ಭಾರೀ ಸದ್ದು ಮಾಡಲಿವೆ ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳು.!

|

ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಯಾದ ಶಿಯೋಮಿ ಕಳೆದ ವರ್ಷ ಜುಲೈನಲ್ಲಿ 'ಮಿ ಮ್ಯಾಕ್ಸ್‌ 3' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಭಾರಿ ಸುದ್ದಿಯಾಗಿತ್ತು. ಇತ್ತೀಚಿಗೆ ರೆಡ್ಮಿ ನೋಡ್‌ 7 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಸಖತ್ ಸುದ್ದಿಯಲ್ಲಿರುವ ಶಿಯೋಮಿ, ಇದೀಗ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗುತ್ತಿದೆ.

ಭಾರೀ ಸದ್ದು ಮಾಡಲಿವೆ ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳು.!

ಹೌದು, ಜನಪ್ರಿಯ ಶಿಯೋಮಿ ಕಂಪನಿಯ 'ಮಿ ಮ್ಯಾಕ್ಸ್ 4' ಮತ್ತು 'ಮಿ ಮ್ಯಾಕ್ಸ್ 4 ಪ್ರೋ' ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ದವಾಗಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿಯು ತನ್ನ 'ಮಿ' ಸರಣಿಯಲ್ಲಿಯೇ ಗ್ರಾಹಕರಿಗೆ ಪರಿಚಯಿಸಲಾಗುವುದು ಎಂದು ಹೇಳಲಾಗುತ್ತಿದೆ. ನೂತನ ಫೀಚರ್ಸ್‌ಗಳನ್ನು ಈ ಎರಡು ಸ್ಮಾರ್ಟ್‌ಫೋನ್‌ ಹೊಂದಿರಲಿದ್ದು, ಗ್ರಾಹಕರ ನಿರೀಕ್ಷೆ ಹೆಚ್ಚಿಸುತ್ತಿವೆ ಎನ್ನಲಾಗುತ್ತಿದೆ.

ಭಾರೀ ಸದ್ದು ಮಾಡಲಿವೆ ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳು.!

ಬಜೆಟ್‌ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತದೆ ಎಂದು ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಶಿಯೋಮಿಯು ತನ್ನ ಮುಂಬರಲಿರುವ 'ಮಿ ಮ್ಯಾಕ್ಸ್ 4' ಮತ್ತು 'ಮಿ ಮ್ಯಾಕ್ಸ್ 4 ಪ್ರೋ ಸ್ಮಾರ್ಟ್‌ಫೋನ್‌ಗಳು ಸಹ ಮಧ್ಯಮ ಶ್ರೇಣಿಯ ದರದಲ್ಲಿಯೇ ಇರಲಿವೆ ಎಂದು ಹೇಳಲಾಗುತ್ತಿದೆ. ಹಾಗಾದರೇ ಶಿಯೋಮಿಯ 'ಮಿ ಮ್ಯಾಕ್ಸ್ 4' ಮತ್ತು 'ಮಿ ಮ್ಯಾಕ್ಸ್ 4 ಪ್ರೋ' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ತಿಳಿಯಲು ಮುಂದೆ ಓದಿರಿ.

ಮಿ ಮ್ಯಾಕ್ಸ್ 4

ಮಿ ಮ್ಯಾಕ್ಸ್ 4

ಶಿಯೋಮಿಯ ಕಂಪನಿಯ ಮುಂಬರಲಿರುವ 'ಮಿ ಮ್ಯಾಕ್ಸ್ 4' ಸ್ಮಾರ್ಟ್‌ಫೋನಿನ ಅತೀ ವಿಶೇಷವೆಂದರೆ ಅದರ ಡಿಸ್‌ಪ್ಲೇ. 7.2 ಇಂಚಿನ ದೊಡ್ಡ ಹೆಚ್‌ಡಿ ಡಿಸ್‌ಪ್ಲೇ ಯೊಂದಿಗೆ ಐದು ಪ್ಯಾನೆಲ್‌ವುಳ್ಳ ಗೊರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿರಲಿದೆ, ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಜೊತೆ ಆಂಡ್ರಾಯ್ಡ್ 9 ಆಪ್ರೇಟಿಂಗ್ ಸಿಸ್ಟಂ ಕಾರ್ಯಮಾಡಲಿದೆ. ಇನ್ನೂ ಕ್ಯಾಮೆರಾ 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರಲಿದೆ ಹಾಗೂ 5800mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಇರಲಿದೆ ಎಂದು ಹೇಳಲಾಗುತ್ತಿದೆ.

ಮಿ ಮ್ಯಾಕ್ಸ್ 4 ಪ್ರೋ

ಮಿ ಮ್ಯಾಕ್ಸ್ 4 ಪ್ರೋ

ಗ್ರಾಹಕರಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಶಿಯೋಮಿ ಮಿ ಮ್ಯಾಕ್ಸ್ 4 ಪ್ರೋ ಸ್ಮಾರ್ಟ್‌ಫೋನ್‌ ಇದೊಂದು ಫ್ಯಾಬಲೇಟ್ ಮಾದರಿಯಲ್ಲಿರಲಿದೆ. ಸೆಲ್ಫೀಗಾಗಿ 20 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ ಸೋನಿಯ IMX586 ಸೆನ್ಸಾರ್ ಹೊಂದಿದ 48 ಮೆಗಾಪಿಕ್ಸಲ್ ಸಾಮರ್ಥ್ಯದ ಅತ್ಯುತ್ತಮ ಕ್ಯಾಮೆರಾ ನೀಡಲಿದೆ. 960fps ಸ್ಲೋ ಮೋಷನ್ ವಿಡಿಯೊಗ್ರಾಫಿಗೆ ಅವಕಾಶ ಇದೆ. ಆಂಡ್ರಾಯ್ಡ್ 9 ನೊಂದಿಗೆ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಶಿಯೋಮಿ ಕಂಪನಿಯ 'ಮಿ ಮ್ಯಾಕ್ಸ್ 4' ಮತ್ತು 'ಮಿ ಮ್ಯಾಕ್ಸ್ 4 ಪ್ರೋ' ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳು ಭಾರಿ ನಿರೀಕ್ಷೆ ಮೂಡಿಸಿದ್ದು, ಈ ಸ್ಮಾರ್ಟ್‌ಫೋನ್‌ಗಳು ಒಟ್ಟು ಮೂರು ವೇರಿಯಂಟ್‌ಗಳಲ್ಲಿ ದೊರೆಯಲಿವೆ.(4GB RAM+64GB,ಅಥವಾ 6GB RAM+64GB, ಅಥವಾ 6GB RAM+128GB) 'ಮಿ ಮ್ಯಾಕ್ಸ್ 4' ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 16,900 ರೂ.ಗಳು. ಎಂದು ಅಂದಾಜಿಸಲಾಗಿದೆ.

ಲಾಂಚ್ ಯಾವಾಗ ?

ಲಾಂಚ್ ಯಾವಾಗ ?

ಬಹುನಿರೀಕ್ಷಿತ ಶಿಯೋಮಿಯ 'ಮಿ ಮ್ಯಾಕ್ಸ್ 4' ಮತ್ತು 'ಮಿ ಮ್ಯಾಕ್ಸ್ 4 ಪ್ರೋ' ಸ್ಮಾರ್ಟ್‌ಫೋನ್‌ಗಳು ಯಾವಾಗ ರಿಲೀಸ್ ಆಗಲಿವೆ ಎನ್ನುವುದನ್ನು ಕಂಪನಿ ಇನ್ನೂ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ ಈ ವರ್ಷದ ಮೊದಲಾರಂಭದಲ್ಲಿಯೇ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳಿವೆ ಎಂದು ಊಹಿಸಲಾಗುತ್ತಿದೆ.

Best Mobiles in India

English summary
xiaomi upcoming Mi Max 4 is expected to go official around the same time this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X