ಹೊಸ ಆಯ್ಕೆಗಳು ನೀವು ವಾಟ್ಸ್‌ಆಪ್ ಬಳಸುವ ವಿಧಾನವನ್ನು ಬದಲಾಯಿಸಲಿದೆ

ವಾಟ್ಸ್ಆಪ್ ಮತ್ತಷ್ಟು ಹೊಸದಾಗಿದೆ, ದಿನೇ ದಿನೇ ನೂತನ ಅಂಶಗಳನ್ನು ಸೇರಿಸಿಕೊಳ್ಳುತ್ತಿದೆ. ಸದ್ಯ ನೀಡಿರುವ ಆಂಡ್ರಾಯ್ಡ್ ಆಪ್‌ಡೇಟ್ ನಲ್ಲಿ ಎಮೋಜಿಗಳನ್ನು ಹುಡುಕುವುದು ಮತ್ತು ಟೆಕ್ಸ್ ಸ್ಟೈಲ್ ಅನ್ನು ಬದಲಾಯಿಸುವ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ

|

ವಿಶ್ವದಲ್ಲೇ ಅತೀ ಹೆಚ್ಚು ಬಳಕೆಯಾಗುತ್ತಿರುವ ಸೋಶಿಯಲ್ ಮೇಸೆಜಿಂಗ್ ಆಪ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಫೇಸ್ ಬುಕ್ ಓಡೆತನದ ವಾಟ್ಸ್ಆಪ್ ಮತ್ತಷ್ಟು ಹೊಸದಾಗಿದೆ, ದಿನೇ ದಿನೇ ನೂತನ ಅಂಶಗಳನ್ನು ಸೇರಿಸಿಕೊಳ್ಳುತ್ತಿದೆ. ಸದ್ಯ ನೀಡಿರುವ ಆಂಡ್ರಾಯ್ಡ್ ಆಪ್‌ಡೇಟ್ ನಲ್ಲಿ ಎಮೋಜಿಗಳನ್ನು ಹುಡುಕುವುದು ಮತ್ತು ಟೆಕ್ಸ್ ಸ್ಟೈಲ್ ಅನ್ನು ಬದಲಾಯಿಸುವ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ.

ಹೊಸ ಆಯ್ಕೆಗಳು ನೀವು ವಾಟ್ಸ್‌ಆಪ್ ಬಳಸುವ ವಿಧಾನವನ್ನು ಬದಲಾಯಿಸಲಿದೆ

ಓದಿರಿ: ಏರ್‌ಟೆಲ್, ಜಿಯೋದಲ್ಲೂ ಇಲ್ಲ: BSNL ನಿಂದ 8 ಪಟ್ಟು ಅಧಿಕ ಡೇಟಾ ಆಫರ್..!!

ಈ ಬಾರಿ ಆಪ್ಡೇಟ್ ನಲ್ಲಿ ವಾಟ್ಸ್‌ಆಪ್ ಹೊಸದಾಗಿ ಆಯ್ಕೆಗಳನ್ನು ನೀಡುವ ಬದಲಿಗೆ ಹಳೇ ಆಯ್ಕೆಗಳ ಬಳಕೆಯನ್ನು ಬದಲಾಯಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರಿಗೆ ಸುಲಭ ಮತ್ತು ಸರಳ ಮಾರ್ಗಗಳನ್ನು ತೋರಿಸಿಕೊಡಲು ಮುಂದಾಗಿದೆ. ಈ ಹಿಂದೆ ಕೆಲವೊಬ್ಬರಿಗೆ ಮಾತ್ರವೇ ತಿಳಿದಿದ್ದ ಆಯ್ಕೆಯನ್ನು ಎಲ್ಲಾರಿಗೂ ಮುಕ್ತಗೊಳಿಸಲು ಮುಂದಾಗಿದೆ. ಈ ಹೊಸ ಆಯ್ಕೆಗಳು ವಾಟ್ಸ್‌ಆಪ್ 2.17.148 ನಲ್ಲಿ ದೊರೆಯಲಿದೆ.

ಟೆಕ್ಸ್ಟ್ ಫಾಂಟ್ ಬದಲಾವಣೆ:

ಟೆಕ್ಸ್ಟ್ ಫಾಂಟ್ ಬದಲಾವಣೆ:

ವಾಟ್ಸ್ಆಪ್ ಚಾಟಿಂಗ್ ವೇಳೆಯಲ್ಲಿ ನೀವು ಬರೆಯುವ ಪದಗಳಲ್ಲಿರುವ ಅಕ್ಷರಗಳನ್ನು ಬೋಲ್ಡ್ ಮಾಡಬಹುದು, ಸ್ಕ್ರಾಚ್ ಮಾಡಬಹುದು, ಇಟಾಲಿಕ್ ಸ್ಟೈಲ್ ಅನ್ನು ನೀಡಬಹುದು. ಈ ಹಿಂದೆ ಇದಕ್ಕಾಗಿ ಕೆಲವು ಕೋಡ್ ಗಳನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ ಈಗ ನೀವು ಪದವನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು ಕಾಪಿ, ಪೇಸ್ಟ್ ಮಾದರಿಯಲ್ಲಿ ಬೋಲ್ಡ್, ಇಟಾಲಿಕ್, ಸ್ಕ್ರಾಚ್ ಆಯ್ಕೆಗಳು ಬರಲಿದೆ. ಆಯ್ಕೆ ಮಾಡಿಕೊಳ್ಳುವುದು ಸುಲಭ

ಎಮೋಜಿ ಕೀ ವರ್ಡ್:

ಎಮೋಜಿ ಕೀ ವರ್ಡ್:

ಇದೇ ಮಾದರಿಯಲ್ಲಿ ನೀವು ಯಾವುದಾರು ಎಮೋಜಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾದರೆ ಎಲ್ಲಾ ಎಮೋಜಿಗಳನ್ನು ಹುಡುಕಬೇಕಾಗಿತ್ತು, ಆದರೆ ನೀವು ಯಾವುದಾರು ಒಂದೇ ಎಮೋಜಿಯನ್ನು ಅವುಗಳ ಮಧ್ಯ ಹುಡುಕಲು ಎಮೋಜಿ ಕೀ ವರ್ಡ್ ಮೂಲಕ ಹುಡುಕುವ ಆಯ್ಕೆಯನ್ನು ನೀಡಿದೆ. ಈ ಮೂಲಕ ನಿಮಗೆ ಬೇಕಾದ ಎಮೋಜಿಯನ್ನು ಕೀ ವರ್ಡ್ ನೀಡಿ ಹುಡುಕಬಹುದಾಗಿದೆ.

ಎಲ್ಲಾ ಮಾದರಿಯ ಫೈಲ್‌ಗಳನ್ನು ಶೇರ್ ಮಾಡಬಹುದು:

ಎಲ್ಲಾ ಮಾದರಿಯ ಫೈಲ್‌ಗಳನ್ನು ಶೇರ್ ಮಾಡಬಹುದು:

ಈ ಬಾರಿಯ ಆಪ್ಡೇಟ್ ನಲ್ಲಿ ಆಂಡ್ರಾಯ್ಡ್ ನಲ್ಲಿ ವಾಟ್ಸ್ಆಪ್ ಬಳಕೆದಾರರು ಎಲ್ಲಾ ಮಾದರಿಯ ಫೈಲ್‌ಗಳನ್ನು ಶೇರ್ ಮಾಡಬಹುದಾಗಿದೆ. ಎಂಪಿ3 ಸೇರಿದಂತೆ ಎಲ್ಲಾ ಡಾಕ್ಯುಮೆಂಟ್ ಗಳನ್ನು ಶೇರ್ ಮಾಡಲು ಬಳಕೆದಾರರಿಗೆ ಅವಕಾಶವನ್ನು ನೀಡಿದೆ.

Best Mobiles in India

Read more about:
English summary
WhatsApp on Android has made it easier for users to apply text font styles, and also search for emojis in the latest version of its app. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X