ಹೊಸ ವರ್ಷಕ್ಕೆ ಹೊಸ ಫೋನ್ ಲಾಂಚ್: ರೆಡ್ಮಿ ನೋಟ್ 4

By Suneel
|

ಚೀನಾ ಟೆಕ್‌ ದೈತ್ಯ ಶ್ಯೋಮಿ ತನ್ನ ಇನ್ನೊಂದು ಫ್ಲ್ಯಾಗ್‌ಶಿಪ್‌ನ ಸ್ಮಾರ್ಟ್‌ಫೋನ್‌ 'ರೆಡ್ಮಿ ನೋಟ್ 4' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಲು ಸಜ್ಜಾಗುತ್ತಿದೆ. ಭಾಗಶಃ ಶ್ಯೋಮಿ ತನ್ನ ಈ ಸ್ಮಾರ್ಟ್‌ಫೋನ್‌ ಅನ್ನು ಮುಂದಿನ ವರ್ಷದ ಜನವರಿ ಬಿಡುಗಡೆ ಮಾಡುವ ಸಂಭವವಿದೆ. ಸ್ಮಾರ್ಟ್‌ಫೋನ್‌ ಮಧ್ಯಮ ಕ್ರಮಾಂಕದ ಬಜೆಟ್‌ ಬೆಲೆ ರೂ.11,999 ಕ್ಕೆ ಲಾಂಚ್‌ ಆಗುತ್ತಿದೆ.

ಹೊಸ ವರ್ಷಕ್ಕೆ ಹೊಸ ಫೋನ್ ಲಾಂಚ್: ರೆಡ್ಮಿ ನೋಟ್ 4

ಮ್ಯಾಕ್‌ಟೆಕ್‌ ಬ್ಲಾಗ್‌ ವರದಿ ಪ್ರಕಾರ ಶ್ಯೋಮಿ ಸ್ನಾಪ್‌ಡ್ರಾಗನ್ 625 Soc ವೈವಿಧ್ಯತೆಯಲ್ಲಿ, 2GB/3GB/4GB RAM ಆಪ್ಶನ್‌ಗಳಲ್ಲಿ ರೆಡ್ಮಿ ನೋಟ್ 4 ಅನ್ನು ಭಾರತದಲ್ಲಿ ಲಾಂಚ್‌ ಮಾಡಲಿದೆಯಂತೆ.

ಹೊಸ ವರ್ಷಕ್ಕೆ ಹೊಸ ಫೋನ್ ಲಾಂಚ್: ರೆಡ್ಮಿ ನೋಟ್ 4

ಶ್ಯೋಮಿ 'ರೆಡ್ಮಿ ನೋಟ್ 4' ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಆಗಸ್ಟ್‌ನಲ್ಲಿ ಲಾಂಚ್‌ ಮಾಡಿತ್ತು. ಡಿವೈಸ್ ಮೀಡಿಯಾಟೆಕ್ ಹೀಲಿಯೋ ಎಕ್ಸ್20 SoC ಜೊತೆಗೆ T880 MP4 GPU ಪ್ರಾಯೋಜಿತವಾಗಿದೆ. ಆದರೆ ಈಗ ಭಾರತೀಯ ಮಾರುಕಟ್ಟೆಯಲ್ಲಿ 2GHz ಆಕ್ಟಾ-ಕೋರ್ ಕ್ವಾಲ್ಕಂ ಸ್ಮಾಪ್‌ಡ್ರಾಗನ್ 625 ಪ್ರೊಸೆಸರ್ ಜೊತೆಗೆ ಅಡ್ರೆನೊ 506 GPU ಹೊಂದಲಿದೆ ಎಂಬ ವದಂತಿಗಳು ಕೇಳಿಬರುತ್ತಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಕ್ಕೆ ಹೊಸ ಫೋನ್ ಲಾಂಚ್: ರೆಡ್ಮಿ ನೋಟ್ 4

'ರೆಡ್ಮಿ ನೋಟ್ 4' ವಿಶೇಷತೆಗಳ ಬಗ್ಗೆ ಹೇಳುವುದಾದರೆ 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ, 2GB/3GB/ 4GB RAM ಜೊತೆಗೆ 16GB/ 32GB ಇನ್‌ಬಿಲ್ಟ್ ಸ್ಟೋರೇಜ್‌, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಣೆ ಮಾಡಬಹುದು. 13MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. ಸ್ಮಾರ್ಟ್‌ಫೋನ್ 4100mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಜೊತೆಗೆ MIUI 8 ಓಎಸ್‌ ನಿಂದ ರನ್‌ ಆಗಲಿದೆ.

'ಹಾನರ್ ಮ್ಯಾಜಿಕ್' ಸ್ಮಾರ್ಟ್‌ಫೋನ್‌ ಲಾಂಚ್: ಮ್ಯಾಜಿಕ್‌ ಏನು ಗೊತ್ತೇ?

Best Mobiles in India

English summary
Xiaomi could launch Redmi Note 4 in January in India. To know more about redmi note 4 visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X