₹ 14,999ಕ್ಕೆ ಐಫೋನ್ 8ಗೂ ಸೆಡ್ಡು ಹೊಡೆಯಲಿದೆ 'ಶಿಯೋಮಿ MI A1'!!.ಏಕೆ?
‘ಆಂಡ್ರಾಯ್ಡ್ ಒನ್’ಮೂಲದ ಮೊದಲ ಸ್ಮಾರ್ಟ್‌ಫೋನ್ 'ಶಿಯೋಮಿ ಎಂಐ ಎ1’ ಆಗಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 625 ಅಕ್ಟಾ–ಕೋರ್ ಪ್ರೊಸೆಸರ್ ಮೂಲಕ ಹೊರಬರುತ್ತಿದೆ.!!
ಭಾರತದಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಮತ್ತೊಂದು ಅದ್ಭುತ ಸ್ಮಾರ್ಟ್‌ಫೋನ್ ಸೇರಿಕೊಂಡಿದೆ.! ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶಿಯೋಮಿ ಅತಿ ನೂತನ "ಆಂಡ್ರಾಯ್ಡ್ ಒನ್" ಸ್ಮಾರ್ಟ್‌ಫೋನ್ 'ಎಂಐ ಎ1' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.!!
'ಆಂಡ್ರಾಯ್ಡ್ ಒನ್'ಮೂಲದ ಮೊದಲ ಸ್ಮಾರ್ಟ್‌ಫೋನ್ 'ಶಿಯೋಮಿ ಎಂಐ ಎ1' ಆಗಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 625 ಅಕ್ಟಾ-ಕೋರ್ ಪ್ರೊಸೆಸರ್ ಮೂಲಕ ಹೊರಬರುತ್ತಿದೆ.!! ಕಡಿಮೆ ಬೆಲೆಗೆ ಅತ್ಯಂತ ಯೋಗ್ಯ ಸ್ಮಾರ್ಟ್‌ಪೋನ್ ಇದಾಗಿದ್ದು, ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?
5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!

ಡುವಲ್ ಕ್ಯಾಮರಾ ಹೊಂದಿದೆ.!!
12 ಎಂಬಿ +12 ಎಂಬಿ ಡುವಲ್ ರಿಯರ್ ಕ್ಯಾಮೆರಾ ಮೂಲಕ 'ಶಿಯೋಮಿ ಎಂಐ ಎ1' ಹೊರಬರುತ್ತಿದೆ.!! ವೈಡ್ ಆಂಗಲ್ ಲೆನ್ಸ್, ಟೆಲಿ ಫೋಟೊ ಲೆನ್ಸ್ ಜತೆಗೆ 2ಎಕ್ಸ್ ಡಿಜಿಟಲ್ ಜೂಮ್ ಮತ್ತು 10 ಎಕ್ಸ್ ಆಪ್ಟಿಕಲ್ ಜೂಮ್ ಸಾಮರ್ಥ್ಯ ಕ್ಯಾಮೆರಾದಲ್ಲಿ ಇರಲಿದೆ. ಅದ್ಬುತ ಫೋಟೊಗಳನ್ನು ಸೆರೆಹಿಡಿಯಬಹುದು.!!

ಪ್ರೆಸೆಸರ್ ಯಾವುದು?
ಮೊದಲೇ ಹೇಳಿದಂತೆ 'ಶಿಯೋಮಿ ಎಂಐ ಎ1' ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 625 2.5GHz ಅಕ್ಟಾ-ಕೋರ್ ಪ್ರೊಸೆಸರ್ ಮೂಲಕ ಮಾರುಕಟ್ಟೆಗೆ ಕಾಲಿಡುತ್ತಿದೆ. ಜೊತೆಗೆ ಆಂಡ್ರಾಯ್ಡ್ 7.1.2 ಮೂಲಕ ಫೋನ್ ಅದ್ಬುತ ಕಾರ್ಯ ನಿರ್ವಹಣೆ ನೀಡಲಿದೆ!!

RAM ಮತ್ತು ROM!!
ಶಿಯೋಮಿ ಎಂಐ ಎ1' 4ಜಿಬಿ RAM ಮತ್ತು 64 ಜಿಬಿ ಇಂಟರ್‌ನಲ್ ಮೆಮೊರಿ ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ಹೆಚ್ಚಿಸಬಹುದಾಗಿದೆ.!! 4ಜಿಬಿ RAM ಮೂಲಕ 50 ಆಪ್‌ಗಳನ್ನು ಒಮ್ಮೆಲೆ ರನ್ ಮಾಡಿದರೂ ಸಹ ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗುವುದಿಲ್ಲ ಎಂದು ಶಿಯೋಮಿ ಹೇಳಿಕೊಂಡಿದೆ.!!


ಬ್ಯಾಟರಿ ಮತ್ತು ಬೆಲೆ!!
ಕಪ್ಪು, ಚಿನ್ನದ ಬಣ್ಣ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ಎಂಐ ಎ1 ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 3080 ಎಂಎಎಚ್ ಬ್ಯಾಟರಿ ಹೊಂದಿದೆ.!! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ₹ 14,999 ಆಗಿರಲಿದೆ.!!


Click it and Unblock the Notifications








