ಗೂಗಲ್ ತೆಕ್ಕೆಗೆ ಬೀಳಲಿದೆ HTC ಮೊಬೈಲ್ ಕಂಪೆನಿ?!

Written By:

ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲಲು ಹೆಣಗಾಡುತ್ತಿರುವ ಮೊಬೈಲ್ ಕಂಪೆನಿ ಹೆಚ್‌ಟಿಸಿ ಗೂಗಲ್ ತೆಕ್ಕೆಗೆ ಬೀಳಲಿದೆಯೇ? ಹೌದು ಎನ್ನುತ್ತಿವೆ ಮಾಧ್ಯಮ ವರದಿಗಳು!! ತೈವಾನ್ ಮೂಲದ ಮೊಬೈಲ್ ಕಂಪೆನಿ ಹೆಚ್‌ಟಿಸಿ ಮೊಬೈಲ್ ಕಂಪೆನಿಯನ್ನು ಗೂಗಲ್ ಸ್ವಾಧೀನಪಡಿಸಿಕೊಳ್ಳಲು ಆಲೋಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.!!

ಚೀನಾದ ಪತ್ರಿಕೆ "ಕಮರ್ಷಿಯಲ್ ಟೈಮ್ಸ್" ಪತ್ರಿಕೆ ಮತ್ತು ಫೋನರೆನಾ.ಕಾಂ ಈ ಬಗ್ಗೆ ವರದಿ ಮಾಡಿದ್ದು, ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸಿದ್ದ ಹೆಚ್‌ಟಿಸಿ ಕಂಪೆನಿಯನ್ನೇ ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಆಯ್ಕೆಯನ್ನು ಗೂಗಲ್ ಪರಿಗಣಿಸಿದೆ ಎಂದು ಕಮರ್ಷಿಯಲ್ ಟೈಮ್ಸ್ ಹೇಳಿದೆ.!

 ಗೂಗಲ್ ತೆಕ್ಕೆಗೆ ಬೀಳಲಿದೆ HTC ಮೊಬೈಲ್ ಕಂಪೆನಿ?!

ಇನ್ನು ಸಂಪೂರ್ಣವಾಗಿ ಹೆಚ್‌ಟಿಸಿ ಸ್ಮಾರ್ಟ್‌ಫೋನ್ ಘಟಕವನ್ನು ಖರೀದಿಸಲು ಗೂಗಲ್ ಯೋಜಿಸುತ್ತಿದೆ ಎಂದು ಫೋನರೆನಾ.ಕಾಂ ಹೇಳಿದ್ದು, ಆದರೆ, ಈ ಬಗ್ಗೆ ಗೂಗಲ್ ಮತ್ತು ಹೆಚ್‌ಟಿಸಿಯ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಇನ್ನು ಈ ಬಗ್ಗೆ ಎರಡೂ ಕಂಪೆನಿಗಳು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ನಿರಾಕರಿಸಿವೆ.!!

 ಗೂಗಲ್ ತೆಕ್ಕೆಗೆ ಬೀಳಲಿದೆ HTC ಮೊಬೈಲ್ ಕಂಪೆನಿ?!

ಹೆಚ್‌ಟಿಸಿ ಖರೀದಿಸುವ ಗೂಗಲ್‌ ಯೋಜನೆ ಬಹುತೇಕ ಕೊನೆಯ ಹಂತದಲ್ಲಿದ್ದು,, 2012 ರಲ್ಲಿ ಮೊಟೊರೊಲಾ ಕಂಪೆನಿಯನ್ನು 12.5 ಶತಕೋಟಿ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದ್ದ ಗೂಗಲ್‌ಗೆ ಇದು ಎರಡನೇ ಬಹುದೊಡ್ಡ ಸ್ವಾಧೀನವಾಗಲಿದ್ದು, ಮತ್ತೊಂದು ಬಹುರಾಷ್ಟ್ರೀಯ ಕಂಪೆನಿಯೊಂದು ಗೂಗಲ್‌ನ ಆಳ್ವಿಕೆಗೆ ಒಳಪಡಲಿದೆ.!!

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ಓದಿರಿ: ಜಿಯೋ ನಂತರ LTE ವೋಲ್ಟ್ ತಂದ ಎರಡನೇ ಟೆಲಿಕಾಂ!!..ಯಾವುದು ಗೊತ್ತಾ?

English summary
Google is reportedly in the final stages of acquiring all or part of HTC.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot