Subscribe to Gizbot

ಐಫೋನ್ 7, ಗ್ಯಾಲೆಕ್ಸ್ S8ಗೆ ಸೆಡ್ಡು ಹೊಡೆಯುವ ಶಿಯೋಮಿ Mi 6: ವಿಶೇಷತೆಗಳೇನು..? ಬೆಲೆ ಎಷ್ಟು..?

Written By:

ಶಿಯೋಮಿ ಸ್ಮಾರ್ಟ್‌ಫೋನ್ ಲೋಕದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದು, ಇಷ್ಟು ದಿನ ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿದ್ದ ಕಂಪನಿ ಈಗ ಟಾಪ್‌ ಎಂಡ್ ಸ್ಮಾರ್ಟ್‌ಫೋನ್‌ ಕಡೆಗೆ ಮುಖ ಮಾಡಿದ್ದು, ಇಂದು ಬೀಜಿಂಗ್ ನಲ್ಲಿ ಮೊದಲ ಟಾಪ್ ಎಂಡ್ ಪೋನ್ ಶಿಯೋಮಿ Mi 6 ಲಾಂಚ್ ಮಾಡಿದ್ದು, ಸದ್ಯ ಇದು ಚೀನಾದಲ್ಲಿ ದೊರೆಯಲಿದ್ದು, ನಂತರದಲ್ಲಿ ಭಾರತಕ್ಕೆ ಕಾಲಿಡಲಿದೆ.

ಐಫೋನ್ 7, ಗ್ಯಾಲೆಕ್ಸ್ S8ಗೆ ಸೆಡ್ಡು ಹೊಡೆಯುವ ಶಿಯೋಮಿ Mi 6: ವಿಶೇಷತೆಗಳೇನು..?

ಓದಿರಿ: ಜಿಯೋ DTH ಪರೀಕ್ಷಾರ್ಥ ಸೇವೆ ಆರಂಭ: ಇಲ್ಲಿದೇ ನೋಡಿ ವಿಡಿಯೋ..!

ಶಿಯೋಮಿ Mi 6 ಸದ್ಯ ಮಾರುಕಟ್ಟೆಯಲ್ಲಿ ಟಾಪ್ ಬ್ರಾಂಡ್ ಗಳ ಟಾಪ್ ಎಂಡ್ ಫೋನ್ ಗಳಿಗೆ ನೇರ ಸ್ಪರ್ಧೆಯನ್ನು ನೀಡಲಿದ್ದು,  ಐಫೋನ್ 7, ಗ್ಯಾಲೆಕ್ಸ್ S8 ಫೋನಿನಲ್ಲಿರುವ ಆಯ್ಕೆಗಳನ್ನು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದಲ್ಲಿ ತನ್ನ ಶಿಯೋಮಿ Mi 6 ಫೋನಿನಲ್ಲಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ Mi 6 ನಲ್ಲಿದೆ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್:

ಶಿಯೋಮಿ Mi 6 ನಲ್ಲಿದೆ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್:

ಶಿಯೋಮಿ ಸದ್ಯ ಬಿಡುಗಡೆ ಮಾಡಿರುವ ಟಾಪ್‌ ಎಂಡ್ ಶಿಯೋಮಿ Mi 6 ವೇಗ ಕಾರ್ಯಚರಣೆಯನ್ನು ಹೊಂದಿದ್ದು, ಇದಕ್ಕಾಗಿ ಸ್ನಾಪ್‌ಡ್ರಾಗನ್ ಟಾಪ್‌ ಎಂಡ್ ಪ್ರೋಸೆಸರ್ ಅಳವಡಿಸಿದೆ. 2.45 GHz ಸ್ನಾಪ್‌ಡ್ರಾಗನ್ 835 ಆಕ್ಟಾ ಕೋರ್ ಪ್ರೋಸೆಸರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ವೇಗದ ಪ್ರೋಸೆಸರ್ ಆಗಿದೆ. ಇದರೊಂದಿಗೆ ಆಂಡ್ರಿನೋ 540 GPU ಸಹ ಗ್ರಾಫಿಕ್ಸ್‌ ಗಾಗಿ ಅಳವಡಿಸಲಾಗಿದೆ.

6 GB RAM ಸಹ ಇದೇ:

6 GB RAM ಸಹ ಇದೇ:

ಸಾಧ್ಯ ಮಾರುಕಟ್ಟೆಯಲ್ಲಿರುವ ಟಾಪ್‌ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ನಡುಕ ಹುಟ್ಟಿಸಿರುವ ಶಿಯೋಮಿ Mi 6 ನಲ್ಲಿ 6 GB RAM ಅವಳಡಿಸಲಾಗಿದ್ದು, ಇದು ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಒಟ್ಟಿಗೆ ಸೇರಿದರೆ ವೇಗದ ಕಾರ್ಯಚರಣೆಗೆ ಸರಿಸಾಟಿಯೇ ಇರುವುದಿಲ್ಲ. ಇದು ಬೇರೆಲ್ಲಾ ಫೋನ್‌ಗಳನ್ನು ಹಿಂದೆ ಹಾಕಲಿದೆ. ಇದರೊಂದಿಗೆ 64 GB/ 128 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.

5.15 ಇಂಚಿನ 3D ಡಿಸ್‌ಪ್ಲೇ:

5.15 ಇಂಚಿನ 3D ಡಿಸ್‌ಪ್ಲೇ:

ಶಿಯೋಮಿ ಲಾಂಚ್ ಮಾಡಿರುವ ಶಿಯೋಮಿ Mi 6 ಎಲ್ಲಾ ವಿಧದಲ್ಲೂ ಉತ್ತಮ ಗುಣಮಟ್ಟವನ್ನು ಹೊಂದಿದ್ದು, 5.15 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 3Dಯದ್ದಾಗಿದೆ. ವಿಡಿಯೋ ನೋಡಲು, ಗೇಮ್ ಆಡಲು ಒಳ್ಳೆ ಅನುಭವ ನೀಡಲಿದೆ.

ಶಿಯೋಮಿ Mi 6ನಲ್ಲಿ ಡ್ಯುಯಲ್ ಕ್ಯಾಮೆರಾ:

ಶಿಯೋಮಿ Mi 6ನಲ್ಲಿ ಡ್ಯುಯಲ್ ಕ್ಯಾಮೆರಾ:

ಶಿಯೋಮಿ ಇದೇ ಮೊದಲ ಬಾರಿಗೆ ಡ್ಯುಯಲ್ ಹಿಂಬದಿ ಕ್ಯಾಮೆರಾವನ್ನು ಶಿಯೋಮಿ Mi 6 ಫೋನಿನಲ್ಲಿ ಅಳವಡಿಸಿದೆ. ಇದು ಸದ್ಯದ ಟ್ರೆಂಟ್ ಆಗಿದೆ. ಅಕ್ಕಾಗಿಯೇ ಶಿಯೋಮಿ ತನ್ನ ಟಾಪ್ ಎಂಡ್ ಫೋನಿನಲ್ಲಿ ಈ ಹೊಸ ಫೀಚರ್ ಅನ್ನು ನೀಡಲು ಮುಂದಾಗಿದೆ. 12MP ಕ್ಯಾಮೆರಾವನ್ನು ಅಳವಡಿಸಿದೆ.

3350 mAh ಬ್ಯಾಟರಿ ಈ ಫೋನಿನಲ್ಲಿದೆ:

3350 mAh ಬ್ಯಾಟರಿ ಈ ಫೋನಿನಲ್ಲಿದೆ:

ಉತ್ತಮ ಬ್ಯಾಟರಿ ಬ್ಯಾಕಪ್ ನೀಡುವ ಸಲುವಾಗಿಯೇ ಶಿಯೋಮಿ Mi 6 ನಲ್ಲಿ 350 mAh ಬ್ಯಾಟರಿ ಅಳವಡಿಸಿದೆ. ಅಲ್ಲದೇ ವೇಗದ ಚಾರ್ಜಿಂಗ್ ಮಾಡುವ ಅವಕಾಶವನ್ನು ತನ್ನ ಗ್ರಾಹಕರಿಗೆ ಮಾಡಿಕೊಡಲು ಮುಂದಾಗಿದೆ.

ಬೆಲೆ ಕೂಡ ಕಡಿಮೆ:

ಬೆಲೆ ಕೂಡ ಕಡಿಮೆ:

ಶಿಯೋಮಿ Mi 6 ಸದ್ಯ ಎರಡು ಮಾದರಿಯಲ್ಲಿ ಲಭ್ಯವಿದ್ದು, 6 GB RAM ಮತ್ತು 64 GB ಇಂಟರ್ನಲ್ ಮೆಮೊರಿ; ಬೆಲೆ ರೂ.24,000, 6 GB RAM ಮತ್ತು 128 GB ಇಂಟರ್ನಲ್ ಮೊಮೊರಿಯ ಫೋನ್ ಬೆಲೆ ರೂ. 27,000 ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi Mi 6 is finally here. The company has unveiled the 2017 flagship smartphone at an event in Beijing. Xiaomi has announced three variants of the flagship Mi 6 at the event. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot