BSNL ನಿಂದ ಹೊಸ ಮಾದರಿಯ ಆಫರ್: ಬೇರೆಲ್ಲೂ ಲಭ್ಯವಿಲ್ಲ
ಟೆಲಿಕಾಂ ಮಾರುಕಟ್ಟೆಯಲ್ಲಿ ಟ್ಯಾರಿಫ್ ಪ್ಲಾನ್‌ಗಳು ದಿನಕ್ಕೊಂದು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಖಾಸಗಿ ಟೆಲಿಕಾಂ ಕಂಪನಿಗಳು ನಾಚಿಕೊಳ್ಳುವಂತೆ ಸರಕಾರಿ ಸ್ವಾಮ್ಯದ BSNL ಸಹ ಹೊಸ ಮಾದರಿಯ ಆಫರ್ ಗಳನ್ನು ಲಾಂಚ್ ಮಾಡಿದ್ದು, ಈ ಮೂಲಕ ಟೆಲಿಕಾಂ ದರ ಸ್ಪರ್ಧೆಯಲ್ಲಿ ತನ್ನ ಇರುವಿಕೆಯನ್ನು ಖಚಿತಪಡಿಸಿದೆ.

ಓದಿರಿ: ಮತ್ತೇ ಜಿಯೋ ಫೋನ್ ಬುಕ್ಕಿಂಗ್ ಆರಂಭ: ಆದ್ರೆ ಎಲ್ಲಾರಿಗೂ ಸಿಗಲ್ಲ..!!
ಈಗಾಗಲೇ ಜಿಯೋ-ಏರ್‌ಟೆಲ್-ವೊಡಾಫೋನ್ ಗಳು ಒಂದರ ಹಿಂದೆ ಒಂದರಂತೆ ಆಫರ್ ಗಳನ್ನು ಲಾಂಚ್ ಮಾಡುತ್ತಿವೆ, ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದೇ ಮಾದರಿಯಲ್ಲಿ BSNL ರೂ.187 ಆಫರ್ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಜಿಯೋ-ಏರ್‌ಟೆಲ್-ವೊಡಾಫೋನ್ ಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ.

BSNL ನಿಂದ ರೂ.187 ಪ್ಲಾನ್:
ಹೊಸ ಪ್ಲಾನ್‌ನಲ್ಲಿ BSNL ತನ್ನ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದರಲ್ಲಿ ಒಂದು GB ಡೇಟಾವನ್ನು ಬಳಕೆ ದೊರೆಯಲಿದೆ. ಅಲ್ಲದೇ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ಈ ಆಫರ್ ನಲ್ಲಿ ಮಾಡಿಕೊಡಲಿದೆ.

ನ್ಯಾಷಿನಲ್ ರೋಮಿಂಗ್ ಉಚಿತ:
ಈ ಫ್ಲಾನ್‌ನಲ್ಲಿ BSNL ಬಳಕೆದಾರರಿಗೆ ಉಚಿತ ನ್ಯಾಷಿನಲ್ ರೋಮಿಂಗ್ ಬಳಕೆ ದೊರೆಯಲಿದೆ. ಅಲ್ಲದೇ ಇದರೊಂದಿಗೆ ಅಷ್ಟು ದಿನಗಳ ಕಾಲ ಉಚಿತವಾಗಿ ಕಾಲರ್ ಟೋನ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಪಡೆಯಬಹುದಾಗಿದೆ.

ಬೇರೆಲ್ಲೂ ಈ ಪ್ಲಾನ್ ಇಲ್ಲ:
ಈಗಾಗಲೇ ಬಳಕೆದಾರರಿಗೆ ಎಲ್ಲಾ ಟೆಲಿಕಾಂ ವಿವಿಧ ಮಾದರಿಯ ಆಫರ್ ಗಳನ್ನು ಬಳಕೆ ಲಭ್ಯವಿರಲಿದೆ. ಆದರೆ BSNL ಮಾದರಿಯ ಆಫರ್ ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ನೀಡುತ್ತಿಲ್ಲ ಎನ್ನಲಾಗಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿದೆ.


Click it and Unblock the Notifications








