ಶಿಯೋಮಿ ಹೊಸ ಆಪ್ಡೇಟ್: ಹಳೇ ಸ್ಮಾರ್ಟ್ ಫೋನಿಗೆ ಹೊಸ ಜೀವ

By Precilla Dias
|

ನವೆಂಬರ್ ನಲ್ಲಿ ಶಿಯೋಮಿ ಬಿಡುಗಡೆ ಮಾಡಿದ್ದ MIUI 9 ಗ್ಲೊಬಲ್ ರಾಮ್ ಆಪ್ಡೇಟ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಇದರಲ್ಲಿ ಕೆಲವು ಬಗ್ ಗಳು ಇದ್ದ ಕಾರಣ ಶಿಯೋಮಿ ತನ್ನ ಹೊಸ UIಗೆ ಕೊಂಚ ಹೊಸ ಸ್ಪರ್ಶವನ್ನು ನೀಡಿ, MIUI 9.2 ಆಪ್ಡೇಟ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಇನ್ನಷ್ಟು ಹೊಸ ಸೇವೆಗಳು ಲಭ್ಯವಿದೆ. ಇದು ಶಿಯೋಮಿ ಫೋನ್ಗಳ ಬಳಕೆಯ ವಿಧಾನವನ್ನು ಬದಲಾಯಿಸಲಿದೆ.

ಶಿಯೋಮಿ ಹೊಸ ಆಪ್ಡೇಟ್: ಹಳೇ ಸ್ಮಾರ್ಟ್ ಫೋನಿಗೆ ಹೊಸ ಜೀವ


ಈ ಹೊಸ ಆಪ್ಡೇಟ್ ನಲ್ಲಿ ಸ್ಪ್ಲಿಟ್ ಸ್ಕ್ರಿನ್, ನ್ಯೂ ಗ್ಯಾಲೆರಿ ಆಪ್, ಕ್ಯಾಲೆಂಡರ್ ಕಾರ್ಡ್ಸ್, ಹೊಸ ನೋಟಿಫಿಕೇಷನ್ ಶೇಡ್ಸ್, Mi ಎಕ್ಸ್ ಪೋರ್, Mi ವಿಡಿಯೋ ಆಪ್. Mi ಡ್ರಾಪ್, ಆಪ್ ವಾಲ್ಟ್ ಸೇರಿದಂತೆ ಹಲವು ಹೊಸ ಆಯ್ಕೆಗಳನ್ನು ಶಿಯೋಮಿ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದು ಇತರೆ UIಗಳಿಗಿಂತೆ ಬೆಸ್ಟ್ ಎನ್ನಿಸಿಕೊಳ್ಳುವ ಆಯ್ಕೆಗಳು ಇವುಗಳಾಗಿದೆ.

ನೂತನ ಆಪ್ಡೇಟ್ ನಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತಿರುವುದು ನೋಟಿಫಿಕೇಷನ್ ಶೇಡ್, ಇದಲ್ಲದೇ ಆಂಡ್ರಾಯ್ಡ್ ನ್ಯಾಗಾ ಗಿಂತಲೂ ಮೇಲ್ಪಟ್ಟ ಆಂಡ್ರಾಯ್ಡ್ ಫೋನ್ ಗಳಿಗೆ ಶಿಯೋಮಿ MIUI 9.5 ಆಪ್ಡೇಟ್ ಅನ್ನು ಸಹ ನೀಡುತ್ತಿದೆ ಎನ್ನಲಾಗಿದೆ. ಈ ಆಪ್ಡೇಟ್ ನಲ್ಲಿ ಬಳಕೆದಾರರಿಗೆ ಸ್ಮಾರ್ಟ್ ಪೋನ್ ಅನ್ನು ಇನ್ನಷ್ಟು ಸ್ಮಾರ್ಟ್ ಆಗಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ.

ಓದಿರಿ: ಫ್ಲಾಷ್‌ಸೇಲ್‌ನಲ್ಲಿ Mi TV 4 ಮತ್ತು Mi TV 4A: ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ಮಾಹಿತಿ

ಈ ಹೊಸ ಆಪ್ಡೇಟ್ ನಲ್ಲಿ ಬಳಕೆದಾರರಿಗೆ ಹೊಸ ಮಾದರಿಯ ರಿಂಗ್ ಟೋನ್ ಗಳು, ನೂತನ ರೀತಿಯ ಲಾಕ್-ಆನ್ಲಾಕ್ ಮಾಡುವ ಅವಕಾಶವು ದೊರೆಯುತ್ತಿದೆ. ಈ ಹೊಸ ಆಪ್ಡೇಟ್ ನಿಂದಾಗಿ ಶಿಯೋಮಿ ಆಂಡ್ರಾಯ್ಡ್ ಫೋನ್ ಗಳು ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರಿಗೆ ಹೊಸ ಸ್ಮಾರ್ಟ್ ಫೋನ್ ಬಳಕೆಯ ಅನುಭವನ್ನು ನೀಡುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಯೋಮಿ ಬಳಕೆದಾರರಿಗೆ ಈ ಹೊಸ ಆಪ್ಡೇಟ್ ದೊರೆಯುತ್ತಿದ್ದು, ಆಂಡ್ರಾಯ್ಡ್ ನ್ಯಾಗಾ ಗಿಂತಲೂ ಕಳೆಗಿನವರಿಗೂ ಸಹ ಉತ್ತಮ ಬಳಕೆಗೆ ಈ MIUI 9 ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಬೇಡಿಕೆಯನ್ನು ಇದು ಹೆಚ್ಚು ಮಾಡಲಿದೆ.

Best Mobiles in India

English summary
Xiaomi MIUI 9.5 update brings New Notification Shade feature. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X