Home
ಮೊಬೈಲ್

ಟಾಪ್‌ ಎಂಡ್ ಫೋನ್ ಶಿಯೋಮಿ Mi 6: 6GB RAM, 128 GB ROM ಇನ್ನು ಹಲವು..!

ಶಿಯೋಮಿ Mi 6 ಹೆಸರಿನ ಈ ಫೋನಿನಲ್ಲಿ 6GB RAM ಇದ್ದು, 128 GB ROM ಸಹ ಇದೆ.

By Srinidhi

ಕಡಿಮೆ ಬೆಲೆಯ ಸ್ಮಾರ್ಟ್‌ಫೋನುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ ಹೊಸ ಅಲೆಯನ್ನು ಸೃಷ್ಠಿಸುತ್ತಿರುವ ಶಿಯೋಮಿ, ಟಾಪ್‌ ಎಂಡ್ ಸ್ಮಾರ್ಟ್‌ಫೋನೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಶಿಯೋಮಿ Mi 6 ಹೆಸರಿನ ಈ ಫೋನಿನಲ್ಲಿ 6GB RAM ಇದ್ದು, 128 GB ROM ಸಹ ಇದೆ.

ಟಾಪ್‌ ಎಂಡ್ ಫೋನ್ ಶಿಯೋಮಿ Mi 6: 6GB RAM, 128 GB ROM ಇನ್ನು ಹಲವು..!

ಓದಿರಿ: 5,999 ರೂ. ಸ್ಮಾರ್ಟ್‌ಪೋನ್‌ ಖರೀದಿಸಿದರೆ 1 ವರ್ಷ ಅನ್‌ಲಿಮಿಟೆಡ್ ಉಚಿತ ಇಂಟರ್ನೆಟ್...!!

ಶಿಯೋಮಿ Mi 6 ಮತ್ತು Mi 6 ಪ್ಲಸ್ ಎಂಬ ಎರಡು ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಬೇರೆ ಬೇರೆ ಕಂಪನಿಗಳ ಟಾಪ್ ಎಂಡ್ ಸ್ಮಾರ್ಟ್‌ಫೋನುಗಳಿಗೆ ಸ್ಪರ್ಧೆ ನೀಡಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಶಿಯೋಮಿ Mi 6:

ಶಿಯೋಮಿ Mi 6:

ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿರುವ ಶಿಯೋಮಿ Mi 6 ನಲ್ಲಿ , MIUI 8 ಸಹ ಜೊತೆಗೆ ಇರಲಿದೆ. ಈ ಫೋನು ಎರಡು ಮಾದರಿಯಲ್ಲಿ ದೊರೆಯಲಿದ್ದು, 4GB/6GB RAM ಹಾಗೂ 64GB/128GB ಇಂಟರ್ನಲ್ ಮೊಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ ಈ ಫೋನು 5.15 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಮತ್ತು Adreno 540 GPU ಸಹ ಇದೆ. ಅಲ್ಲದೇ ಹಿಂಭಾಗದಲ್ಲಿ 19 MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಒಳಗೊಂಡಿದೆ.

ಶಿಯೋಮಿ Mi 6 ಪ್ಲಸ್:

ಶಿಯೋಮಿ Mi 6 ಪ್ಲಸ್:

5.7 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನಿನಲ್ಲಿ 6GB RAM ಇದ್ದು, 64GB/128GB ಇಂಟರ್ನಲ್ ಮೊಮೊರಿಯೊಂದಿಗೆ ದೊರೆಯಲಿದೆ. ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಮತ್ತು Adreno 540 GPU ಈ ಪೋನಿನಲ್ಲಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಹಿಂಭಾಗದಲ್ಲಿ 12MP ಕ್ಯಾಮೆರಾ, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

ಶೀಘ್ರವೇ ಲಾಂಚ್:

ಶೀಘ್ರವೇ ಲಾಂಚ್:

ಈ ಎರಡು ಸ್ಮಾರ್ಟ್‌ಫೋನುಗಳು ಶೀಘ್ರವೇ ಮಾರುಕಟ್ಟೆಗೆ ಬರಲಿದ್ದು, ರೆಡಿಮಿ 4A ಫೋನಿನ ಬಿಡುಗಡೆಯ ಸಂಭ್ರಮದಲ್ಲಿ ಶಿಯೋಮಿ ಕೆಲವೇ ದಿನಗಳಲ್ಲಿ ಟಾಪ್‌ ಎಂಡ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

Best Mobiles in India

English summary
Xiaomi Mi 6 and Xiaomi Mi 6 Plus. Both the phone will be high-end and carries impressive specifications. to Know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+