ಬಹುನಿರೀಕ್ಷಿತ ಶಿಯೋಮಿಯ ''MI ಮಿಕ್ಸ್ 3'' 5G ಸ್ಮಾರ್ಟ್‌ಫೋನ್ ರಿಲೀಸ್.!?

|

ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ '5G ಫೋಲ್ಡೆಬಲ್' ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಅದರ ಬೆನ್ನಲೇ ಮತ್ತೊಂದು 5G ಸ್ಮಾರ್ಟ್‌ಫೋನ್ ಬಿಡುಗಡೆಯ ಸೂಚನೆಯನ್ನು ಹೊರಹಾಕಿದ್ದು, ಈ ಹೊಸ ಸ್ಮಾರ್ಟ್‌ಫೋನ್ 5G ನೆಟವರ್ಕ್‌ನೊಂದಿಗೆ ಹಲವು ವಿಶೇಷ ಫೀಚರ್ಸ್‌ಗಳನ್ನು ಹೊತ್ತು ಬರಲಿದ್ದು, ಈ 5G ಫೋನ್ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಬಹುನಿರೀಕ್ಷಿತ ಶಿಯೋಮಿಯ ''MI ಮಿಕ್ಸ್ 3'' 5G ಸ್ಮಾರ್ಟ್‌ಫೋನ್ ರಿಲೀಸ್.!?

ಹೌದು, ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಶಿಯೋಮಿ ಕಂಪನಿಯು ತನ್ನ ಹೊಸ 'MI ಮಿಕ್ಸ್ 3' ಹೆಸರಿನ 5G ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದೆ. ಇದು ಶಿಯೋಮಿಯ ಮೊದಲ 5G ಸ್ಮಾರ್ಟ್‌ಫೋನ್ ಆಗಿದ್ದು, ಶೀಘ್ರದಲ್ಲಿಯೇ ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಓನಿಕ್ಸ್ ಬ್ಲ್ಯಾಕ್ ಮತ್ತು ಶಾಪೀರ್ ಬ್ಲೂ ಬಣ್ಣಗಳ ಆಯ್ಕೆ ಇರಲಿದೆ.

ಬಹುನಿರೀಕ್ಷಿತ ಶಿಯೋಮಿಯ ''MI ಮಿಕ್ಸ್ 3'' 5G ಸ್ಮಾರ್ಟ್‌ಫೋನ್ ರಿಲೀಸ್.!?

ಪ್ರಸಕ್ತ ಹೈ ಎಂಡ್ ಮೊಬೈಲ್‌ಗಳಲ್ಲಿ ಬಳಸುತ್ತಿರುವ 'ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್' ಅನ್ನು ಶಿಯೋಮಿಯ 'MI ಮಿಕ್ಸ್ 3' ಸ್ಮಾರ್ಟ್‌ಫೋನ್ ಹೊಂದಿದ್ದು, ಇದರೊಂದಿಗೆ X50 5G ಮೋಡೆಮ್ ಇರಲಿದೆ. ಇದರ 5G ನೆಟವರ್ಕ್ 6GHz ವೇಗದಲ್ಲಿರಲಿದ್ದು, 4G ಗಿಂತ ಹತ್ತು ಪಟ್ಟು ಅಧಿಕ ವೇಗ ಇದಾಗಿರಲಿದೆ. ಹಾಗಾದರೇ ಶಿಯೋಮಿಯ 'MI ಮಿಕ್ಸ್ 3' 5G ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ವಿಶೇಷ ಫೀಚರ್ಸ್‌ಗಳನ್ನು ನೋಡೋಣ ಬನ್ನಿರಿ.

ಶಿಯೋಮಿಯ ಮೊದಲ 5G ಸ್ಮಾರ್ಟ್‌ಫೋನ್

ಶಿಯೋಮಿಯ ಮೊದಲ 5G ಸ್ಮಾರ್ಟ್‌ಫೋನ್

MI ಮಿಕ್ಸ್ 3' ಸ್ಮಾರ್ಟ್‌ಫೋನ್ ಶಿಯೋಮಿಯ ಮೊದಲ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳಲಿದೆ. ಏಕೆಂದರೆ 5G ನೆಟವರ್ಕ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಮೊದಲು ಪ್ರವೇಶಿಸಲಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 855 ಚಿಪ್‌ ಸೆಟ್‌ ಜೊತೆಗೆ X50 5G ಮೋಡೆಮ್ ಒಳಗೊಂಡಿದ್ದು, 5G ನೆಟ್‌ವರ್ಕ್ 6 ಗಿಗಾಹರ್ಡ್ಸ್‌ ವೇಗವನ್ನು ಪಡೆದುಕೊಳ್ಳಲಿದೆ. 4Gಗಿಂತ ಹತ್ತು ಪಟ್ಟು ಹೆಚ್ಚು ವೇಗ ಆಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶಿಯೋಮಿಯ 'MI ಮಿಕ್ಸ್ 3' ಹೊಸ ಸ್ಮಾರ್ಟ್‌ಫೋನ್ 2340 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.39 ಇಂಚಿನ ಫುಲ್ ಹೆಚ್‌ಡಿ ಸ್ಯಾಮ್‌ಸಂಗ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಡಿಸ್‌ಪ್ಲೇಯ ಅನುಪಾತವು 19.5:9 ಆಗಿರಲಿದೆ. ವಿಶಾಲ ಡಿಸ್‌ಪ್ಲೇ ಆಗಿದ್ದು ನೋಡುಗರಿಗೆ ವೀಕ್ಷಣೆಯ ಅನುಭವ ನೀಡಲಿದೆ.

ಪ್ರೊಸೆಸರ್

ಪ್ರೊಸೆಸರ್

ಶಿಯೋಮಿಯ 'MI ಮಿಕ್ಸ್ 3' ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 855 ಚಿಪ್‌ ಸೆಟ್‌ ಹೊಂದಿದೆ ಹಾಗೂ 5G ನೆಟ್‌ವರ್ಕ್‌ಗಾಗಿ ಇದರೊಟ್ಟಿಗೆ X50 5G ಮೋಡೆಮ್ ಅನ್ನು ಒಳಗೊಂಡಿದೆ. MIUI 10 ಜೊತೆಗೆ ಅಂಡ್ರಾಯ್ಡ್ 9 ಪೈ ಓಎಸ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ

ಕ್ಯಾಮೆರಾ

12 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾದಲ್ಲಿ ಸೋನಿಯ IMX576 ಸೆನ್ಸಾರ್ ಬಳಸಲಾಗಿದೆ. 960 fps ಸಾಮರ್ಥ್ಯದಲ್ಲಿ ಸ್ಲೋ ಮೋಷನ್‌ನಲ್ಲಿ ವಿಡಿಯೋ ಸೆರೆಹಿಡಿಯುವ ಸೌಲಭ್ಯವನ್ನು ಒಳಗೊಂಡಿದೆ. ಸೆಲ್ಫಿಗಾಗಿ ಎರಡು ಕ್ಯಾಮೆರಾ ನೀಡಿದ್ದು, 24 ಮೆಗಾಪಿಕ್ಸಲ್ ಮತ್ತು 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ.

ಬ್ಯಾಟರಿ

ಬ್ಯಾಟರಿ

ಶಿಯೋಮಿಯ 'MI ಮಿಕ್ಸ್ 3' ಸ್ಮಾರ್ಟ್‌ಫೋನ್ 3800mAh ದೀರ್ಘ ಬಾಳಿಕೆಯ ಬ್ಯಾಟರಿಯನ್ನು ಒಳಗೊಂಡಿದ್ದು, ಒಂದು ದಿನ ನಿರಾಂತಕವಾಗಿ ಬಾಳಿಕೆ ಬರುತ್ತದೆ. ಇದರೊಂದಿಗೆ ಕ್ವಿಕ್ ಚಾರ್ಜರ್ ಸಹ ನೀಡಲಾಗಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲಿದೆ.

ಲಭ್ಯತೆ?

ಲಭ್ಯತೆ?

ಶಿಯೋಮಿಯ ಈ ಸ್ಮಾರ್ಟ್‌ಫೋನ್ ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆಗಲಿದ್ದು, ಭಾರತೀಯ ಮಾರುಕಟ್ಟೆಗೂ ಆದಷ್ಟು ಬೇಗ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.

Most Read Articles
Best Mobiles in India

English summary
Almost all the specs of the Mi MIX 3 standard and the Mi MIX 3 5G are similar, apart from some variations here and there. Unlike the Mi MIX 3, the Mi MIX 3 5G is powered by Qualcomm's latest Snapdragon 855 Mobile Platform with the Snapdragon X50 modem.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X