5,999 ರೂ. ಸ್ಮಾರ್ಟ್‌ಪೋನ್‌ ಖರೀದಿಸಿದರೆ 1 ವರ್ಷ ಅನ್‌ಲಿಮಿಟೆಡ್ ಉಚಿತ ಇಂಟರ್ನೆಟ್...!!

Written By:

ಕೆನೆಡಾ ಮೂಲಕದ ಸ್ಮಾರ್ಟ್‌ಫೋನ್ ತಯಾಕರ ಕಂಪನಿ ಡೇಟಾವಿಂಡ್ ಮೊದಲ ಬಾರಿಗೆ ಭಾರತದಲ್ಲಿ ಕಾಲಿಡಲಿದ್ದು, MoreGMax 3G6 ಹೆಸರಿನ ಹೊಸದೊಂದು ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಈ ಸ್ಮಾರ್ಟ್‌ಫೋನ್‌ ಕೊಂಡವರಿಗೆ ಒಂದು ವರ್ಷಗಳ ಉಚಿತ ಇಂಟರ್‌ನೆಟ್‌ ಸೇವೆಯನ್ನು ನೀಡಲಾಗುವುದು ಎಂದು ಡೇಟಾವಿಂಡ್ ಕಂಪನಿಯೂ ತಿಳಿಸಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ ಟಾಕ್ ಆಫ್ ಟೌನ್ ಆಗಿದೆ.

 5,999 ರೂ. ಸ್ಮಾರ್ಟ್‌ಪೋನ್‌ ಖರೀದಿಸಿದರೆ 1 ವರ್ಷ ಅನ್‌ಲಿಮಿಟೆಡ್ ಇಂಟರ್ನೆಟ್

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ದಾಹ ತೀರಿಸುವ ಸಾವಿರ ರೂ. ಒಳಗಿನ ಟಾಪ್ 10 ಪವರ್‌ಬ್ಯಾಂಕ್‌

MoreGMax 3G6 ಹ್ಯಾಂಡ್‌ಸೆಟ್ 5,999 ರೂಗಳಿಗೆ ಮಾರಾಟವಾಗುತ್ತಿದ್ದು. ಪ್ರಮೋಷನ್‌ಗಾಗಿ ಸ್ಮಾರ್ಟ್‌ಪೋನ್‌ ಕೊಳ್ಳುವವರಿಗೆ ಒಂದು ವರ್ಷಗಳ ಉಚಿತ ಇಂಟರ್‌ನೆಟ್‌ ಸೇವೆಯನ್ನು ನೀಡಲಿದೆಯಂತೆ ಇದಕ್ಕಾಗಿ ರಿಯಲನ್ಸ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಡೇಟಾ ಬಳಸಲು ಯಾವುದೇ ಮಿತಿ ಇಲ್ಲ ಹಾಗೂ ಇದಕ್ಕಾಗಿ ಯಾವುದೇ ಪ್ಲಾನ್ ಹಾಕಿಸಿಕೊಳ್ಳಲುವ ಅವಶ್ಯಕತೆ ಇಲ್ಲವಂತೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6 ಇಂಚಿನ ಪರದೆ ಹೊಂದಿರುವ ಡೇಟಾವಿಂಡ್ MoreGMax 3G6:

6 ಇಂಚಿನ ಪರದೆ ಹೊಂದಿರುವ ಡೇಟಾವಿಂಡ್ MoreGMax 3G6:

ಫ್ಯಾಬ್ಲಟ್ ಮಾದರಿಯ MoreGMax 3G6 ಫೋನಿನಲ್ಲಿ 6 ಇಂಚಿನ ಪರದೆ ಇದ್ದು, ರೆಸಲ್ಯೂಷನ್ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡಿಲ್ಲ. 1.3GHz ವೇಗದ ಕ್ವಾಡ್‌ಕೋರ್ ಫ್ರೋಸೆಸರ್ ಇದರಲ್ಲಿದ್ದು, 1 GB RAM ಹಾಗೂ 8 GB ಇಂಟರ್ನಲ್ ಮೊಮೊರಿ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು ಎನ್ನಲಾಗಿದೆ.

8 MP ಕ್ಯಾಮೆರಾ, ಡುಯಲ್ ಸಿಮ್ ಕಾರ್ಡ್:

8 MP ಕ್ಯಾಮೆರಾ, ಡುಯಲ್ ಸಿಮ್ ಕಾರ್ಡ್:

MoreGMax 3G6 ಫೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ನೀಡಲಾಗಿದೆ. ಆದರೆ ಈ ಪೋನಿನ ಬ್ಯಾಟರಿ ಬ್ಯಾಕಪ್ ಮತ್ತು ಆಂಡ್ರಾಯ್ಡ್ ಆವೃತ್ತಿಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

12 ತಿಂಗಳ ಉಚಿತ ಸೇವೆ:

12 ತಿಂಗಳ ಉಚಿತ ಸೇವೆ:

ಡೇಟಾವಿಂಡ್ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ರಿಲಯನ್ಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಗ್ರಾಹಕರಿಗೆ ಯಾವುದೇ ಮಿತಿ ಇಲ್ಲದೇ ಡೇಟಾ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ. ಆದರೆ ಇದು 4G ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದ್ದು, ಕೇವಲ 3Gಯನ್ನು ಮಾತ್ರ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Datawind has launched the new MoreGMax 3G6 in India. The biggest highlight of the new DataWind MoreGMax 3G6 is it comes with free Internet access for a year. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot