Subscribe to Gizbot

ರೆಡ್ ಮಿ 3ಎಸ್+ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

Written By:

ಶಿಯೋಮಿ ಸ್ಮಾರ್ಟ್ ಫೋನುಗಳಿಗೆ ಭಾರತದಲ್ಲಿ ಅಪಾರ ಸಂಖೈಯ ಅಭಿಮಾನಿಗಳಿದ್ದಾರೆ. ಕಂಪನಿಯ ಫೋನುಗಳು ಇಕಾಮರ್ಸ್ ವೆಬ್ ಸೈಟುಗಳಲ್ಲಿ ಬಿಸಿ ದೋಸೆಯಂತೆ ಖರ್ಚಾಗುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಶಿಯೋಮಿ ರೆಡ್ ಮಿ 3ಎಸ್, ರೆಡ್ ಮಿ ನೋಟ್ 3, ರೆಡ್ ಮಿ 3 ಎಸ್ ಪ್ರೈಮ್ ಫೋನುಗಳು ಭಾರತದ ಗ್ರಾಹಕರನ್ನು ತಮ್ಮ ಬೆಲೆ ಮತ್ತು ಉತ್ತಮ ಹಾರ್ಡ್ ವೇರ್ ನಿಂದ ಗಮನ ಸೆಳೆದಿದೆ.

ರೆಡ್ ಮಿ 3ಎಸ್+ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

ಹಾಗಿದ್ದರೂ, ಚೀನಾದ ಈ ಟೆಕ್ ದೈತ್ಯ ತನ್ನ ಮೊಬೈಲ್ ಫೋನುಗಳನ್ನು ಕೇವಲ ಫ್ಲಾಷ್ ಸೇಲ್ಸ್ ಮೂಲಕ ಮಾರುವುದರಿಂದ ಅನೇಕ ಗ್ರಾಹಕರಿಗೆ ಶಿಯೋಮಿ ಫೋನುಗಳು ಲಭಿಸುವುದೇ ಇಲ್ಲ. ಶಿಯೋಮಿಗೂ ಇದರ ಅರಿವಿದೆ, ಹಾಗಾಗಿ ಶಿಯೋಮಿ 3ಎಸ್+ ನ ಬಿಡುಗಡೆಯ ರೀತಿಯನ್ನು ಬದಲಿಸಿಕೊಂಡಿದೆ.

ಓದಿರಿ: ಐಡಿಯಾದಲ್ಲಿ 2GB 4G ಡಾಟಾ ಉಚಿತವಾಗಿ ಪಡೆಯಲು ಈ 5 ಹಂತಗಳನ್ನು ಪಾಲಿಸಿ!

ಕಂಪನಿಯ ಹೊಸ ಬಜೆಟ್ ಫೋನಿನ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿಯ ಮೊದಲ ಆಫ್ ಲೈನ್ ಫೋನಿದು.

ಶಿಯೋಮಿಯ ಮೊದಲ ಆಫ್ ಲೈನ್ ಫೋನಿದು.

ರೆಡ್ ಮಿ 3ಎಸ್+, ಕಂಪನಿಯ ಮೊದಲ ಆಫ್ ಲೈನ್ ಸ್ಮಾರ್ಟ್ ಫೋನ್. ಶಿಯೋಮಿಯ ವಕ್ತಾರರ ಪ್ರಕಾರ "ಶಿಯೋಮಿ ರೆಡ್ ಮಿ 3ಎಸ್+ ಎಂಐ ಇಂಡಿಯಾದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಆಫ್ ಲೈನ್ ರೀಟೇಲ್ ಅಂಗಡಿಗಳಲ್ಲಿ ಇದು ಲಭ್ಯವಾಗಲಿದೆ.

ಅಕ್ಟೋಬರ್ 1ರಿಂದ ದೇಶಾದ್ಯಂತ 7,500 ಮಳಿಗೆಗಳಲ್ಲಿ ರೆಡ್ ಮಿ 3ಎಸ್+ ಲಭ್ಯವಾಗಲಿದೆ.

ಪರದೆ ಮತ್ತು ಕ್ಯಾಮೆರ.

ಪರದೆ ಮತ್ತು ಕ್ಯಾಮೆರ.

ಶಿಯೋಮಿ ರೆಡ್ ಮಿ 3ಎಸ್+ಯಲ್ಲಿ 5 ಇಂಚಿನ (1280x720 ಪಿಕ್ಸೆಲ್ಸ್) ಐಪಿಎಸ್ ಎಲ್.ಸಿ.ಡಿ ಪರದೆಯಿದೆ. ಪಿಡಿಎಎಫ್, ಎಲ್.ಇ.ಡಿ ಫ್ಲಾಷ್, ಎಫ್/2.0 ಅಪರ್ಚರ್, 1080ಪಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇದೆ. ಎಫ್/2.2 ಅಪರ್ಚರ್, 1080 ಪಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೊಸೆಸರ್, ರ್ಯಾಮ್ ಮತ್ತು ಸಾಫ್ಟ್ ವೇರ್.

ಪ್ರೊಸೆಸರ್, ರ್ಯಾಮ್ ಮತ್ತು ಸಾಫ್ಟ್ ವೇರ್.

ರೆಡ್ ಮಿ 3ಎಸ್+ನಲ್ಲಿ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಸಿಪಿಯು ಇದೆ. (4x1.2GHz ಕಾರ್ಟೆಕ್ಸ್ ಎ53 + 4x1.5GHz ಕಾರ್ಟೆಕ್ಸ್ ಎ53). ಈ 64 ಬಿಟ್ ಪ್ರೊಸೆಸರ್ ಜೊತೆಗೆ ಅಡ್ರಿನೊ 505 ಜಿಪಿಯು ಇದೆ.

2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಎಂಐಯುಐ ಇದೆ.

ಬ್ಯಾಟರಿ, ಕನೆಕ್ಟಿವಿಟಿ.

ಬ್ಯಾಟರಿ, ಕನೆಕ್ಟಿವಿಟಿ.

ಶಿಯೋಮಿ ರೆಡ್ ಮಿ 3ಎಸ್+ನಲ್ಲಿ 4100 ಎಂ.ಎ.ಹೆಚ್ ಬ್ಯಾಟರಿ ಇದೆ. ಹಿಂಬದಿಯಲ್ಲಿ ಬೆರಳಚ್ಚು ಸಂವೇದಕವಿದೆ. ಹೈಬ್ರಿಡ್ ಡುಯಲ್ ಸಿಮ್ ಸೌಕರ್ಯವಿದೆ (ಮೈಕ್ರೋ + ನ್ಯಾನೋ/ಮೈಕ್ರೋ ಎಸ್.ಡಿ).

4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1 ಮತ್ತು ಜಿಪಿಎಸ್ ಸೌಕರ್ಯವಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಲೆ, ಲಭ್ಯತೆ ಮತ್ತು ಪ್ರತಿಸ್ಫರ್ಧಿಗಳು.

ಬೆಲೆ, ಲಭ್ಯತೆ ಮತ್ತು ಪ್ರತಿಸ್ಫರ್ಧಿಗಳು.

ಸ್ಮಾರ್ಟ್ ಫೋನಿನ ಬೆಲೆ 9,499 ರುಪಾಯಿಗಳು. ಗೋಲ್ಡ್, ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಅಕ್ಟೋಬರ್ ಒಂದರಿಂದ ದೇಶಾದ್ಯಂತ 7500 ಮಳಿಗೆಗಳಲ್ಲಿ ಲಭ್ಯ.

ಪೂರ್ವಿಕಾ, ಸಂಗೀತಾ, ಬಿಗ್ ಸಿ ಮತ್ತು ಲಾಟ್ ಮೊಬೈಲ್ಸ್ ನಂತಹ ರೀಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.

ಶಿಯೋಮಿ ರೆಡ್ ಮಿ 3ಎಸ್+ ಇತ್ತೀಚೆಗೆ ಬಿಡುಗಡೆಯಾದ ಕೂಲ್ ಪ್ಯಾಡ್ ನೋಟ್ 5, ಲೀಇಕೊ ಲಿ 1ಎಸ್ ಇಕೊ, ಮೋಟೋ ಜಿ4 ಮತ್ತು ಲಿನೊವೊದ ಅಗ್ಗದ ಫೋನುಗಳೊಂದಿಗೆ ಸೆಣಸಾಟ ನಡೆಸಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi has ventured into offline retail market with the launch of Redmi 3S+. The smartphone is priced at Rs 9,499.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot