Subscribe to Gizbot

ಮಾರ್ಚ್ 14ಕ್ಕೆ ಮೊಬೈಲ್ ಮಾರುಕಟ್ಟೆಯಲ್ಲಿ ಸುನಾಮಿ: ಬರಲಿದೆ ಶಿಯೋಮಿಯ ನೂತನ ಬಜೆಟ್ ಫೋನ್

Written By:

ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಹೊಸ ಅಲೆಯನ್ನು ಸೃಷ್ಟಿಸಿ, ದೇಶದ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಶಿಯೋಮಿ, ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಪ್ರಯತ್ನಕ್ಕೂ ಮುಂದಾಗಿದೆ. ಇವೆಲ್ಲವುಗಳ ನಡುವೆ, ಸ್ಮಾರ್ಟ್‌ಫೋನ್ ಮಾರುಕಟ್ಟೆಯೇ ನಡುಗುವಂತಹ ಹೊಸದೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸದ್ದಿಲ್ಲದೇ ಸಿದ್ಧತೆಯನ್ನು ನಡೆಸಲು ಮುಂದಾಗಿದೆ.

ಮಾರ್ಚ್ 14ಕ್ಕೆ ಮೊಬೈಲ್ ಮಾರುಕಟ್ಟೆಯಲ್ಲಿ ಸುನಾಮಿ: ಬರಲಿದೆ ಶಿಯೋಮಿಯ ನೂತನ ಫೋನ್

ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಹೊಸ ಹವಾ ಎಬ್ಬಸಿದೆ. ಆದರೆ ಅದರ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎನ್ನುವವರಿಗಾಗಿಯೇ ಶಿಯೋಮಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಮುಂದಾಗಿದ್ದು, ಅದೇ ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜೆಟ್ ಸ್ಮಾರ್ಟ್‌ಫೋನ್:

ಬೆಜೆಟ್ ಸ್ಮಾರ್ಟ್‌ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 4 ಮಾದರಿಯಲ್ಲಿ ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಸಹ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಇದೆ ಮಾದರಿಯಲ್ಲಿ ಶಿಯೋಮಿ ಈ ಬಾರಿ ರೆಡ್‌ಮಿ 5 ಹೆಸರಿನಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ 5.7 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್ ಪ್ಲೇಯನ್ನು ಅಳವಡಡಿಸಲಾಗಿದೆ. ಇದು ಗುಣಮಟ್ಟದ ವಿಡಿಯೋಗಳನ್ನು ನೋಡಲು ಸಹಾಯಕಾರಿಯಾಗಿದೆ. ಗೇಮ್‌ಗಳನ್ನು ಆಡಬಹುದಾಗಿದೆ.

ಮೂರು ಆವೃತ್ತಿಯಲ್ಲಿ ದೊರೆಯಲಿದೆ:

ಮೂರು ಆವೃತ್ತಿಯಲ್ಲಿ ದೊರೆಯಲಿದೆ:

ರೆಡ್‌ಮಿ 5 ಸ್ಮಾರ್ಟ್‌ಫೋನು ಮೂರು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 2GB/3GB/4G RAM ಆವೃತ್ತಿ ದೊರೆಯಲಿದ್ದು, 16GB ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 450 ಸ್ಮಾರ್ಟ್‌ಫೋನ್ ಅನ್ನು ನೀಡಲಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ರೆಡ್‌ಮಿ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಜೊತೆಗೆ LED ಫ್ಲಾಷ್‌ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ.

ಬ್ಯೂಟಿ ಮೋಡ್:

ಬ್ಯೂಟಿ ಮೋಡ್:

ಇದಲ್ಲದೇ ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ ಬ್ಯೂಟಿ ಮೋಡ್ ಕಾಣಬಹುದಾಗಿದೆ. ಇದಕ್ಕಾಗಿ ಬ್ಯೂಟಿಫೈ 3.0 ಅಳವಡಿಸಲಾಗಿದೆ. ಇದರೊಂದಿಗೆ 3300mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ ನೀವು ಆಂಡ್ರಾಯ್ಡ್ ನ್ಯಾಗಾವನ್ನು ಕಾಣಬಹುದಾಗಿದ್ದು, ಅಲ್ಲದೇ MIUI 9 ಸಹ ಇದರಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಬಳಕೆದಾರರು ನೂತನ ಆಂಡ್ರಾಯ್ಡ್ ಮತ್ತು UI ಅನ್ನು ಬಳಕೆಯ ಅನುಭವನ್ನು ಪಡೆಯಬಹುದಾಗಿದೆ.

ಬೆಲೆ:

ಬೆಲೆ:

ಇದಲ್ಲದೇ ರೆಡ್‌ಮಿ 5 ಸ್ಮಾರ್ಟ್‌ಫೋನ್ ರೂ.6,999ರಿಂದ ಆರಂಭವಾಗುವ ಸಾಧ್ಯತೆ ಇದೆ. ಕಾರಣ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಕಾಣುತ್ತಿರುವ ಕಾರಣದಿಂದಾಗಿ ಈ ನೂತನ ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಓದಿರಿ: ಫೇಸ್‌ಬುಕ್-ವಾಟ್ಸ್‌ಆಪ್‌ಗೆ ಸಂಕಷ್ಟ: ಬ್ಲಾಕ್‌ ಬೆರ್ರಿ ಕೋರ್ಟ್‌ನಲ್ಲಿ ಗೆದ್ದರೇ ಗತಿ ಏನು..?

English summary
Xiaomi Redmi 5 India Launch Expected on March 14. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot