ಫ್ಲಾಷ್‌ಸೇಲ್‌ನಲ್ಲಿ Mi TV 4 ಮತ್ತು Mi TV 4A: ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ಮಾಹಿತಿ

|

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಲಾಂಚ್ ಮಾಡಿರುವ ಸ್ಮಾರ್ಟ್‌TVಗಳು ರೆಡ್‌ಮಿ ಸ್ಮಾರ್ಟ್‌ಫೋನ್‌ಗಿಂತಲೂ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಈ ಹಿನ್ನಲೆಯಲ್ಲಿ Mi TV 4 ಮತ್ತು Mi TV 4A ಗಳು ಮೊದಲ ಸೇಲ್‌ಗಳಲ್ಲಿ ಕೆಲವೇ ಕ್ಷಣಗಳಲ್ಲಿ ಸೋಲ್ಡ್‌ಔಟ್ ಆಗಿ ಇಂದು ಮತ್ತೊಮ್ಮೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಇಂದು 12 ಗಂಟೆಗೆ ಫ್ಲಾಷ್ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಮತ್ತು Mi.comನಲ್ಲಿ ಮಾರಾಟವಾಗುವ ಸ್ಮಾರ್ಟ್‌ TV ಗಳು ಕ್ಷಣ ಮಾತ್ರದಲ್ಲಿ ಸೇಲ್‌ ಆಗುವ ನಿರೀಕ್ಷೆ ಇದೆ.

ಫ್ಲಾಷ್‌ಸೇಲ್‌ನಲ್ಲಿ Mi TV 4 ಮತ್ತು Mi TV 4A: ಇಲ್ಲಿದೇ ಸೇಲ್ ಕುರಿತ ಮಾಹಿತಿ

Mi TV 4 ಶಿಯೋಮಿ ಬಿಡುಗಡೆ ಮಾಡಿರುವ ಟಾಪ್ ಎಂಡ್ ಆವೃತ್ತಿಯ ಸ್ಮಾರ್ಟ್‌TVಯಾಗಿದ್ದು, ಉತ್ತಮ ಫೀಚರ್ ಗಳನ್ನು ಒಳಗೊಂಡಿದೆ. ಇದೇ ಮಾದರಿಯಲ್ಲಿ ಸಾಮಾನ್ಯ ಬಳಕೆದಾರರ ಅನುಕೂಲಕ್ಕಾಗಿ ಬಜೆಟ್ ಬೆಲೆಯಲ್ಲಿ Mi TV 4A ದೊರೆಯುತ್ತಿದೆ. Mi TV 4A ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ TV ಗಳ ಕುರಿತದ ಮಾಹಿತಿ ಈ ಮುಂದಿನಂತಿದೆ.

Mi TV 4 ವಿಶೇಷತೆಗಳು:

Mi TV 4 ವಿಶೇಷತೆಗಳು:

ಮೊದಲ ಮೂರು ಸೇಲ್‌ಗಳಲ್ಲಿ ಔಟ್ ಆಫ್ ಸ್ಟಾಕ್ ಆಗಿರುವ Mi TV 4 ಇಂದು ಮತ್ತೆ ಫ್ಲಾಷ್‌ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, 55 ಇಂಚಿನ ಶಿಯೋಮಿ Mi TV 4 ರೂ.39,999ಕ್ಕೆ ಲಭ್ಯವಿದೆ, ವಿಶ್ವದ ಅತೀ ತಳುವಾದ LED TV ಎನ್ನವ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಮಾರ್ಟ್‌TV 4.9mm ನಷ್ಟು ತೆಳುವಾಗಿದ್ದು, 2GB RAM + 8GB ಇಂಟರ್ ನಲ್ ಮೆಮೊರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, USB-HDMI ಪೋರ್ಟ್ ಗಳನ್ನು ಹೊಂದಿದೆ.

32 ಇಂಚಿನ Mi TV 4A ವಿಶೇಷತೆಗಳು:

32 ಇಂಚಿನ Mi TV 4A ವಿಶೇಷತೆಗಳು:

ಒಟ್ಟು ಎರಡು ಮಾದರಿಯ ಶಿಯೋಮಿ ಸ್ಮಾರ್ಟ್‌ Mi TV 4A ಕಾಣಿಸಿಕೊಂಡಿದ್ದು, 32 ಇಂಚಿನ ಮತ್ತು 43 ಇಂಚಿನ ಆವೃತ್ತಿಗಳು ಮಾರಾಟಕ್ಕೆ ಲಭ್ಯವಿದೆ. 32 ಇಂಚಿನ Mi TV 4A ಟಿವಿಯಲ್ಲಿ HD ರೆಡಿ ಡಿಸ್‌ಪ್ಲೇ ಇದ್ದು, ಈ ಸ್ಮಾರ್ಟ್ ಟಿವಿಯಲ್ಲಿ ನೀವು 1.5GHz ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ ಮಾಲಿ T450 GPU ಸಹ ಅಳವಡಿಸಲಾಗಿದೆ. ಇದಲ್ಲದೇ ಟಿವಿಯಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಾಗಿದೆ.

43 ಇಂಚಿನ Mi TV 4A ವಿಶೇಷತೆಗಳು:

43 ಇಂಚಿನ Mi TV 4A ವಿಶೇಷತೆಗಳು:

43 ಇಂಚಿನ Mi TV 4A ಟಿವಿಯಲ್ಲಿ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಟಿವಿಯಲ್ಲಿ ನೀವು 1.5GHz ವೇಗದ ಪ್ರೋಸೆಸರ್ ಜೊತೆಗೆ ಮಾಲಿ T450 GPU ಸಹ ಅಳವಡಿಸಲಾಗಿದೆ. ಇದಲ್ಲದೇ ಆಂಡ್ರಾಯ್ಡ್ ಕಾರ್ಯಚರಣೆ ವ್ಯವಸ್ಥೆಯೊಂದಿಗೆ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಾಗಿದೆ.

ಉಚಿತ ವಿಡಿಯೋ ಕಂಟೆಂಟ್:

ಉಚಿತ ವಿಡಿಯೋ ಕಂಟೆಂಟ್:

ಶಿಯೋಮಿ ಸ್ಮಾರ್ಟ್‌ ಟಿವಿ ಯಲ್ಲಿ ನೀವು ಉಚಿತವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ವಿಡಿಯೋಗಳು ಲಭ್ಯವಿದೆ. ಇದಕ್ಕಾಗಿಯೆ ಹಾಟ್ ಸ್ಟಾರ್, ವೂಟ್, ಸೋನಿ ಲಿವ್, ಹಂಗಮ ಪ್ಲೇ, ಮತ್ತು ಎಎಲ್‌ಟಿ ಬಾಲಾಜಿ ಸೇರಿದಂತೆ ಹಲವು ವಿಡಿಯೋ ಸೇವೆಯನ್ನು ನೀಡುವ ಆಪ್ ಗಳೊಂದಿಗೆ ಶಿಯೋಮಿ ಒಪ್ಪಂದವನ್ನು ಮಾಡಿಕೊಂಡಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಬೆಲೆಗಳು:

ಬೆಲೆಗಳು:

55 ಇಂಚಿನ ಶಿಯೋಮಿ Mi TV 4 ರೂ.39,999ಕ್ಕೆ ಲಭ್ಯವಿದ್ದು, 32 ಇಂಚಿನ ಶಿಯೋಮಿ ಸ್ಮಾರ್ಟ್‌ Mi TV 4A ರೂ.13,999ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ 43 ಇಂಚಿನ ಸ್ಮಾರ್ಟ್‌ Mi TV 4A ರೂ.22,999ಕ್ಕೆ ಲಭ್ಯವಿರಲಿದೆ. ಈ ಎರಡು ಟಿವಿಗಳನ್ನು ಫ್ಲಿಪ್‌ಕಾರ್ಟ್‌ ಮತ್ತು Mi.comನಲ್ಲಿ ಬುಕ್ ಮಾಡಬಹುದಾಗಿದೆ.

Best Mobiles in India

English summary
The Mi TV 4 and Mi TV 4A models will be up for grabs in India once again on Friday. Flipkart and the official Xiaomi website will be hosting flash sales for the three Mi TV models in the country at 12pm IST on Friday. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X