Subscribe to Gizbot

ಟಾಪ್ಎಂಡ್ ಫೋನ್‌ಗಳಿಗೆ ಕಂಟಕ: ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್ ಶೀಘ್ರವೇ..!!

Written By:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಸದ್ದು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸದೊಂದು ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಲು ಶಿಯೋಮಿ ಸದ್ದಿಲ್ಲದೇ ಸಿದ್ಧತೆ ನಡೆಸಿದ್ದು, ಇದು ಭಾರತದಲ್ಲಿ ಲಾಂಚ್ ಆಗುತ್ತಿರುವ ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್ ಆಗಲಿದೆ.

ಟಾಪ್ಎಂಡ್ ಫೋನ್‌ಗಳಿಗೆ ಕಂಟಕ: ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್ ಶೀಘ್ರವೇ..

ಓದಿರಿ: ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

ಮೂಲಗಳ ಪ್ರಕಾರ ಈ ಪೋನ್ ಶಿಯೋಮಿ ಮಿ 5X ಎನ್ನಲಾಗಿದ್ದು, ಇದನ್ನು ಮಿನಿ ಮಿ 6 ಎಂದೇ ಕರೆಯಲಾಗಿದೆ. ಈ ಫೋನ್ ಮುಂದಿನ ತಿಂಗಳಿನಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿಯೂ ದೊರೆತಿದ್ದು, ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿ 6 ಬದಲಿಗೆ ಶಿಯೋಮಿ ಮಿ 5X:

ಮಿ 6 ಬದಲಿಗೆ ಶಿಯೋಮಿ ಮಿ 5X:

ಈ ಹಿಂದೆ ಚೀನಾದಲ್ಲಿ ಬಿಡುಗಡೆಯಾಗಿದ್ದ ಮಿ 6 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವುದಿಲ್ಲ ಎಂದು ಶಿಯೋಮಿ ತಿಳಿಸಿತ್ತು. ಅದರ ಬದಲಾಗಿದ ಶಿಯೋಮಿ ಮಿ 5X ಬಿಡುಗಡೆ ಮಾಡುತ್ತಿದ್ದು, ಇದನ್ನು ಮಿನಿ ಮಿ 6 ಎಂದು ಕರೆಯಲಾಗಿದೆ.

ಭಾರತದಲ್ಲಿ ಮೊದಲ ಡ್ಯುಯಲ್ ಫೋನ್:

ಭಾರತದಲ್ಲಿ ಮೊದಲ ಡ್ಯುಯಲ್ ಫೋನ್:

ಶಿಯೋಮಿ ಮಿ 5X ಶಿಯೋಮಿ ಪಾಲಿಗೆ ಭಾರತದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಡ್ಯುಯಲ್ ಕ್ಯಾಮರಾ ಇರುವ ಸ್ಮಾರ್ಟ್‌ಫೋನ್ ಆಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಡ್ಯುಯಲ್ ಸಿಮ್ ಹೆಚ್ಚು ಸದ್ದು ಮಾಡುತ್ತಿದೆ.

12 MP + 12 MP ಕ್ಯಾಮೆರಾ:

12 MP + 12 MP ಕ್ಯಾಮೆರಾ:

ಶಿಯೋಮಿ ಮಿ 5X ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 12 MP + 12 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದರಲ್ಲಿ ಒಂದು 10X ಜೂಮ್ ಕ್ಯಾಮೆರಾ ಮತ್ತೊಂದು ವೈಡ್ ಅಂಗಲ್ ಕ್ಯಾಮೆರಾವಾಗಿದ್ದು, ಇದು ಐಫೋನ್ ನಲ್ಲಿರುವ ಕ್ಯಾಮೆರಾದ ಸಮವಾಗಿದೆ.

ಮೆಟಲ್ ಬಾಡಿ ಹೊಂದಿದೆ:

ಮೆಟಲ್ ಬಾಡಿ ಹೊಂದಿದೆ:

ಶಿಯೋಮಿ ಮಿ 5X ಸ್ಮಾರ್ಟ್‌ಫೋನ್ ಮೆಟಲ್ ಬಾಡಿಯನ್ನು ಹೊಂದಿದ್ದು, ಬ್ಲಾಕ್, ಗೊಲ್ಡ್, ಪಿಂಕ್ ಬಣ್ಣದಲ್ಲಿ ಲಭ್ಯವಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಮಿ 5X ಸ್ಮಾರ್ಟ್‌ಪೋನು ಹೆಚ್ಚು ಭರವಸೆಯನ್ನು ಹುಟ್ಟಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi launched the Mi 5X - which may be considered as a mini Mi 6 - in China last month. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot