ಮತ್ತೆ ಕುತೂಹಲ ಮೂಡಿಸಿದ ಶಿಯೋಮಿ!..ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಲಾಂಚ್!
ಶಿಯೋಮಿ ಇತ್ತೀಚಿಗೆ 'ರೆಡ್ಮಿ ನೋಟ್ 7' ಮತ್ತು 'ನೋಟ್ 7 ಪ್ರೋ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ಇದೀಗ ಮತ್ತೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ನೂತನ ಫೀಚರ್ಸ್‌ಗಳನ್ನು ಒಳಗೊಂಡಿರುವ ಮೀಡ್ ರೇಂಜ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹೌದು, ಶಿಯೋಮಿ ಸಂಸ್ಥೆಯು 'ಶಿಯೋಮಿ ಎಕ್ಸ್9' ಹೆಸರಿನ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಲಿದ್ದು, ಇದೇ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಗ್ರೇಡಿಯಂಟ್ ಕಲರ್ ಲುಕ್ ಹೊಂದಿರಲಿರುವ ಈ ಸ್ಮಾರ್ಟ್‌ಫೋನಿನ ಪ್ರಮುಖ ಕ್ಯಾಮೆರಾವು 'ಸೋನಿಯ IMX586 ಸೆನ್ಸಾರ್'ನೊಂದಿಗೆ, 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿದೆ ಎನ್ನಲಾಗುತ್ತಿದೆ.

ಸ್ನ್ಯಾಪ್‌ಡ್ರಾಗನ್ 675 SoC ಪ್ರೊಸೆಸರ್ ಹೊಂದಿರಲಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್ ಸೆನ್ಸಾರ್ ಜೊತೆಗೆ ವಾಟರ್‌ಡ್ರಾಪ್ ನಾಚ್ ಡಿಸೈನ್ ಹೊಂದಿರಲಿದ್ದು, ಡಿಸ್‌ಪ್ಲೇಯ ರಕ್ಷಣೆಗೆ 2.5D ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ. ಹಾಗಾದರೇ ಶಿಯೋಮಿ ಎಕ್ಸ್9 ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್
ಅತೀ ತಿಳುವಾದ ಅಂಚಿನ ರಚನೆಯನ್ನು ಹೊಂದಿರಲಿರುವ ಈ ಸ್ಮಾರ್ಟ್‌ಫೋನ್ ಬಾಹ್ಯದಲ್ಲಿ ಹಾಲೋಗ್ರಾಫಿಕ್ ಬಣ್ಣವನ್ನು ಹೊಂದಿರಲಿದೆ. ವಿಶಾಲವಾದ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇಯಲ್ಲಿ ಫಿಂಗರ್ ಸೆನ್ಸಾರ್ ಸೌಲಭ್ಯವನ್ನು ಒಳಗೊಂಡಿದೆ. ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇಯ ಸೌಂದರ್ಯವನ್ನು ಹೆಚ್ಚಿಸಿದೆ.

ಡಿಸ್‌ಪ್ಲೇ
ಶಿಯೋಮಿ ಎಕ್ಸ್9 ಸ್ಮಾರ್ಟ್‌ಫೋನ್ 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಸ್ಮಾರ್ಟ್‌ಫೋನಿನ ಬಾಹ್ಯ ಬಾಡಿ ಮತ್ತು ಡಿಸ್‌ಪ್ಲೇ ನಡುವಿನ ಅನುಪಾತವು 19.5:9 ಆಗಿದೆ.

ಪ್ರೊಸೆಸರ್
ಸ್ನ್ಯಾಪ್‌ಡ್ರಾಗನ್ 675 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಅಂಡ್ರಾಯ್ಡ್ 9 ಅಪ್‌ಗ್ರೇಡ್ ಅಪರೇಟಿಂಗ್ ಸಿಸ್ಟಮ್ ಇರಲಿದೆ. ಸ್ಮಾರ್ಟ್‌ಫೋನ್ ಕಾರ್ಯವೈಖರಿಯನ್ನು ಬೆಂಬಲಿಸಲಿದ್ದು, ಇದರೊಂದಿಗೆ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

ಕ್ಯಾಮೆರಾ
ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಪ್ರಮುಖ ರೇರ್ ಕ್ಯಾಮೆರಾ 48ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದ್ದು, ಜೊತೆಗೆ ಸೋನಿಯ IMX586 ಸೆನ್ಸಾರ್ ಹೊಂದಿದೆ. ಹಾಗೇ ಇನ್ನುಳಿದ ಎರಡು ಕ್ಯಾಮೆರಾಗಳು 8ಮೆಗಾಪಿಕ್ಸಲ್ ಮತ್ತು 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿವೆ.

ಸೆಲ್ಫಿ ಕ್ಯಾಮೆರಾ
ಶಿಯೋಮಿ ಸೆಲ್ಫಿಗಾಗಿ 32ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾವು ಸ್ಯಾಮ್‌ಸಂಗ್ (GD1) ಶೂಟರ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸೆಲ್ಫಿ ಪ್ರಿಯರನ್ನು ಸೆಳೆಯಲಿದೆ.

ಬ್ಯಾಟರಿ
3300mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಈ ಬ್ಯಾಟರಿ ಹೊಂದಿರಲಿದೆ. ಇದರೊಂದಿಗೆ 18W ಫಾಸ್ಟ್ ಚಾರ್ಜರ್ (Quick Charge 4+) ಸೌಲಭ್ಯವನ್ನು ನೀಡಲಾಗಿದ್ದು, ವೇಗವಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಪಡೆದುಕೊಳ್ಳುತ್ತದೆ.

ಬೆಲೆ ಮತ್ತು ಲಭ್ಯತೆ
ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದ್ದು, ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಡ್ರಿ ಕೊಡಲಿದೆ ಎಂಬುದರ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆಯು 1,699 Yuan ಇರಲಿದ್ದು, ದೇಶಿಯ ಮಾರುಕಟ್ಟೆಯಲ್ಲಿ 17,400ರೂ.ಗಳು ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








