ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್ ಹುಬ್ಬೆರಿಸುವಂತಹ ಫೀಚರ್ಸ್‌ಗಳನ್ನು ಹೊಂದಿದೆ.!!

|

ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರ ಮೂಲಕ ಭಾರೀ ಸಂಚಲನ ಸೃಷ್ಟಿಸಿರುವ ಶಿಯೋಮಿ ಕಂಪನಿಯು, ತನ್ನ ಬಹುನಿರೀಕ್ಷಿತ 'ರೆಡ್ಮಿ ನೋಟ್ 7' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿ ಗ್ರಾಹಕರಿಗೆ ಖುಷಿ ನೀಡಿದೆ. ಇದೀಗ ಭಾರತೀಯ ಸ್ಮಾರ್ಟ್‌ಫೋನ್‌ ಪ್ರಿಯರು ಹುಬ್ಬೆರಿಸುವ ಹೊಸದೊಂದು ಸುದ್ದಿಯನ್ನು ನೀಡಲು ಮುಂದಾಗಿದೆ.

ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್ ಹುಬ್ಬೆರಿಸುವಂತಹ ಫೀಚರ್ಸ್‌ಗಳನ್ನು ಹೊಂದಿದೆ.!!

ಹೌದು, ಶಿಯೋಮಿ ''ಮಿ9 ಎಕ್ಸ್‌ಪ್ಲೊರರ್ ಎಡಿಷನ್'' ಹೆಸರಿನ ಅತ್ಯುನ್ನತ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಸ್ಮಾರ್ಟ್‌ಫೋನ್‌ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ವಿಶ್ವದಲ್ಲಿಯೇ ಪವರ್‌ಫುಲ್ ಸ್ಮಾರ್ಟ್‌ಫೋನ್‌ ಎನಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಶಿಯೋಮಿ ಸಜ್ಜಾಗುತ್ತಿದೆ.

ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್ ಹುಬ್ಬೆರಿಸುವಂತಹ ಫೀಚರ್ಸ್‌ಗಳನ್ನು ಹೊಂದಿದೆ.!!

ಶಿಯೋಮಿ ಇತ್ತೀಚಿಗಷ್ಟೆ ಮಿ9 ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಅದರ ಬೆನ್ನಲೇ 'ಮಿ9 ಎಕ್ಸ್‌ಪ್ಲೊರರ್ ಎಡಿಷನ್,' ಸ್ಮಾರ್ಟ್‌ಫೋನ್‌ ಹೊರತರುವ ಸೂಚನೆ ನೀಡಿ ಈಡಿ ಮೊಬೈಲ್ ಮಾರುಕಟ್ಟೆ ಶಿಯೋಮಿಯತ್ತ ನೋಡುವಂತೆ ಮಾಡಿದೆ. ಹಾಗಾದರೇ ಲಿಕ್ ಮಾಹಿತಿ ಪ್ರಕಾರ ಶಿಯೋಮಿಯ ''ಮಿ9 ಎಕ್ಸ್‌ಪ್ಲೊರರ್ ಎಡಿಷನ್'' ಸ್ಮಾರ್ಟ್‌ಫೋನ್‌ ಏನೆಲ್ಲಾ ಹೈ ಎಂಡ್‌ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಬ್ಯೂಟಿಫುಲ್ ಡಿಸೈನ್

ಬ್ಯೂಟಿಫುಲ್ ಡಿಸೈನ್

ಶಿಯೋಮಿ ''ಮಿ9 ಎಕ್ಸ್‌ಪ್ಲೊರರ್ ಎಡಿಷನ್, ಹೈ ಎಂಡ್‌ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಇದರ ರಚನೆಯು ಸಹ ಆಕರ್ಷಕವಾಗಿರಲಿದೆ. ಡಿಸ್‌ಪ್ಲೇಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ಅಂಚು ರಹಿತ ಡಿಸ್‌ಪ್ಲೇಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಸ್ಮಾರ್ಟ್‌ಫೋನಿನ್ ನಾಲ್ಕು ಮೂಲೆಗಳು ಅರ್ಧವೃತ್ತಾಕಾರವನ್ನು ಹೊಂದಿರಲಿದ್ದು, ಶೈನಿಂಗ್ ಲುಕ್‌ ನಲ್ಲಿರಲಿದೆ. ಸ್ಮಾರ್ಟ್‌ಫೋನಿನ್ ಹಿಂಬದಿಯ ಎಡಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗುವುದು ಎನ್ನಲಾಗುತ್ತಿದೆ.

ಬಿಗ್‌ RAM

ಬಿಗ್‌ RAM

ಶಿಯೋಮಿ ತನ್ನ ಹೊಸ ''ಮಿ9 ಎಕ್ಸ್‌ಪ್ಲೊರರ್ ಎಡಿಷನ್'' ಸ್ಮಾರ್ಟ್‌ಫೋನ್‌ ಮೂಲಕ ಭಾರತೀಯ ಮಾರುಕಟ್ಟೆಗೆ 10GB RAM ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿನ್ನು ಹೈ ಎಂಡ್‌ RAM ಫೀಚರ್ ಪರಿಚಯಿಸುವ ಹೊಸ ಪರಂಪರೆಗೆ ಮುನ್ನುಡಿ ಬರೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಕಂಪನಿಯು ಚೀನಾದಲ್ಲಿ 10GB RAM ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಹೀಗಾಗಿ ಮಿ9 ಎಕ್ಸ್‌ಪ್ಲೊರರ್ ಎಡಿಷನ್ ಸ್ಮಾರ್ಟ್‌ಫೋನಿನಲ್ಲಿ 10GB RAM ಪರಿಚಯಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಅತ್ಯುತ್ತಮ ಪ್ರೊಸೆಸರ್

ಅತ್ಯುತ್ತಮ ಪ್ರೊಸೆಸರ್

ಶಿಯೋಮಿಯ ಬರಲಿರುವ ಹೊಸ ಮಿ9 ಎಕ್ಸ್‌ಪ್ಲೊರರ್ ಎಡಿಷನ್ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಅಧಿಕ ಡೇಟಾ ಬೇಡುವ ಗೇಮ್ಸ್‌ಗಳನ್ನು ಯಾವಿದೇ ಅಡೆ ತಡೆಗಳಿಲ್ಲದೇ ಆಡಲು ಈ ಪ್ರೊಸಸರ್ ಅನುವು ಮಾಡಿಕೊಡುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಮಲ್ಟಿಟಾಸ್ಕ್‌ಕೆಲಸಗಳನ್ನು ಸಲೀಸ್ ಆಗಿ ನಿರ್ವಹಿಸುವ ಕಾರ್ಯದಕ್ಷತೆಯನ್ನು ಈ ಪ್ರೊಸೆಸರ್ ಹೊಂದಿರಲಿದೆ.

ನಾಲ್ಕು ಕ್ಯಾಮೆರಾ

ನಾಲ್ಕು ಕ್ಯಾಮೆರಾ

'ಮಿ9 ಎಕ್ಸ್‌ಪ್ಲೊರರ್ ಎಡಿಷನ್' ಸ್ಮಾರ್ಟ್‌ಫೋನ್‌ ಶಿಯೋಮಿಯ ಮೊದಲ ನಾಲ್ಕು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಎನಿಸಿಕೊಳ್ಳಲಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಹಿಂಬದಿಯಲ್ಲಿ ವಿವಿಧ ಮೆಗಾಪಿಕ್ಸಲ್ ಸಾಮರ್ಥ್ಯವುಳ್ಳ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಮೂಲಕ ಸೆರೆಹಿಡಿಯುವ ಫೋಟೋಗಳು ಅತ್ಯುತ್ತಮವಾಗಿರಲಿದ್ದು, ಡಿಎಸ್ಎಲ್ಆರ್ ಕ್ಯಾಮೆರಾಗಳಿಗೆಳ ಗುಣಮಟ್ಟದಲ್ಲಿ ಚಿತ್ರಗಳು ಮೂಡಿಬರಲಿವೆ ಎಂದು ಹೇಳಲಾಗುತ್ತಿದೆ.

ಬೆಲೆ ಮತ್ತು ಬಿಡುಗಡೆ?

ಬೆಲೆ ಮತ್ತು ಬಿಡುಗಡೆ?

ಶಿಯೋಮಿಯ ಹೊಸ ಮಿ9 'ಎಕ್ಸ್‌ಪ್ಲೊರರ್ ಎಡಿಷನ್' ಸ್ಮಾರ್ಟ್‌ಫೋನ್‌ ಬಿಡುಗಡೆಯ ಮತ್ತು ಬೆಲೆಯ ಬಗ್ಗೆ ಕಂಪನಿಯು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಹೈ ರೇಂಜ್‌ದರದಲ್ಲಿಯೇ ಇರಲಿದೆ ಎನ್ನಲಾಗುತ್ತಿದೆ.

Most Read Articles
Best Mobiles in India

English summary
A leaked render of the Mi 9 Explorer Edition with four rear-facing cameras is now doing rounds on Weibo.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X