ಎಲ್ಲಾ ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ!

|

ಮೊಬೈಲ್ ಇಂಟರ್ಫೇಸ್ ಜಾಹೀರಾತುಗಳಿಂದ ತೊಂದರೆ ಅನುಭವಿಸುತ್ತಿದ್ದ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಮೊಬೈಲ್ ಇಂಟರ್ಫೇಸ್ ಜಾಹೀರಾತುಗಳಿಂದ ತನ್ನ ಬಳಕೆದಾರರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ಆಕ್ರೋಶ ಹೊರಬಿದ್ದ ನಂತರ ಶಿಯೋಮಿ ಇದೀಗ ಬಳಕೆದಾರರ ಸ್ನೇಹಿಯಾಗಲು ನಿರ್ಧರಿಸಿದೆ. ಅಂದರೆ ಬಳಕೆದಾರರಿಗೆ ಕಿರಿಕಿರಿಯಾಗುತ್ತಿರುವ ಜಾಹೀರಾತುಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವಂತಹ ಅಪ್‌ಡೇಟ್ ಒಂದನ್ನು ನೀಡಲು ಕಂಪೆನಿ ಮುಂದಾಗಿದೆ.

ಮೊಬೈಲ್ ಇಂಟರ್ಫೇಸ್

ಹೌದು, ಶಿಯೋಮಿಯ ಪ್ರವೇಶ ಮಟ್ಟದ, ಬಜೆಟ್ ಮತ್ತು ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಜಾಹೀರಾತುಗಳೊಂದಿಗೆ ರವಾನೆಯಾಗುತ್ತವೆ. ಇದರಿಂದ ಶಿಯೋಮಿ ಬಳಕೆದಾರರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಆದ್ದರಿಂದ, ಮೊಬೈಲ್ ಇಂಟರ್ಫೇಸ್ ಜಾಹೀರಾತುಗಳಿಂದ ತನ್ನ ಬಳಕೆದಾರರಿಗೆ ಕಿರಿಕಿರಿಯಾಗುತ್ತಿರುವ ಜಾಹೀರಾತುಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವಂತಹ ಅಪ್‌ಡೇಟ್ ಒಂದನ್ನು ನೀಡಲು ಕಂಪೆನಿ ಮುಂದಾಗಿದೆ. ಇದನ್ನು ನೂತನ MIUI 11 ಆವೃತ್ತಿಯ ಅಪ್‌ಡೇಟ್‌ನಲ್ಲಿ ಬಳಕೆದಾರರಿಗೆ ಪರಿಚಯಿಸಲಿದೆ.

Mi MIX 4 ಜೊತೆಗೆ ಬಿಡುಗಡೆ

MIUI 11 ಎಂಬುದು MIUIಯ ಮುಂದಿನ ಆವೃತ್ತಿಯಾಗಿದ್ದು, ಈ ತಿಂಗಳ ನಂತರ ಶಿಯೋಮಿ Mi MIX 4 ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶಿಯೋಮಿ ಇದೀಗ MIUI 11 ಒಳಗೆ ಹೊಸ ಅಪ್‌ಡೇಟ್ ಅನ್ನು ಪರಿಚಯಿಸಲಿದೆ ಎಂದು ದೃಢಪಡಿಸಿದೆ. ಅದು ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಾಹೀರಾತುಗಳನ್ನು ನಿಷ್ಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಶಿಯೋಮಿ ಹೊಸ ಕೈಪಿಡಿ ಗುಂಡಿಯನ್ನು ಪರಿಚಯಿಸಲಿದ್ದು, ಅದು ಸಕ್ರಿಯಗೊಂಡಾಗ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತದೆ.

2500 ರೂ. ಪಾವತಿಸಿ 'ಜಿಯೋ ಫೈಬರ್' ಖರೀದಿಸಿದರೆ ಏನೇನೆಲ್ಲಾ ಸಿಗಲಿದೆ?2500 ರೂ. ಪಾವತಿಸಿ 'ಜಿಯೋ ಫೈಬರ್' ಖರೀದಿಸಿದರೆ ಏನೇನೆಲ್ಲಾ ಸಿಗಲಿದೆ?

ಅತ್ಯಂತ ಉಪಯುಕ್ತ ವೈಶಿಷ್ಟ್ಯ

ಶಿಯೋಮಿ ಇದುವರೆಗೆ ಪರಿಚಯಿಸಿರುವ ಅತ್ಯಂತ ಉಪಯುಕ್ತ ವೈಶಿಷ್ಟ್ಯ ಇದಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇತ್ತೀಚೆಗೆ ಪ್ರಾರಂಭಿಸಲಾದ ರೆಡ್‌ಮಿ ಕೆ 20 ಸರಣಿಯು ಯಾವುದೇ ಜಾಹೀರಾತುಗಳನ್ನು ತೋರಿಸುವುದಿಲ್ಲ. ಶಿಯೋಮಿಯ ಅಪ್ಲಿಕೇಶನ್‌ನ ಬ್ರೌಸರ್, ಆಪ್ ಸ್ಟೋರ್ ಮತ್ತು ಇನ್ನಿತರ ಅಧಿಸೂಚನೆಗಳನ್ನು ಹೊರತುಪಡಿಸಿ, ಶಿಯೋಮಿ ರೆಡ್‌ಮಿ ಕೆ 20 ಸರಣಿಯಲ್ಲಿನ ಜಾಹೀರಾತುಗಳನ್ನು ‘ಪ್ರದರ್ಶನ ಜಾಹೀರಾತುಗಳು' ಎಂದು ಕರೆಯುತ್ತಿದೆ, ಅದು ಬಳಕೆದಾರರ ಅನುಭವವನ್ನು ಕೂಡ ಹಾಳು ಮಾಡುವುದಿಲ್ಲ.

ಸಾಕಷ್ಟು ಬದಲಾವಣೆಯನ್ನು ಕಾಣಲಿದೆ.

ಶಿಯೋಮಿ ಅಂತರ್ನಿರ್ಮಿತ MIUI ಆವೃತ್ತಿಯು ಅಪ್ಲಿಕೇಶನ್‌ಗಳ ಒಳಗೆ ಸಾಕಷ್ಟು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಸಿಸ್ಟಮ್ ಅಧಿಸೂಚನೆಗಳ ಮೂಲಕ ಜಾಹೀರಾತುಗಳು ಮತ್ತು ಸೆಟ್ಟಿಂಗ್ಸ್‌ಗಳ ಅಪ್ಲಿಕೇಶನ್‌ನಲ್ಲಿಯೂ ಸಹ ಬಳಕೆದಾರರು ಜಾಹೀರಾತುಗಳನ್ನು ಗಮನಿಸಿದ್ದರು. ಇದರಿಂದ ಅಂತರ್ಜಾಲದಲ್ಲಿ ಸಾಕಷ್ಟು ಆಕ್ರೋಶ ಎದುರಾಗಿತ್ತು. ಹಾಗಾಗಿ, ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿನ ಜಾಹೀರಾತುಗಳ ನೋಟವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದರಿಂದ MIUIಯ ಮುಂದಿನ ಆವೃತ್ತಿ MIUI 11 ಸಾಕಷ್ಟು ಬದಲಾವಣೆಯನ್ನು ಕಾಣಲಿದೆ.

ತಲೆತಿರುಗುವ ಈ ಕ್ರಿಯೇಟಿವ್ ಐಡಿಯಾಗಳು ನಮಗೇಕೆ ಬರೋದಿಲ್ಲ?

Best Mobiles in India

English summary
Xiaomi has now confirmed that it will soon introduce a switch inside MIUI that will allow users to disable ads on their smartphone and it might be introduced with forthcoming MIUI 11. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X