Subscribe to Gizbot

ಏರ್‌ಟೆಲ್‌ ಬಳಕೆದಾರರು ಪ್ರತಿ ತಿಂಗಳು 5GB ಉಚಿತ ಡಾಟಾ ಪಡೆಯುವುದು ಹೇಗೆ?

Written By:

ಭಾರತದ ಟೆಲಿಕಾಂ ಕಂಪನಿಗಳ ನಡುವೆ ಟ್ಯಾರಿಫ್‌ವಾರ್(TariffWar) ಶುರುವಾಗಿ ಈಗಾಗಲೇ ಎರಡು ತಿಂಗಳು ಮುಗಿಯುತ್ತಿದೆ. ರಿಲಾಯನ್ಸ್ ಜಿಯೋ, ಭಾರತಿ ಏರ್‌ಟೆಲ್‌ ಹಲವು ಆರಂಭಿಕ ಹಂತದ ಟ್ಯಾರಿಫ್ ಪ್ಲಾನ್‌ಗಳನ್ನು ತಮ್ಮ ಪ್ರೀಪೇಡ್‌ ಬಳಕೆದಾರರಿಗೆ ನೀಡಿವೆ. ಆದರೆ ಈಗ ಟೆಲಿಕಾಂ ದೈತ್ಯ ಏರ್‌ಟೆಲ್‌ ತನ್ನ ಡಿಜಿಟಲ್ ಟಿವಿ, ಬ್ರಾಡ್‌ಬ್ಯಾಂಡ್ ಮತ್ತು ಪೋಸ್ಟ್‌ಪೇಡ್ ಬಳಕೆದಾರರಿಗೆ ಹೊಸ ರೀತಿಯ ಸೇವೆ ನೀಡಲು ಮುಂದಾಗಿದೆ.

ಏರ್‌ಟೆಲ್‌ ಭಾರತದಲ್ಲಿ ಅತ್ಯುತ್ತಮ ನೆಟ್‌ವರ್ಕ್‌ ಎಂದೇ ಹೆಸರಾಗಿದೆ. ಅಲ್ಲದೇ ಪ್ರೀಪೇಡ್‌ ಗ್ರಾಹಕರು ಉಚಿತ ಡಾಟಾ ಪಡೆಯುವ ಹಲವು ಪ್ಲಾನ್‌ಗಳನ್ನು ಸಹ ಜಿಯೋಗೆ ಸ್ಪರ್ಧೆ ನೀಡಲು ಪರಿಚಯಿಸಿತ್ತು.

ರಿಲಾಯನ್ಸ್ ಜಿಯೋಗಿಂತಲೂ ಏರ್‌ಟೆಲ್‌ ಉತ್ತಮ: 5 ಕಾರಣಗಳು

ಏರ್‌ಟೆಲ್‌ ಟೆಲಿಕಾಂ ಆಪರೇಟರ್ ಇತ್ತೀಚೆಗೆ 'myHome Rewards' ಪ್ಲಾನ್‌ಗಳನ್ನು ಏರ್‌ಟೆಲ್‌ ಡಿಟಿಎಚ್, ಬ್ರಾಡ್‌ಬ್ಯಾಂಡ್, ಮತ್ತು ಪೋಸ್ಟ್‌ಪೇಡ್ ಬಳಕೆದಾರರಿಗೆ ನೀಡಿತ್ತು. ಈ ಆಫರ್‌ನೊಂದಿಗೆ ಏರ್‌ಟೆಲ್‌ ಬಳಕೆದಾರರು ಪ್ರತಿ ತಿಂಗಳು 5GB ಹೆಚ್ಚುವರಿ ಡಾಟಾವನ್ನು ತಮ್ಮ ಖಾತೆಗೆ ಉಚಿತವಾಗಿ ಪಡೆಯಬಹುದಾಗಿದೆ.

ಇಂದಿನ ಲೇಖನದಲ್ಲಿ ಏರ್‌ಟೆಲ್‌(Airtel) ಡಿಟಿಎಚ್, ಬ್ರಾಡ್‌ಬ್ಯಾಂಡ್ ಮತ್ತು ಪೋಸ್ಟ್‌ಪೇಡ್ ಬಳಕೆದಾರರು ಪ್ರತಿ ತಿಂಗಳು ತಮ್ಮ ಖಾತೆಗೆ ಉಚಿತವಾಗಿ 5GB ಡಾಟಾವನ್ನು ಹೆಚ್ಚುವರಿ ಆಗಿ ಪಡೆಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಖಾತೆಯೊಂದಿಗೆ ಲಾಗಿನ್ ಆಗಿ

ನಿಮ್ಮ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಖಾತೆಯೊಂದಿಗೆ ಲಾಗಿನ್ ಆಗಿ

ಏರ್‌ಟೆಲ್‌ ಡಿಟಿಎಚ್, ಬ್ರಾಡ್‌ಬ್ಯಾಂಡ್ ಮತ್ತು ಪೋಸ್ಟ್‌ಪೇಡ್ ಕನೆಕ್ಷನ್‌ಗೆ 'myHome Rewards' ಪಡೆಯಲು, ಎಲ್ಲಾ ಬಳಕೆದಾರರು 'ಮೈಏರ್‌ಟೆಲ್' ಆಪ್‌ಗೆ ಹೋಗಿ ತಮ್ಮ ಏರ್‌ಟೆಲ್‌ ಖಾತೆಗೆ ಲಾಗಿನ್‌ ಆಗಿ.

 ಏರ್‌ಟೆಲ್‌ ಪೋಸ್ಟ್‌ಪೇಡ್ ಮತ್ತು ಡಿಜಿಟಲ್ ಟಿವಿ ಖಾತೆ ಆಡ್‌ ಮಾಡಿ

ಏರ್‌ಟೆಲ್‌ ಪೋಸ್ಟ್‌ಪೇಡ್ ಮತ್ತು ಡಿಜಿಟಲ್ ಟಿವಿ ಖಾತೆ ಆಡ್‌ ಮಾಡಿ

'ಮೈಏರ್‌ಟೆಲ್‌' ಆಪ್‌ಗೆ ಲಾಗಿನ್ ಆದ ನಂತರ ಬಳಕೆದಾರರು ಸಿಂಪಲ್‌ ಆಗಿ ತಮ್ಮ ಏರ್‌ಟೆಲ್‌ ಪೋಸ್ಟ್‌ಪೇಡ್ ಅಥವಾ ಡಿಟಿಎಚ್ ಖಾತೆಗೆ ತಮ್ಮ ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಿ.

ಖಾಯಂಗೊಳಿಸಿ ಮತ್ತು ನಿಮ್ಮ ಬೇಡಿಕೆ ಅನ್ನು ಎಸ್‌ಎಂಎಸ್‌ ಮೂಲಕ ದೃಢೀಕರಿಸಿ

ಖಾಯಂಗೊಳಿಸಿ ಮತ್ತು ನಿಮ್ಮ ಬೇಡಿಕೆ ಅನ್ನು ಎಸ್‌ಎಂಎಸ್‌ ಮೂಲಕ ದೃಢೀಕರಿಸಿ

ಒಂದು ವೇಳೆ ಖಾತೆ ಹೊಂದಿಲ್ಲದಿದ್ದಲ್ಲಿ, ಸುಲಭವಾಗಿ ಗ್ರಾಹಕರ ಸಹಾಯವಾಣಿ ಅನ್ನು ಸಂಪರ್ಕಿಸಿ. ನಂತರ ನಿಮ್ಮ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ನಿಂದ ಲಾಗಿನ್‌ ಆದ ನಂತರದಲ್ಲಿ, "myHome Rewards' ಪ್ಲಾನ್‌ಗಾಗಿ ವಿನಂತಿಸಿ. ನಂತರ ಬಳಕೆದಾರರು ಖಾಯಂಗೊಳಸಿ ಮತ್ತು ಎಸ್‌ಎಂಎಸ್‌ ಮೂಲಕ ವಿನಂತಿ ಧೃಡೀಕರಿಸಿ.

ಉಚಿತ 5GB ಡಾಟಾ ರೀವಾರ್ಡ್ ಎಂಜಾಯ್‌ ಮಾಡಿ

ಉಚಿತ 5GB ಡಾಟಾ ರೀವಾರ್ಡ್ ಎಂಜಾಯ್‌ ಮಾಡಿ

ಪ್ಲಾನ್ ಧೃಡೀಕರಣಗೊಂಡ ನಂತರ, ಬಳಕೆದಾರರು 5GB ಹೆಚ್ಚುವರಿ ಡಾಟಾವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. ಅಲ್ಲದೇ ಯಾವುದೇ ಡಾಟಾ ನಿರ್ಬಂಧನೆ ಬ್ರೌಸ್ ಮಾಡುವಾಗ ಇರುವುದಿಲ್ಲ.

"myHome Rewards' ಆಫರ್ ಲಿಮಿಟೇಶನ್

#1 ಪ್ರೀಪೇಡ್ ಬಳಕೆದಾರರು ಈ ಪ್ಲಾನ್‌ ಹೊಂದಲು ಸಾಧ್ಯವಿಲ್ಲ.
#2 ಪ್ಲಾನ್‌ ಉತ್ತಮವಾಗಿ ವರ್ಕ್‌ ಆಗಲು ಆಕ್ಟಿವೇಶನ್ ಕಡ್ಡಾಯ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Effect: Airtel DTH, Broadband and Postpaid Users Can Avail Free 5GB Additional Data. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot