Subscribe to Gizbot

ಜಿಯೋಗೆ ಸೆಡ್ಡು: ನೋಕಿಯಾ-ಏರ್‌ಟೆಲ್‌ ಒಪ್ಪಂದ: ಶಾಕಿಂಗ್ ಬೆಲೆಗೆ ನೋಕಿಯಾ 2 & ನೋಕಿಯಾ 3..!

Written By:

ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು. HMD ಕಂಪನಿಯೂ ಈ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ನೋಕಿಯಾ ಟಾಪ್ ಟೆಲಿಕಾಂ ಕಂಪನಿ ಏರ್‌ಟೆಲ್‌ನೊಂದಿಗೆ ಹೊಸದೊಂದು ಒಪ್ಪಂದನವನ್ನು ಮಾಡಿಕೊಂಡಿದ್ದು, ನೋಕಿಯಾದ ಬೆಸ್ಟ್ ಪೋನ್ ಗಳ ಮೇಲೆ ಆಫರ್ ನೀಡಿದೆ.

 ನೋಕಿಯಾ-ಏರ್‌ಟೆಲ್‌ ಒಪ್ಪಂದ: ಶಾಕಿಂಗ್ ಬೆಲೆಗೆ ನೋಕಿಯಾ 2 & ನೋಕಿಯಾ 3..!

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋದೊಂದಿಗೆ ಸ್ಪರ್ಧೆಗೆ ನಿಂತಿರುವ ಏರ್‌ಟೆಲ್, ಜಿಯೋವನ್ನು ಮಣ್ಣಿಸಲು ಸಾಕಷ್ಟು ತಂತ್ರಗಳನ್ನು ಅನುಸರಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಏರ್‌ಟೆಲ್ ಖ್ಯಾತ ಮೊಬೈಲ್ ತಯಾರಿಕ ಕಂಪನಿ ನೋಕಿಯಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ನೋಕಿಯಾ 2 ಮತ್ತು ನೋಕಿಯಾ 3 ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ಕ್ಯಾಷ್ ಬ್ಯಾಕ್:

ಏರ್‌ಟೆಲ್ ಕ್ಯಾಷ್ ಬ್ಯಾಕ್:

ಜಿಯೋ ತನ್ನ ಬಳಕೆದಾರರಿಗೆ ಜಿವಿ ಫೋನ್ ಮೇಲೆ ರೂ.2200 ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದ ನಂತರದಲ್ಲಿ ಏರ್‌ಟೆಲ್ ಸಹ ತನ್ನ ಬಳಕೆದಾರರಿಗೆ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 2000 ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ ಎನ್ನಲಾಗಿದೆ.

ಬೆಸ್ಟ್ ಪ್ಲಾನ್:

ಬೆಸ್ಟ್ ಪ್ಲಾನ್:

ಇದಲ್ಲದೇ ನೋಕಿಯಾ 2 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಏರ್‌ಟೆಲ್ ಬೆಸ್ಟ್ ಆಫರ್ ನೀಡಿದ್ದು, ರೂ.169ಕ್ಕೆ ಪ್ರತಿ ದಿನ ಒಂದು GB ಡೇಟಾ ಸೇರಿದಂತೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು 28 ದಿನಗಳ ಅವಧಿಗೆ ನೀಡಿದೆ. ಇದರಿಂದಾಗಿ ಈ ಆಫರ್ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ನೀಡಲಿದೆ.

ಕ್ಯಾಷ್ ಬ್ಯಾಕ್ ಹೇಗೆ?

ಕ್ಯಾಷ್ ಬ್ಯಾಕ್ ಹೇಗೆ?

ನೋಕಿಯಾ 2 ಮತ್ತು ನೋಕಿಯಾ 3 ಖರೀದಿಸದ ಮೇಲೆ ಈ ಬೆಸ್ಟ್ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡರೆ ಮೊದಲ 18 ತಿಂಗಳ ನಂತರ ರೂ.500 ಕ್ಯಾಷ್ ಬ್ಯಾಕ್ ದೊರೆತರೆ, 36 ತಿಂಗಳ ನಂತರದಲ್ಲಿ ರೂ.1500 ಕ್ಯಾಷ್ ಬ್ಯಾಕ್ ದೊರೆಯಲಿದೆ. ಈ ಹಿನ್ನಲೆಯಲ್ಲಿ ಈ ಆಫರ್ ಬೆಸ್ಟ್ ಆಗಿದೆ.

ಬೆಲೆ:

ಬೆಲೆ:

ಈ ಪ್ಲಾನ್ ನಲ್ಲಿ ನೋಕಿಯಾ 2 ಮತ್ತು ನೋಕಿಯಾ 3 ಖರೀದಿ ಮಾಡಿದರೆ ರೂ.4999ಕ್ಕೆ ನೋಕಿಯಾ 2 ಮತ್ತು ರೂ.7499ಗೆ ನೋಕಿಯಾ 3 ಸ್ಮಾರ್ಟ್‌ಫೋನ್ ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಇಷ್ಟು ಕಡಿಮೆ ಬೆಲೆಗೆ ಇನ್ನೆಂದು ಲಭ್ಯವಿರುವುದಿಲ್ಲ.

ನೋಕಿಯಾ 2 ವಿಶೇಷತೆ:

ನೋಕಿಯಾ 2 ವಿಶೇಷತೆ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ (1280 x 720P) HD LCD ಡಿಸ್‌ಪ್ಲೇಯನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇದಕ್ಕಿದೆ. 1.3 GHz ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 212 ಪ್ರೋಸೆಸರ್ ನೊಂದಿಗೆ ಅಡ್ರಿನೋ 304 GPU ಕಾಣಬಹುದಾಗಿದ್ದು, 1 GB LPDDR3 RAM, 8 GB ಆಂತರಿಕ ಮೆಮೊರಿ, ಮೈಕ್ರೊ SD ಕಾರ್ಡ್‌ ಹಾಕುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶವಿರಲಿದೆ. ಆಂಡ್ರಾಯ್ಡ್ 7.1.1 (ನೌಗಾಟ್) ಆಂಡ್ರಾಯ್ಡ್ 8.0 ಗೆ ಅಪ್ಗ್ರೇಡ್ ಮಾಡಬಹುದಾಗಿದ್ದು, ಹಿಂಬದಿಯಲ್ಲಿ 5MP ಕ್ಯಾಮರಾ, ಮುಂಭಾಗದಲ್ಲಿಯೂ 5 MP ಕ್ಯಾಮರಾವನ್ನು ಕಾಣಬಹುದಾಗಿದೆ. 4100mAh ಬ್ಯಾಟರಿ ಇದೆ.

ನೋಕಿಯಾ 3 ವಿಶೇಷತೆ

ನೋಕಿಯಾ 3 ವಿಶೇಷತೆ

ನೋಕಿಯಾ 3 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ (1280 x 720P) HD ಡಿಸ್‌ಪ್ಲೇಯನ್ನು 2.5 D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ ಕಾಣಬಹುದಾಗಿದ್ದು, 1.3GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6737 64-ಬಿಟ್ ಪ್ರೊಸೆಸರ್, ಮಾಲಿ T720 MP1 GPU ನೊಂದಿಗೆ 2 GB RAM ಮತ್ತು 16 GB ಆಂತರಿಕ ಮೆಮೊರಿ ಯೊಂದಿಗೆ ಕಾಣಿಸಿಕೊಂಡಿದೆ. ಮೈಕ್ರೊ SD ಕಾರ್ಡ್‌ ಹಾಕುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶವಿರಲಿದೆ. ಆಂಡ್ರಾಯ್ಡ್ 7.1.1 (ನೌಗಾಟ್) ಆಂಡ್ರಾಯ್ಡ್ 8.0 ಗೆ ಅಪ್ಗ್ರೇಡ್ ಮಾಡಬಹುದಾಗಿದ್ದು, ಹಿಂಬದಿಯಲ್ಲಿ 5MP ಕ್ಯಾಮರಾ, ಮುಂಭಾಗದಲ್ಲಿಯೂ 5 MP ಕ್ಯಾಮರಾವನ್ನು ಕಾಣಬಹುದಾಗಿದೆ. 4100mAh ಬ್ಯಾಟರಿ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?

ಓದಿರಿ: ನೋಟ್ 5 ಮಾತ್ರವಲ್ಲ..! ಶಿಯೋಮಿಯಿಂದ ಮತ್ತೇ ಮೂರು ಫೋನ್‌...!

English summary
Airtel, HMD Global partner to offer Nokia 2 and Nokia 3 at effective price. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot