ್ನು ತಡಿಯುವ ಸಲುವಾಗಿ ಕೂಲರ್ ಅನ್ನು ಒಳಗೊಂಡಿರುವುದಲ್ಲದೇ, ಡಿಜಿಟಲ್ ಸಿಗ್ನಲ್ ಪ್ರೋಸೆಸರ್ ಅನ್ನು ಸಹ ಹೊಂದಿದೆ. ಜೊತೆಗೆ ದೊಡ್ಡ ಪ್ರಮಾಣದ ಬ್ಯಾಟರಿಯನ್ನು ನೀಡುವ ಸಾಧ್ಯತೆ ಇದೆ.

ಸ್ಟಾಕ್ ಆಂಡ್ರಾಯ್ಡ್:

ಸ್ಟಾಕ್ ಆಂಡ್ರಾಯ್ಡ್:

ಇದಲ್ಲದೇ ಬ್ಲಾಕ್ ಶಾರ್ಕ್ ಸ್ಮಾರ್ಟ್‌ಫೋನಿನಲ್ಲಿ ಶಿಯೋಮಿ ಸ್ಟಾಕ್ ಆಂಡ್ರಾಯ್ಡ್ ಅನ್ನು ನೀಡುವ ಸಾಧ್ಯತೆ ಇದೆ. ಇಲ್ಲವಾದರೆ ಆಂಡ್ರಾಯ್ಡ್ ಒನ್ ಆದರೂ ಇರುವ ಸಾಧ್ಯತೆ ದಟ್ಟವಾಗಿದೆ. ಶೀಘ್ರವೇ ಈ ಸ್ಮಾರ್ಟ್ ಫೋನ್ ಕುರಿತು ಶಿಯೋಮಿ ಮಾಹಿತಿಯನ್ನು ಬಿಡುಗಡೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to Check Your Voter ID Card Status (KANNADA)

ಓದಿರಿ: ಸ್ಮಾರ್ಟ್‌ಫೋನ್‌-ಕಂಪ್ಯೂಟರ್‌ಗಳನ್ನು ಹ್ಯಾಕರ್ಸ್ ರೀತಿ ಸೆಕ್ಯೂರ್ ಮಾಡುವುದು ಹೇಗೆ..? ಪ್ರತಿಯೊಬ್ಬರು ತಿಳಿಯಬೇಕು..!

English summary
Xiaomi Blackshark company’s first gaming phone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot