ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ ಶಿಯೋಮಿಯ 'ತ್ರಿವಳಿ ಕ್ಯಾಮೆರಾ' ಸ್ಮಾರ್ಟ್‌ಫೋನ್!!
ಸ್ಮಾರ್ಟ್‌ಫೋನ್‌ಗಳಲ್ಲಿ ರಚನೆಯಿಂದ ಹಿಡಿದು ಕ್ಯಾಮೆರಾ ಪಿಕ್ಸಲ್‌ಗಳವರೆಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿದ್ದು, ಹಾಗೇ ಸ್ಮಾರ್ಟ್‌ಫೋನ್‌ಗಳ ಪ್ರೊಸೆಸರ್‌ನಲ್ಲಿಯೂ ಹೊಸ ಅಪ್‌ಡೇಟ್‌ಗಳು ಆಗುತ್ತಿವೆ. ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳು ಈಗಾಗಲೇ ಅತ್ಯುತ್ತಮ ಪ್ರೊಸೆಸರ್ ಮತ್ತು ಕ್ಯಾಮೆರಾ ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಇವುಗಳ ಸಾಲಿಗಿಗ ಶಿಯೋಮಿ ಕಂಪನಿಯು ಸೇರಲಿದೆ.

ಹೌದು, 'ಶಿಯೋಮಿ ಮಿ9' ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ರಿಲೀಸ್ ಮಾಡಲಿದ್ದು, ಶಿಯೋಮಿ ತನ್ನ ಹೊಸ 'ಮಿ9' ಸ್ಮಾರ್ಟ್‌ಫೋನಿನಲ್ಲಿ ಅಪ್‌ಡೇಟ್ 'ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್‌ಅನ್ನು ಅಳವಡಿಸಲಿದ್ದು, ಈ ಹೊಸ ಸ್ಮಾರ್ಟ್‌ಫೋನ್ ಮೂಲಕ ಶಿಯೋಮಿ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾವನ್ನು ಸಹ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಇದೇ ಫೆಬ್ರುವರಿ 20ರಂದು ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ.

ಶಿಯೋಮಿ ಕಂಪನಿಯು ಹೊಸ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಕೇಳಿದರೇ ಗ್ರಾಹಕರಲ್ಲಿ ನಿರೀಕ್ಷೆಗಳು ಹೆಚ್ಚಾಗುತ್ತವೆ, ಇದೀಗ ಬಿಡುಗಡೆ ಮಾಡಲಿರುವ ಮಿ9 ಸ್ಮಾರ್ಟ್‌ಫೋನ್ ಶಿಯೋಮಿಯ ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳಲಿದೆ. ಹಾಗಾದರೇ ಶಿಯೋಮಿಯ ಮಿ9 ಸ್ಮಾರ್ಟ್‌ಫೋನ್ ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚುಸುವಂತಹ ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ತ್ರಿವಳಿ ಕ್ಯಾಮೆರಾ
ಮೊದಲ ಬಾರಿಗೆ ಶಿಯೋಮಿ ಕಂಪನಿಯು ತನ್ನ ಹೊಸ ಶಿಯೋಮಿ ಮಿ9 ಸ್ಮಾರ್ಟ್‌ಫೋನ್‌ನಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಿದ್ದು, ಆ ಮೂಲಕ ಈಗಾಗಲೇ ತ್ರಿವಳಿ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳ ಪಟ್ಟಿಗೆ ಸೇರಿಕೊಳ್ಳಲಿದೆ. ಇದರಲ್ಲಿ ಪ್ರಮುಖ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ.

ಡಿಸೈನ್
ಶಿಯೋಮಿ ಮಿ9 ಸ್ಮಾರ್ಟ್‌ಫೋನ್ 155 x 75 x 7.6mm ಸುತ್ತಳತೆಯ ರಚನೆಯೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್‌ಫೋನಿನ ನಾಲ್ಕು ಮೂಲೆಗಳು ಹಾಫ್ ಕರ್ವ್ ಆಕಾರವನ್ನು ಹೊಂದಿವೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದ್ದು, ಎಲ್‌ಇಡಿ ಫ್ಲ್ಯಾಶ್ ಲೈಟ್ ಕ್ಯಾಮೆರಾಗಳ ಕೆಳಗಡೆನೆ ಇದೆ. ಈ ಸ್ಮಾರ್ಟ್‌ಫೋನಿನಲ್ಲಿ 'ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್' ಅನ್ನು ನೀಡಲಾಗಿದೆ.

ಡಿಸ್‌ಪ್ಲೇ
ಶಿಯೋಮಿಯ ಮಿ9 ಸ್ಮಾರ್ಟ್‌ಫೋನ್ 1440 x 2880 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಸ್ಕ್ರೀನ್‌ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಸಹ ನೀಡಲಾಗಿದೆ. ವಿಶಾಲವಾದ ಡಿಸ್‌ಪ್ಲೇಯು ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗುತ್ತಿದೆ.

ಪ್ರೊಸೆಸರ್
ಬರಲಿರುವ ಶಿಯೋಮಿಯ ಮಿ9 ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆ ಇದರ ಪ್ರೊಸೆಸರ್ ಆಗಿದ್ದು, ಆಕ್ಟಾಕೋರ್ (2.84 GHz, ಸಿಂಗಲ್ ಕೋರ್, ಕಿರಿಯೊ 485 + 2.42 GHz, ಟ್ರೈಕೋರ್ ಕಿರಿಯೊ 485 + 1.8 GHz, ಕ್ವಾಡ್‌ಕೋರ್, ಕಿರಿಯೊ 485) ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಅತ್ಯುತ್ತಮ ವೇಗದ ಪ್ರೊಸೆಸರ್ ಹೊಂದಿರಲಿದೆ. ಆಂಡ್ರಾಯ್ಡ್ 9 ಪೈ ನೊಂದಿಗೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ.

ಮೆಮೊರಿ ಪವರ್
ಈ ಹೊಸ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಲಿದ್ದು, 6GB ಸಾಮರ್ಥ್ಯದ RAM ನೊಂದಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯ, ಮತ್ತು 8GB ಸಾಮರ್ಥ್ಯದ RAM ನೊಂದಿಗೆ 512GB ಆಂತರಿಕ ಶೇಖರಣಾ ಸಾಮರ್ಥ್ಯಗಳನ್ನು ಹೊಂದಿರಲಿದೆ. ಇದರೊಂದಿಗೆ ಬಾಹ್ಯವಾಗಿ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.

ಕ್ಯಾಮೆರಾ
ಶಿಯೋಮಿ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾವನ್ನು ಪರಿಚಯಿಸಲಿದ್ದು, ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಸೋನಿಯ ImX586 ಸೆನ್ಸಾರ್‌ನೊಂದಿಗೆ 48MP + 18MP + 8MP ಸಾಮರ್ಥ್ಯದ ಮೂರು ಅತ್ಯುತ್ತಮ ಕ್ಯಾಮೆರಾಗಳನ್ನು ನೀಡಲಿದ್ದು, ಮುಂಬದಿಯಲ್ಲಿ ಸೋನಿಯ IMX576 ಸೆನ್ಸಾರ್‌ನೊಂದಿಗೆ ಸೆಲ್ಫೀಗಾಗಿ 24 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಹೊಂದಿರಲಿದೆ.

ಬ್ಯಾಟರಿ
ಶಿಯೋಮಿಯ ಹೊಸ ಮಿ9 ಸ್ಮಾರ್ಟ್‌ಫೋನ್ 3500 mAh ಸಾಮರ್ಥ್ಯದ ಅತ್ಯುತ್ತಮ ಬ್ಯಾಡರಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರಲಿದೆ. ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಅನ್ನು ನೀಡಲಿದ್ದು, ಸ್ಮಾರ್ಟ್‌ಫೋನ್ ಬಹುಬೇಗನೇ ಚಾರ್ಜ ಆಗುವುದು.

ಬೆಲೆ?
ಭಾರತೀಯ ಮಾರುಕಟ್ಟೆಯಲ್ಲಿ ಅಬ್ಬರ ಮಾಡಲು ಬರುತ್ತಿರುವ ಶಿಯೋಮಿಯ ಹೊಸ ಮಿ9 ಸ್ಮಾರ್ಟ್‌ಫೋನ್ ಇದೇ ಫೆಬ್ರುವರಿ 20ರಂದು ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದ್ದು, ಇದರ ಬೆಲೆ ಸುಮಾರು 31,400ರೂ.ಗಳು


Click it and Unblock the Notifications








