ಶಿಯೋಮಿಯ ಮತ್ತೊಂದು ಬಜೆಟ್ ಸೂಪರ್ ಫೋನ್ ಲಾಂಚ್: ಬಿಡುಗಡೆಯಾದ ಟೀಸರ್...!
ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಫೋನ್‌ಗಳ ಅಬ್ಬರ ಹೆಚ್ಚಾಗಿದೆ, ಕಳೆದ ಕೆಲವು ದಿನಗಳಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ ಬೆನ್ನಲ್ಲೇ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸದ್ದಿಲ್ಲದೇ ಸಿದ್ಧತೆಯನ್ನು ನಡೆಸಿದೆ. ಅಲ್ಲದೇ ಈ ಹೊಸ ಸ್ಮಾರ್ಟ್‌ಫೋನ್ ಟೀಸರ್ ಸಹ ಲಾಂಚ್ ಮಾಡಿದೆ.

ಓದಿರಿ: ವಾಟ್ಸ್‌ಆಪ್‌ನ ಹಲವು ಆಯ್ಕೆಗಳು ಬದಲಾಗಲಿದೆ...!
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮಾದರಿಯ ಕುತೂಹಲಕಾರಿ ಟೀಸರ್ ಬಿಡುಗಡೆ ಮಾಡಿರುವ ಶಿಯೋಮಿ, ಇಂಗ್ಲೀಷ್ ಅಕ್ಷರ 'i' ಮೇಲ್ಭಾಗದಲ್ಲಿ ತ್ರಿವರ್ಣದಲ್ಲಿ ಡಾಟ್ ಗಳನ್ನು ಇಡಲಾಗಿದ್ದು, ಮೂಲಗಳ ಪ್ರಕಾರ ಇದು ಲಾಂಚ್ ಗೆ ರೆಡಿಯಾಗಿರುವ ಶಿಯೋಮಿ ನೋಟ್ 5 ಎಂದು ಊಹಿಸಲಾಗಿದೆ. ಅಲ್ಲದೇ ಮಿ 6C ಸ್ಮಾರ್ಟ್‌ಫೋನ್ ಇರಬಹುದು ಎನ್ನಲಾಗಿದೆ.

ನೋಟ್ 5:
ಈಗಾಗಲೇ ರೆಡ್‌ಮಿ ನೋಟ್ 4 ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಭಾರತದಲ್ಲಿ ನಂ.1 ಸೇಲ್ ಆಗುತ್ತಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ನೋಟ್ 4 ಲಾಂಚ್ ಆಗಿ ವರ್ಷಗಳೇ ಕಳೆದಿದೆ. ಈ ಹಿನ್ನಲೆಯಲ್ಲಿ ಹೊಸ ಫೋನ್ ಸಾಧ್ಯತೆ ಇದೆ.
ನೋಟ್ 5 ವಿಶೇಷತೆ:
5.99 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದ್ದು, 18:9 ಅನುಪಾತದಾಗಿರಲಿದೆ. ಅಲ್ಲದೇ ಎಡ್ಜ್ ಟು ಎಡ್ಹ್ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಅನುಭವವು ಉತ್ತಮವಾಗಿರಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಇದಲ್ಲದೇ ನೋಟ್ 5 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, ಸ್ನಾಪ್‌ಡ್ರಾಗನ್ 635 ಆಕ್ಟಾಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ 509 GPU ಸಹ ನೀಡಲಾಗಿದೆ. ಇದಲ್ಲದೇ 3GB/32GB ಹಾಗೂ 4GB/64GB ಆವೃತ್ತಿಯ ಎರಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವ ಸಾಧ್ಯತೆ ಇದೆ.

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:
ನೋಟ್ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16MP + 5MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 12MP ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದರಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.


Click it and Unblock the Notifications








