ಬದಲಾದ ರೆಡ್‌ಮಿ 4Aನಲ್ಲಿ 3GB RAM/32GB ROM: ಬೆಲೆ ಎಷ್ಟು..?
ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳು ನಷ್ಟದ ಹಾದಿಹಿಡಿದಿರುವ ಸಂದರ್ಭದಲ್ಲಿ ನೂತನ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಿದೆ. ಅದೇ ರೆಡ್ ಮಿ 4 ನ್ಯೂ.
ಶಿಯೋಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರುವ ಲಕ್ಷಣಗಳು ಗೋಚರವಾಗುತ್ತಿದೆ. ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳು ನಷ್ಟದ ಹಾದಿಹಿಡಿದಿರುವ ಸಂದರ್ಭದಲ್ಲಿ ನೂತನ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಿದೆ. ಅದೇ ರೆಡ್ ಮಿ 4 ನ್ಯೂ.
ಓದಿರಿ: ಭಾರತೀಯರ ದೇಶಪ್ರೇಮಕ್ಕೆ ಬೆಲೆ ತೆತ್ತ ವೀವೊ & ಒಪ್ಪೋ: ಭಾರೀ ನಷ್ಟಕ್ಕೆ ಗುರಿಯಾದ ಚೀನಾ ಕಂಪನಿಗಳು ಮಾಡಿದ್ದೇನು?

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೆಡ್ ಮಿ 4A ಹೊಸ ಆವೃತ್ತಿಯನ್ನು ಶಿಯೋಮಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಪೋನ್ ಈಗಾಗಲೇ ಬಜೆಟ್ ಸ್ಮಾರ್ಟ್‌ಫೋನುಗಳ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದಿದೆ. ಈಗ ಮತ್ತೇ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.

3GB RAM/32GB ಇಂಟರ್ನಲ್ ಮೆಮೊರಿ:
ನೂತನ ರೆಡ್‌ಮಿ 4 A ಪೋನಿನಲ್ಲಿ 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಬದಲಿಗೆ 3GB RAM/32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.


ಬೆಲೆ:
ನೂತನ ರೆಡ್‌ಮಿ 4 A ಪೋನಿನ ಬೆಲೆಯೂ ಕೊಂಚ ಹೆಚ್ಚು ಮಾಡಲಾಗಿದೆ. ರೂ.6999 ಆಗಿದೆ. ಈ ಹಿಂದೆ ಈ ಫೋನ್ 5,999ಕ್ಕೆ ದೊರೆಯುತ್ತಿತ್ತು.

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:
ವೇಗದ ಕಾರ್ಯಚರಣೆಗಾಗಿ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅಳವಡಿಸಲಾಗಿದ್ದು 1.4Ghz ವೇಗವನ್ನು ಹೊಂದಿದೆ.ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

5 ಇಂಚಿನ HD ಡಿಸ್‌ಪ್ಲೇ
ರೆಡ್‌ಮಿ 4 A ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಗುಣಮಟ್ಟವನ್ನು ಇದು ಹೊಂದಿದೆ. ನೋಟ್ 4 ನಲ್ಲಿಯೂ ಇದೇ ಮಾದರಿಯ ಸ್ಕ್ರಿನ್ ಇರುವುದನ್ನು ನಾವು ಕಾಣಬಹುದಾಗಿದೆ.

ಉತ್ತಮ ಕ್ಯಾಮೆರಾ:
ರೆಡ್‌ಮಿ 4 A ಪೋನಿನಲ್ಲಿ LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ MIUI8 ಸಹ ಇದರಲಿದೆ.

ಉತ್ತಮ ಬ್ಯಾಟರಿ:
ರೆಡ್‌ಮಿ 4 A ಪೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ. 7 ದಿನ ಬ್ಯಾಟರಿ ಬಾಳಿಕೆ ಬರಲಿದೆಯಂತೆ. ರೆಡ್‌ಮಿ 4 A ಪೋನಿನಲ್ಲಿ ಒಮ್ಮೆಗೆ 2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳಬಹುದಾಗಿದೆ.


Click it and Unblock the Notifications








