ನೋಕಿಯ ದಾಖಲೆ ಅಳಿಸಿದ್ದ ರೆಡ್‌ಮಿ 4 ಇಂದು ಮತ್ತೆ ಫ್ಲಾಷ್ ಸೇಲಿನಲ್ಲಿ ಲಭ್ಯ..!!
ರೆಡ್‌ಮಿ 4 ಸ್ಮಾರ್ಟ್‌ಫೋನ್ ಜುಲೈ 04 ರಂದು 12 ಗಂಟೆಗೆ ಅಮೆಜಾನ್ ಹಾಗೂ ಮಿ.ಕಾಮ್ ನಲ್ಲಿ ಮಾರಾಟವಾಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಶಿಯೋಮಿ ರೆಡ್‌ಮಿ 4 ಸ್ಮಾರ್ಟ್ ಇಂದು ಮತ್ತೆ ಅಮೆಜಾನ್ ಹಾಗೂ ಮಿ.ಕಾಮ್ ನಲ್ಲಿ ಮತ್ತೆ ಫ್ಲಾಷ್ ಸೇಲ್ ಕಾಣಿಸಿಕೊಳ್ಳಲಿದೆ.

ಓದಿರಿ: ಹೊಸ ಆಯ್ಕೆಗಳು ನೀವು ವಾಟ್ಸ್‌ಆಪ್ ಬಳಸುವ ವಿಧಾನವನ್ನು ಬದಲಾಯಿಸಲಿದೆ
ರೆಡ್‌ಮಿ 4 ಸ್ಮಾರ್ಟ್‌ಫೋನ್ ಜುಲೈ 04 ರಂದು 12 ಗಂಟೆಗೆ ಅಮೆಜಾನ್ ಹಾಗೂ ಮಿ.ಕಾಮ್ ನಲ್ಲಿ ಮಾರಾಟವಾಗಲಿದ್ದು, ಈಗಾಗಲೇ ಹಲವರು ಬಾರಿ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ರೆಡ್‌ಮಿ 4 ಮತ್ತೊಂದು ಸುತ್ತಿನ ಮಾರಾಟಕ್ಕೆ ಮುಂದಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 4 ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, 5 ಇಂಚಿನ HD (720x1280 p) ಡಿಸ್‌ಪ್ಲೇ ಇದೆ. ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಮಾಡಿಕೊಡಲಾಗಿದೆ.

ಆಕ್ಟಾ ಕೋರ್ ಪ್ರೋಸೆಸರ್:
ರೆಡ್‌ಮಿ 4 ಫೋನಿನಲ್ಲಿ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಲ್ಲಿ 4100mAh ಬ್ಯಾಟರಿಯೂ ಇದೆ.

ಮೂರು ಆವೃತ್ತಿಯಲ್ಲಿ ಲಭ್ಯ:
ಒಟ್ಟು ಮೂರು ಆವೃತ್ತಿಯಲ್ಲಿ ಶಿಯೋಮಿ ರೆಡ್‌ಮಿ 4 ದೊರೆಯಲಿದೆ. 2GB RAM ಮತ್ತು 16GB ಇಂಟರ್ನಲ್ ಮೆಮೊರಿ: ಬೆಲೆ ರೂ.6,999 , 3GB RAM ಮತ್ತು 32GB ಇಂಟರ್ನಲ್ ಮೆಮೊರಿ:ಬೆಲೆ ರೂ.8,999 ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ: ಬೆಲೆ ರೂ.10,999 ಆಗಿದೆ.
ರೆಡ್‌ಮಿ 4 ಹೇಗಿದೆ..?
ರೆಡ್‌ಮಿ 4 ಭಾರತದಲ್ಲಿ ಲಾಂಚ್ ಆದ ಸಂದರ್ಭದಲ್ಲಿ ಫೋನಿನ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡಲಾಗಿತ್ತು. ನೀವು ಈ ಪೋನ್ ಖರೀದಿಸುವ ಮುನ್ನ ಈ ವಿಡಿಯೋ ನೋಡಿ.


Click it and Unblock the Notifications