Subscribe to Gizbot

ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

Written By:

ಜಿಯೋ ಮಾರುಕಟ್ಟೆಯಲ್ಲಿ ಹೊಸ ಆಫರ್ ಬಿಡುಗಡೆ ಮಾಡುತ್ತಿದ್ದಂತೆ ಅದರ ಹಿಂದೆಯೇ ಇತರ ಟೆಲಿಕಾಂ ಕಂಪನಿಗಳು ಸಹ ಅಫರ್ ಘೋಷಣೆ ಮಾಡುವುದು ಸಾಮಾನ್ಯವಾಗಿದೆ. ಈ ಬಾರಿಯೂ ಅದೇ ರೀತಿಯಲ್ಲಿ, ಜಿಯೋ 84 GB ಆಫರ್ ಎದುರಾಗಿ ಏರ್‌ಟೆಲ್ ಸಹ 84 GB ಆಫರ್ ವೊಂದನ್ನು ಬಿಡುಗಡೆ ಮಾಡಿದೆ.

ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

ಓದಿರಿ: ಮೊಬೈಲ್ ಸುಗ್ಗಿ ಎಂದರೆ ತಪ್ಪಲ್ಲಾ: ಫ್ಲಿಪ್ ಕಾರ್ಟ್‌ನಲ್ಲಿ ಭರ್ಜರಿ ಆಫರ್!!

ಜಿಯೋ ಮತ್ತು ಏರ್‌ಟೆಲ್ ಮಧ್ಯ ಬಹಳ ಹಿಂದಿನಿಂದಲೂ ದರ ಸಮರವು ನಡೆಯುತ್ತಿದ್ದು, ಇದು ಈ ಬಾರಿಯೂ ಮುಂದುವರೆದಿದೆ. ಬನ್ನಿ ಈ ಹಿನ್ನಲೆಯಲ್ಲಿ ಏರ್‌ಟೆಲ್ ಆಫರ್ ಬಗ್ಗೆ ತಿಳಿದುಕೊಳ್ಳುವ. ಈ ಆಪರ್ ನಲ್ಲಿ ದೊರೆಯುತ್ತಿರುವ ಲಾಭಗಳೇನು ಎಂಬುದನ್ನು ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
84 ದಿನಕ್ಕೆ 84 GB ಡೇಟಾ:

84 ದಿನಕ್ಕೆ 84 GB ಡೇಟಾ:

ಜಿಯೋ ಮಾದರಿಯಲ್ಲಿಯೇ ಆಫರ್ ಘೋಷಣೆ ಮಾಡಿರುವ ಏರ್‌ಟೆಲ್ ತನ್ನ ಗ್ರಾಹಕರಿಗೆ ರೂ.399ಗೆ 1 GB 4G ಡೇಟಾವನ್ನು 84 ದಿನಗಳ ವರೆಗೂ ನೀಡಲಿದೆ. 84 ದಿನಕ್ಕೆ ಒಟ್ಟು 84 GB ಡೇಟಾ ಬಳಕೆದಾರರಿಗೆ ದೊರೆಯಲಿದೆ.

ಸಂಪೂರ್ಣ ಉಚಿತ ಕರೆ:

ಸಂಪೂರ್ಣ ಉಚಿತ ಕರೆ:

ಈ ಕೊಡುಗೆಯೊಂದಿಗೆ ಏರ್‌ಟೆಲ್ ಗ್ರಾಹಕರು ಜಿಯೋ ಮಾದರಿಯಲ್ಲಿ ಸಂಪೂರ್ಣ ಉಚಿತ ಕರೆಯ ಲಾಭವನ್ನು ಪಡೆಯಬಹುದಾಗಿದೆ. ಇದರಲ್ಲಿ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು ಸೇರಿಕೊಂಡಿದ್ದು, ಈ ಪ್ಲಾನ್ ಆಕ್ಟಿವೆಟ್ ಮಾಡಿಕೊಂಡರೆ ಪ್ರತಿಯೊಂದು ಕರೆಯೂ ಉಚಿತವಾಗಲಿದೆ.

FUP ಇದೆ:

FUP ಇದೆ:

ಏರ್‌ಟೆಲ್ ತನ್ನ ಈ ಆಫರ್‌ಗೆ FUP ಅಳವಡಿಸಿದ್ದು, ಕೇವಲ ಡೇಟಾ ಮಾತ್ರವಲ್ಲದೇ ಕರೆಯನ್ನು ಇದರಲ್ಲಿ ಸೇರಿಸಿದೆ. ಪ್ರತಿ ನಿತ್ಯ 1GB 4G ಡೇಟಾ ದೊಂದಿಗೆ ಪ್ರತಿ ವಾರಕ್ಕೆ 1000 ನಿಮಿಷ ಮಾತ್ರವೇ ಕರೆ ಮಾಡುವ ಅವಕಾಶ ನೀಡಿದೆ. ಅದಕ್ಕಿಂತ ಜಾಸ್ತಿ ಮಾಡಿದಲ್ಲಿ ಕರೆಯ ಮೇಲೆ ದರಗಳನ್ನು ವಿಧಿಸಲಿದೆ.

ಉಚಿತ SMS ಇಲ್ಲ:

ಉಚಿತ SMS ಇಲ್ಲ:

ಏರ್‌ಟೆಲ್ ನೀಡಿರುವ ಈ ಆಫರ್ ನಲ್ಲಿ ಉಚಿತ SMS ಕಳುಹಿಸುವ ಅವಕಾಶವನ್ನು ನಿರಾಕರಿಸಲಾಗಿದೆ. ಆದರೆ ಜಿಯೋ ದಲ್ಲಿ ಉಚಿತ SMS ಕಳುಹಿಸುವ ಅವಕಾಶವನ್ನು ನೀಡಲಾಗಿದೆ. ಇಂದಿನ ದಿನಲ್ಲಿ SMS ಕಳುಹಿಸುವವರ ಸಂಖ್ಯೆಯೂ ತೀರಾ ಕಡಿಮೆ ಇದೆ ಎನ್ನಲಾಗಿದೆ.

ಜಿಯೋದಲ್ಲಿಯೂ ಒಂದೇ ಆಫರ್ ಇದೆ:

ಜಿಯೋದಲ್ಲಿಯೂ ಒಂದೇ ಆಫರ್ ಇದೆ:

ಜಿಯೋ ಸಹ 84 ದಿನಗಳ ಕಾಲ 1GB 4G ಡೇಟಾವನ್ನು ಪ್ರತಿ ನಿತ್ಯ ನೀಡಲಿದ್ದು, ಇದಕ್ಕಾಗಿ ರೂ.399 ದರವನ್ನು ವಿಧಿಸಲಿದೆ. ಇದಲ್ಲದೇ ಎಷ್ಟು ಬೇಕಾದರು ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಇದಕ್ಕಾಗಿ ಯಾವುದೇ ದರವನ್ನು ವಿಧಿಸುವುದಿಲ್ಲ ಎಂದಿದೆ.

ಆದರೆ ವೊಡಾಫೋನ್ ಬೆಸ್ಟ್ ಆಫರ್:

ಆದರೆ ವೊಡಾಫೋನ್ ಬೆಸ್ಟ್ ಆಫರ್:

ಇದೇ ಮಾದರಿಯಲ್ಲಿ 84 ದಿನಗಳ ಕಾಲ 1GB 4G ಡೇಟಾವನ್ನು ನೀಡಲಿರುವ ವೊಡಾಪೋನ್ ಇದಕ್ಕಾಗಿ ವಿಧಿಸುತ್ತಿರುವ ದರ ಮಾತ್ರ ರೂ.352. ಇದೇ ಪ್ಲಾನ್ ಬೇಕು ಎಂದವರು ವೊಡಾಫೋನ್ ಪಡೆಯುವುದು ಉತ್ತಮ.

ಗ್ರಾಹಕರಿಗೆ ಭರ್ಜರಿ ಲಾಭ:

ಗ್ರಾಹಕರಿಗೆ ಭರ್ಜರಿ ಲಾಭ:

ಒಟ್ಟಿನಲ್ಲಿ ದರ ಸಮರದಿಂದ ಟೆಲಿಕಾಂ ಕಂಪನಿಗಳಿಗೆ ಲಾಭವಾಗುತಿದೆಯೋ ಇಲ್ಲವೋ ಆದರೆ ಗ್ರಾಹಕರಿಗೆ ಮಾತ್ರ ಲಾಭವಾಗುತ್ತಿದೆ. ಬುದ್ದಿವಂತಿಕೆಯಿಂದ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Bharti Airtel has come up with a new plan priced at Rs. 399 offering 1GB of 4G data per day and unlimited calls for 84 days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot