ಶಿಯೋಮಿ ರೆಡ್ ಮಿ 4 ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

|

ಶಿಯೋಮಿಯು ತನ್ನ ಹೊಸ ಸ್ಮಾರ್ಟ್ ಫೋನ್ ರೆಡ್ ಮಿ 4 ಅನ್ನು ಬಿಡುಗಡೆಗೊಳಿಸುವ ಬಗ್ಗೆ ತಿಳಿಸಿದೆ. ಆಗಷ್ಟಿನಲ್ಲಿ ರೆಡ್ ಮಿ ನೋಟ್ 4 ಜೊತೆಗೆ ಬಿಡುಗಡೆಯಾಗಬೇಕಿದ್ದ ರೆಡ್ ಮಿ 4 ಅಂದು ಬಿಡುಗಡೆಯಾಗಿರಲಿಲ್ಲ.

ಶಿಯೋಮಿ ರೆಡ್ ಮಿ 4 ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಈ ಬಜೆಟ್ ಸ್ಮಾರ್ಟ್ ಫೋನ್ ಬಗ್ಗೆ ಕೇಳುತ್ತಿರುವುದು ಇದೇ ಮೊದಲಲ್ಲ. ಶಿಯೋಮಿ ರೆಡ್ ಮಿ 4 ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದೆ, ಕೊನೆಗೂ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿದೆ.

ಓದಿರಿ: ವೊಡಾಫೋನ್ ಆಫರ್: 297 ರೂಗೆ 3GB 3G/4G ಡಾಟಾ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು

ಪೂರ್ವದ ಆ್ಯಪಲ್ ತನ್ನ ವ್ಯೀಬೋ ಪೋಸ್ಟಿನಲ್ಲಿ ಬಿಡುಗಡೆಗೊಳಿಸಿರುವ ಟೀಸರ್ ಚಿತ್ರದಲ್ಲಿ ಈ ಹೊಸ ಸ್ಮಾರ್ಟ್ ಫೋನಿನ ಬಿಡುಗಡೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ತಿಳಿಸಿದೆ. ಈ ಸ್ಮಾರ್ಟ್ ಫೋನ್ ನವೆಂಬರ್ 4ರಂದು ನಾಲ್ಕು ಘಂಟೆಗೆ ಬಿಡುಗಡೆಯಾಗಲಿದೆ.
ಓದಿರಿ: ಏರ್‌ಟೆಲ್‌ ಬಳಕೆದಾರರು ಪ್ರತಿ ತಿಂಗಳು 5GB ಉಚಿತ ಡಾಟಾ ಪಡೆಯುವುದು ಹೇಗೆ?

ರೆಡ್ ಮಿ 4 ಜೊತೆಗೆ ರೆಡ್ ಮಿ 4ಎ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ ಫೋನ್ ಬಗ್ಗೆ ಸೋರಿಕೆಯಾಗಿರುವ ಮಾಹಿತಿಗಳು ಇಲ್ಲಿವೆ.

5 ಇಂಚಿನ ಫುಲ್ ಹೆಚ್.ಡಿ ಪರದೆ.

5 ಇಂಚಿನ ಫುಲ್ ಹೆಚ್.ಡಿ ಪರದೆ.

ಎಲ್ಲಾ ಗಾಳಿ ಸುದ್ದಿಗಳ ಪ್ರಕಾರ ರೆಡ್ ಮಿ 4ರಲ್ಲಿ 5 ಇಂಚಿನ 1080 ಪಿ ಪರದೆಯಿರಲಿದೆ, ಹಿಂದಿನ ರೆಡ್ ಮಿ 3ಎಸ್ ನಲ್ಲಿದ್ದಂತೆ.

ಸ್ನಾಪ್ ಡ್ರಾಗನ್ 625 ಎಸ್.ಒ.ಸಿ ಮತ್ತು 3ಜಿಬಿ ರ್ಯಾಮ್.

ಸ್ನಾಪ್ ಡ್ರಾಗನ್ 625 ಎಸ್.ಒ.ಸಿ ಮತ್ತು 3ಜಿಬಿ ರ್ಯಾಮ್.

ಶಿಯೋಮಿ ರೆಡ್ ಮಿ 4 ಫೋನಿನಲ್ಲಿ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 625 ಚಿಪ್ ಇರಲಿದೆ. ಇದು ಆಕ್ಟಾ ಕೋರ್ ಪ್ರೊಸೆಸರ್, ಎಲ್ಲಾ ಕೋರ್ ಗಳಲ್ಲೂ 1.4GHz ಇರಲಿದೆ.

ಕೆಲವು ಗಾಳಿ ಸುದ್ದಿಗಳ ಪ್ರಕಾರ ಇದರಲ್ಲಿ ಹೆಲಿಯೋ ಪಿ10 ಚಿಪ್ ಇರಲಿದೆ. ಭಾರತದಲ್ಲಿ ಮೀಡಿಯಾಟೆಕ್ ಚಿಪ್ ಬದಲು ಸ್ನಾಪ್ ಡ್ರಾಗನ್ ಪ್ರೊಸೆಸರ್ ಇರುತ್ತದೆಂದು ನಮ್ಮ ನಿರೀಕ್ಷೆ.

13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

ರೆಡ್ ಮಿ 3ಎಸ್ ನಲ್ಲಿದ್ದಂತೆ ರೆಡ್ ಮಿ 4 ನಲ್ಲಿ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂಬದಿಯ ಕ್ಯಾಮೆರಾದ ಜೊತೆಗೆ ಸಿಂಗಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4100 ಎಂ.ಎ.ಹೆಚ್ ಬ್ಯಾಟರಿ.

4100 ಎಂ.ಎ.ಹೆಚ್ ಬ್ಯಾಟರಿ.

ಶಿಯೋಮಿ ಕಳೆದ ವರ್ಷ ಬಿಡುಗಡೆಗೊಳಿಸಿದ ಎಲ್ಲಾ ಫೋನುಗಳಲ್ಲಿದ್ದಂತೆ ಹೊಸ ರೆಡ್ ಮಿಯಲ್ಲೂ 4100 ಎಂ.ಎ.ಹೆಚ್ ಬ್ಯಾಟರಿ ಇರಲಿದೆ. ರೆಡ್ ಮಿ 4 ಫೋನು 8.9 ಎಂಎಂ ದಪ್ಪವಿರುತ್ತದೆ ಮತ್ತು ಗ್ರೆ, ಸಿಲ್ವರ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಶಿಯೋಮಿ ರೆಡ್ ಮಿ 4ಎ ಕೂಡ ನಿರೀಕ್ಷೆಯಲ್ಲಿದೆ.

ಶಿಯೋಮಿ ರೆಡ್ ಮಿ 4ಎ ಕೂಡ ನಿರೀಕ್ಷೆಯಲ್ಲಿದೆ.

ಮೊದಲೇ ಹೇಳಿದಂತೆ, ರೆಡ್ ಮಿ 4ಎ ಕೂಡ ಬಿಡುಗಡೆಯಾಗಬಹುದು, ಇದರಲ್ಲೂ 5ಇಂಚಿನ ಪರದೆಯಿರಲಿದೆ, ಆದರದು 720 ಪಿ ರೆಸೊಲ್ಯೂಷನ್ ಹೊಂದಿರಲಿದೆ. ಈ ಫೋನಿನಲ್ಲಿ ಸ್ನಾಪ್ ಡ್ರಾಗನ್ 425 ಚಿಪ್ ಸೆಟ್, 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇರಲಿದೆ. ಇದರಲ್ಲಿ 3030 ಎಂ.ಎ.ಹೆಚ್ ಬ್ಯಾಟರಿ ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Xiaomi Redmi 4 is the upcoming smartphone from the Chinese tech giant and the company has teased the smartphone on Weibo along with the launch details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X