Subscribe to Gizbot

ಮಾರುಕಟ್ಟೆಗೆ ಶಿಯೋಮಿಯ ಟಾಪ್ ಎಂಡ್ ಸ್ಮಾರ್ಟ್ ಫೋನ್: ಆಪಲ್-ಒನ್‌ಪ್ಲಸ್‌ಗೆ ಭಯ.!

Posted By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಶಿಯೋಮಿ ಬಿಡುಗಡೆ ಮಾಡಿರುವ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೋ ಸ್ಮಾರ್ಟ್ ಫೋನಿನ ಹವಾ ಜೋರಾಗಿಯೇ ಇದೆ. ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುವುದನ್ನೇ ಅಭಿಮಾನಿಗಳು ಕಾಯುತ್ತಾ ಕುಳಿತ್ತಿದ್ದಾರೆ. ಇದೇ ಮಾದರಿಯಲ್ಲಿ ಶಿಯೋಮಿ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಅದೇ ಶಿಯೋಮಿ Mi Mix 2S ಸ್ಮಾರ್ಟ್ ಫೋನ್.

ಮಾರುಕಟ್ಟೆಗೆ ಶಿಯೋಮಿಯ ಟಾಪ್ ಎಂಡ್ ಸ್ಮಾರ್ಟ್ ಫೋನ್...!

ಶಿಯೋಮಿ Mi Mix 2S ಸ್ಮಾರ್ಟ್ ಪೋನ್ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೂ ದೊರೆತಿದೆ. ಈ ಹಿನ್ನಲೆಯಲ್ಲಿ ಶಿಯೋಮಿ Mi Mix 2S ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದು, ಶಿಯೋಮಿ ಟಾಪ್ ಎಂಡ್ ಫೋನ್ ಇದಾಗಲಿದೆ.

ಓದಿರಿ: ಜಿಯೋಗೆ ಸೆಡ್ಡು: ನೋಕಿಯಾ-ಏರ್‌ಟೆಲ್‌ ಒಪ್ಪಂದ: ಶಾಕಿಂಗ್ ಬೆಲೆಗೆ ನೋಕಿಯಾ 2 & ನೋಕಿಯಾ 3..!

ಶಿಯೋಮಿ Mi Mix 2S ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು ಮಾರುಕಟ್ಟೆಯಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಪ್ರೋಸೆಸರ್ ಆಗಿದೆ. ಅಲ್ಲದೇ ಇದರಲ್ಲಿ 3000mAh ಬ್ಯಾಟರಿಯನ್ನು ಸಹ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಇದಲ್ಲದೇ ಶಿಯೋಮಿ Mi Mix 2S ಆಂಡ್ರಾಯ್ಡ್ ಒರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿರಲಿದೆ. ಅಲದ್ಲದೇ ಮಾರುಕಟ್ಟೆಯ ಟ್ರೆಂಡ್ ಆದ 18:9 ಅನುಪಾತದ ಡಿಸ್ ಪ್ಲೇ ಇದಾಗಿರಲಿದೆ. ಇದರೊಂದಿಗೆ ಈ ಸ್ಮಾರ್ಟ್ ಫೋನ್ ಕ್ಯಾಮೆರಾ ಹೆಚ್ಚು ಸದ್ದು ಮಾಡುತ್ತಿದೆ.
ಮಾರುಕಟ್ಟೆಗೆ ಶಿಯೋಮಿಯ ಟಾಪ್ ಎಂಡ್ ಸ್ಮಾರ್ಟ್ ಫೋನ್...!

ಶಿಯೋಮಿ Mi Mix 2S ಸ್ಮಾರ್ಟ್ ಫೋನಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಸೋನಿ ಸೆನ್ಸಾರ್ ಇದರಲ್ಲಿದೆ. ಮಾರುಕಟ್ಟೆಯಲ್ಲಿ ಹುವಾವೆ ಬಳಕೆ ಮಾಡಿಕೊಳ್ಳುತ್ತಿರುವ ತಂತ್ರಜ್ಞಾನದ ಮಾದರಿಯಲ್ಲಿ ಶಿಯೋಮಿ ಸಹ ತನ್ನದೇ ಕೃತಕ ಬುದ್ಧಿಮತ್ತೆಯನ್ನು ಹೊಂದಿದೆ.

5.99 ಇಂಚಿನ ಪರದೆ, 8GB RAM ಮತ್ತು 256GB ಇಂಟರ್ನಲ್ ಮೆಮೊರಿಯೊಂದಿಗೆ ಹಿಂಭಾಗದಲ್ಲಿ 12MP ಡ್ಯುಯಲ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಅಲ್ಲದೇ ಬ್ರಜೆಲ್ ಲೈಸ್ ವಿನ್ಯಾಸ ದಿಂದ ಕೂಡಿದೆ.

English summary
Xiaomi Mi Mix 2S firmware files leaked; Snapdragon 845, AI-based camera in tow. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot