ಮತ್ತೆ ಬೆಲೆ ಇಳಿಕೆ ಕಂಡ ಶಿಯೋಮಿ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್!

|

ಶಿಯೋಮಿ ಕಂಪನಿಯ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್‌ ಕಂಡಿದ್ದು, ಕಂಪನಿಯ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಎಂದೆ ಗುರುತಿಸಿಕೊಂಡಿದೆ. ಗ್ರಾಹಕರ ಖರೀದಿಯ ಲಿಸ್ಟ್‌ನಲ್ಲಿ ಸ್ಥಾನ ಪಡೆದಿರುವ 'ಪೊಕೊ ಎಫ್‌1' ಸ್ಮಾರ್ಟ್‌ಫೋನ್‌ ಕಳೆದ ಅಗಷ್ಟ್ ತಿಂಗಳಲ್ಲಿ ಲಾಂಚ್‌ ಆಗಿದ್ದು, ಬಿಡುಗಡೆ ಆದ ಮೇಲೆ ಒಂದು ಭಾರಿ ದರ ಕಡಿತವಾಗಿದೆ. ಇದೀಗ ಮತ್ತೆ ಬೆಲೆ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ತಂದಿದೆ.

ಮತ್ತೆ ಬೆಲೆ ಇಳಿಕೆ ಕಂಡ ಶಿಯೋಮಿ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್!

ಹೌದು, ಶಿಯೋಮಿಯ ಜನಪ್ರಿಯ ಪೊಕೊ ಎಫ್‌ 1 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಈ ಸ್ಮಾರ್ಟ್‌ಫೋನಿನ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಬೆಲೆಯು 20,999ರೂ.ಗಳಿಗೆ ಲಭ್ಯವಾಗಿದ್ದು, ಹಾಗೇ 6GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್ 19,999ರೂ,ಗಳಿಗೆ ದೊರೆಯಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ.

ಮತ್ತೆ ಬೆಲೆ ಇಳಿಕೆ ಕಂಡ ಶಿಯೋಮಿ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್!

ಅತ್ಯುತ್ತಮ RAM ಶಕ್ತಿಯೊಂದಿಗೆ ಬಲವಾದ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ ಅನ್ನು ಹೊಂದಿದ್ದು, ಮಲ್ಟಿಟಾಸ್ಕ್‌ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲದು. ವಿಶೇಷ ಫೀಚರ್ಸ್‌ಗಳಿಂದ ಗಮನಸೆಳೆದಿರುವ ಪೊಕೊ ಎಫ್‌ 1 ಸ್ಮಾರ್ಟ್‌ಫೋನ್ ಮೊದಲ ಫ್ಲ್ಯಾಶ್‌ ಸೇಲ್‌ನಲ್ಲಿ ಕಂಪನಿಗೆ ಭಾರೀ ಲಾಭ ತಂದುಕೊಟ್ಟಿತ್ತು. ಹಾಗಾದರೇ ಪೊಕೊ ಎಫ್‌ 1 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್‌

ಡಿಸೈನ್‌

ಪೊಕೊ ಎಫ್‌1 ಸ್ಮಾರ್ಟ್‌ಫೋನ್ ಆಕರ್ಷಕ ಡಿಸೈನ್‌ ಅನ್ನು ಹೊಂದಿದ್ದು, ಇದರ ಸುತ್ತಳತೆಯು 155.50 x 75.20 x 8.80 ಆಗಿದೆ. ಹಾಗೇ ಹಗುರವಾದ ರಚನೆಯಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ತೂಕವು 182ಗ್ರಾಂ ಆಗಿದೆ. ಬ್ಲೂ ಮತ್ತು ಗ್ರೇ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

6.18 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಪೊಕೊ ಎಫ್‌ 1 ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯಲ್ಲಿ 1080x2246 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಫೋನಿನ ಅನುಪಾತವು 18.7:9 ರಷ್ಟಿದ್ದು, ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ನೀಡಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

2.8GHz ಆಕ್ಟಾಕೋರ್‌, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಲ್ಟಿಟಾಸ್ಕ್‌ ಕೆಲಸಗಳನ್ನು ಸಲಿಸಾಗಿ ನಿಭಾಯಿಸುವ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್‌ 9 ಓಎಸ್‌ ಸಹ ಇದೆ.

ಮೆಮೊರಿ

ಮೆಮೊರಿ

ಈ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳನ್ನು ಹೊಂದಿದ್ದು, 6GB RAM ಮತ್ತು 128GB ಆರಂಭಿಕ ವೇರಿಯಂಟ್ ಆಗಿದೆ. 6GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್ ಮತ್ತು 8GB RAM ಮತ್ತು 256GB ಟಾಪ್‌ಎಂಡ್ ವೇರಿಯಂಟ್ ಮಾದರಿಗಳಲ್ಲಿಯೂ ದೊರೆಯಲಿದೆ.

ಕ್ಯಾಮೆರಾ

ಕ್ಯಾಮೆರಾ

ಹಿಂಬದಿಯಲ್ಲಿ ಡ್ಯುಯಲ್ ರೇರ್‌ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಸಾಮರ್ಥ್ಯದ ಉತ್ತಮ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

ಪೊಕೊ ಎಫ್‌ 1 ಸ್ಮಾರ್ಟ್‌ಫೋನ್‌ನಲ್ಲಿ 4000mAh ಸಾಮರ್ಥ್ಯದ ಬಲವಾದ ಬ್ಯಾಟರಿಯನ್ನು ನೀಡಲಾಗಿದ್ದು, ದೀರ್ಘಕಾಲದವರೆಗೂ ಬಾಳಕೆ ಒದಗಿಸುವ ಶಕ್ತಿಯನ್ನು ಪಡೆದಿದೆ. ಇದರೊಂದಿಗೆ 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ನೀಡಲಾಗಿದೆ.

ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ!

ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ!

ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಪ್ರತಿ ಸ್ಮಾರ್ಟ್‌ಫೋನಿನಲ್ಲೂ ವಾಟ್ಸಪ್‌ ಕಾಣಬಹುದಾಗಿದ್ದು, ಹೀಗಾಗಿ ಸಾಮಾನ್ಯ ಆಪ್‌ ಎಂಬಂತಾಗಿದೆ. ವಾಟ್ಸಪ್‌ ಟೆಕ್ಸ್ಟ್ ಮೆಸೆಜ್ ಜೊತೆಗೆ ಫೋಟೋ ಮತ್ತು ವಿಡಿಯೊ ಶೇರ್‌ ಮಾಡುವ ಆಯ್ಕೆ ಬಳಕೆದಾರರಿಗೆ ಬೆಸ್ಟ್ ಅನಿಸಿದ್ದು, ಹೆಚ್ಚಾಗಿ ವಾಟ್ಸಪ್ ಬಳಕೆಯನ್ನು ಹೆಚ್ಚಿಸಿದೆ. ಆದರೆ ನಿಮಗೆ ಗೊತ್ತಾ ವಾಟ್ಸಪ್ ನಿಮ್ಮ ಫೋನ್ ಮೆಮೊರಿ ಕಬಳಿಸುತ್ತದೆ.

ಹೌದು, ವಾಟ್ಸಪ್‌ ಬಳಕೆದಾರರು ಆಪ್‌ನಲ್ಲಿ ವೈಯಕ್ತಿಕ ಮೆಸೆಜ್‌ಗಳೊಂದಿಗೆ, ಅನೇಕ ಗ್ರೂಪ್‌ಗಳನ್ನು ಹೊಂದಿರುತ್ತಾರೆ. ತಮ್ಮ ಸ್ನೇಹಿತರೊಂದಿಗೆ ಫೋಟೋ, ವಿಡಿಯೊ ಸೇರಿದಂತೆ ಮಲ್ಟಿಮೀಡಿಯಾ ಫೈಲ್‌ಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಪೋಟೋ, ವಿಡಿಯೊಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದರಿಂದ ಸ್ಮಾರ್ಟ್‌ಫೋನ್‌ ಆಂತರಿಕ ಸ್ಟೋರೇಜ್ ಅನಗತ್ಯವಾಗಿ ತುಂಬಿ ಹೋಗುತ್ತದೆ.

ಕೆಲವೊಮ್ಮೆ ಒಂದೇ ಪೋಟೋ ಅಥವಾ ವಿಡಿಯೊ ಹಲವು ಬಾರಿ ಡೌನ್‌ಲೋಡ್ ಆಗಿರುತ್ತವೆ ಪೋನ್‌ ಮೆಮೊರಿ ತುಂಬಿಕೊಳ್ಳುತ್ತದೆ. ಆದರೆ ಕೇಲವು ಕ್ರಮಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ ಮೆಮೊರಿ ಅನಗತ್ಯ ತುಂಬುವುದನ್ನು ತಡೆಯಬಹುದು. ಹಾಗಾದರೇ ವಾಟ್ಸಪ್‌ ಆಪ್‌ನಿಂದ ಸ್ಮಾರ್ಟ್‌ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ ಬನ್ನಿರಿ.

ವಾಟ್ಸಪ್ ಕಂಟ್ರೋಲ್

ವಾಟ್ಸಪ್ ಕಂಟ್ರೋಲ್

ವಾಟ್ಸಪ್‌ ಆಪ್‌ನಲ್ಲಿ ಬರುವ ಫೋಟೊ ಮತ್ತು ವಿಡಿಯೊಗಳಿಂದ ಫೋನ್‌ ಮೆಮೊರಿ ಫುಲ್‌ ಆಗುವುದೆಂದು ವಾಟ್ಸಪ್‌ ಆಪ್‌ ಬಳಸುವುದನ್ನು ಬಿಡಲಂತು ಆಗದು. ಆದರೆ ಅನಗತ್ಯ ಡೇಟಾಗಳಿಂದ ಸ್ಮಾರ್ಟ್‌ಫೋನ್‌ ಗ್ಯಾಲರಿ ತುಂಬುವುದನ್ನು ತಡೆಯಬಹುದು. ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿದ ಮೇಲೂ ವಾಟ್ಸಪ್‌ನಲ್ಲಿ ಬರುವ ಎಲ್ಲ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ ಅಗತ್ಯವಿರುವ ಫೋಟೋಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.

ಈ ಹಂತಗಳನ್ನು ಅನುಸರಿಸಿ

ಈ ಹಂತಗಳನ್ನು ಅನುಸರಿಸಿ

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ
* ಅದನ್ನು ಆಫ್‌ ಮಾಡಿರಿ.

ಆಯ್ದ ನಂಬರ್‌ಗಳ ಅನಗತ್ಯ ಡೌನ್‌ಲೊಡ್ ತಡೆಯಲು

ಆಯ್ದ ನಂಬರ್‌ಗಳ ಅನಗತ್ಯ ಡೌನ್‌ಲೊಡ್ ತಡೆಯಲು

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ 'ಶೋ ನ್ಯೂಲಿ ಡೌನ್‌ಲೊಡೆಡ್ ಮೀಡಿಯಾ ಫ್ರಾಮ್‌ ದಿಸ್ ಚಾಟ್‌ ಇನ್ ಯೂವರ್ ಪೋನ್‌ ಗ್ಯಾಲರಿ' ಕಾಣಿಸುತ್ತದೆ?
* ನಂಬರ್ ಆಯ್ಕೆ ಮಾಡಿ.

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಲುಕ್‌ ಫಾರ್ ಸೇವ್ ಟು ಕ್ಯಾಮೆರಾ ರೋಲ್
* ಅದನ್ನು ಆಫ್‌ ಮಾಡಿರಿ.

Best Mobiles in India

English summary
Poco F1, the popular flagship smartphone from Xiomi, has received yet another price cut in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X