Subscribe to Gizbot

ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದೆ ಜಿಯೋ-ಶಿಯೋಮಿ ಜೋಡಿ: ರೆಡ್‌ಮಿ 5 ಸ್ಮಾರ್ಟ್‌ಫೋನ್‌ ಮೇಲೆ ಇತಿಹಾಸ ಕಂಡಿರದ ಆಫರ್..!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿರುವ ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಈ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಜಿಯೋ ಬೊಂಬಾಟ್ ಆಫರ್ ಅನ್ನು ನೀಡಲು ಮುಂದಾಗಿದೆ. ಈಗಾಗಲೇ ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಇನಷ್ಟು ಏರಿಕೆ ಮಾಡುವ ಯೋಜನೆಯನ್ನು ರೂಪಿಸಿದೆ.

ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದೆ ಜಿಯೋ-ಶಿಯೋಮಿ ಜೋಡಿ: ರೆಡ್‌ಮಿ 5 ಸ್ಮಾರ್ಟ್‌ಫೋ

ಈಗಾಗಲೇ ಶಿಯೋಮಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿದ್ದು, ಟಾಪ್ ಆಯ್ಕೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಜಿಯೋ ಕ್ಯಾಷ್ ಬ್ಯಾಕ್, ಏಕ್ಸಟ್ರಾ ಡೇಟಾ ಮತ್ತು SBI ಕಾರ್ಡುದಾರರಿಗೆ ವಿಶೇಷ ಅವಕಾಶಗಳನ್ನು ನೋಡಿದರೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೊಸ ದಾಖಲೆ ನಿರ್ಮಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಕ್ಯಾಷ್ ಬ್ಯಾಕ್:

ಜಿಯೋ ಕ್ಯಾಷ್ ಬ್ಯಾಕ್:

ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಘೋಷಣೆ ಮಾಡುತ್ತಿರುವ ಜಿಯೊ, ಈ ಸ್ಮಾರ್ಟ್‌ಫೋನ್‌ ಮೇಲೆಯೂ ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ. ಈ ರೆಡ್‌ಮಿ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ರೂ.2200 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ.

ಹೆಚ್ಚುವರಿ ಡೇಟಾ:

ಹೆಚ್ಚುವರಿ ಡೇಟಾ:

ಇದಲ್ಲದೇ ಶಿಯೋಮಿ ಫೋನ್‌ ಖರೀದಿದಾರರಿಗೆ ಜಿಯೋ 100GB ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಸಾಮಾನ್ಯ ಬಳಕೆದಾರರಿಗೆ ರೆಡ್‌ಮಿ 5 ಬಳಕೆದಾರರಿಗೂ ಸಾಕಷ್ಟು ಡೇಟಾ ವ್ಯತ್ಯಾಸ ಕಂಡುಬರಲಿದೆ.

SBI ಕಾರ್ಡುದಾರರಿಗೆ:

SBI ಕಾರ್ಡುದಾರರಿಗೆ:

ಇದಲ್ಲದೇ SBI ಕಾರ್ಡುದಾರರು ಈ ಸ್ಮಾರ್ಟ್‌ಫೋನ್ ಮೇಲೆ ಶೇ.5 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಇದರಿಂದಾಗಿ ರೆಡ್‌ಮಿ 5 ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದೆ. ಇದು SBI ಕಾರ್ಡು ಬಳಕೆದಾರರಿಗೆ ಮಾತ್ರವೇ ದೊರೆಯುವ ಅವಕಾಶವಾಗಿದೆ.

ಅಮೆಜಾನ್ ಆಫರ್:

ಅಮೆಜಾನ್ ಆಫರ್:

ಇದಲ್ಲದೇ ಅಮೆಜಾನ್‌ನಲ್ಲಿ ಎಕ್ಸಕ್ಲೂಸಿವ್ ಆಗಿ ಮಾರಾಟವಾಗುವ ರೆಡ್‌ಮಿ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗಾಗಿ ಅಮೆಜಾನ್ ಆಫರ್ ಒಂದನ್ನು ನೀಡಿದೆ. ಈ ಸ್ಮಾರ್ಟ್‌ಫೋನ್‌ನೊಂದಿಗೆ ಕಿಂಡಲ್ ಇ ಬುಕ್ ಅನ್ನು ಶೇ.90% ಕಡಿಮೆ ಬೆಲೆಗೆ ಮಾರಾಟವನ್ನು ಮಾಡಲಿದೆ.

ಅಮೆಜಾನ್‌ನಲ್ಲಿ ಮಾತ್ರ:

ಅಮೆಜಾನ್‌ನಲ್ಲಿ ಮಾತ್ರ:

ರೆಡ್‌ಮಿ 5 ಸ್ಮಾರ್ಟ್‌ಫೋನ್ ಅಮೆಜಾನ್ ನಲ್ಲಿ ಏಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದ್ದು, ಇದರೊಂದಿಗೆ ಮಿ.ಕಾಮ್ ಮತ್ತು ಮಿ ಸ್ಟೋರ್‌ಗಳಲ್ಲಿಯೂ ಕಾಣಿಸಿಕೊಳ್ಳಲಿದೆ. ಮಾರ್ಚ್ 20 ರಂದು ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್‌ ಆಗಲಿದೆ.

ಬೆಸ್ಟ್ ಫೋನ್:

ಬೆಸ್ಟ್ ಫೋನ್:

ಮಾರ್ಚ್ 14 ರಂದು ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನ್ ಎಲ್ಲಾ ವಿಧದಲ್ಲಿಯೂ ಬೆಸ್ಟ್ ಎನ್ನಬಹುದಾಗಿದ್ದು, ವೇಗದ ಪ್ರೋಸೆಸರ್, ಉತ್ತಮ ಕ್ಯಾಮೆರಾ, ಹೊಸ ಮಾದರಿಯ ವಿನ್ಯಾಸ, ಫುಲ್‌ ಸ್ಕ್ರಿನ್ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಸೇರಿದಂತೆ ಟಾಪ್ ವಿಶೇಷತೆಗಳನ್ನು ಒಳಗೊಂಡಿದ್ದು, ಬಜೆಟ್ ಬೆಲೆಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ಮೂರು ಆವೃತ್ತಿಯಲ್ಲಿ ದೊರೆಯಲಿದೆ;

ಮೂರು ಆವೃತ್ತಿಯಲ್ಲಿ ದೊರೆಯಲಿದೆ;

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999ಕ್ಕೆ, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999ಕ್ಕೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಓದಿರಿ: ಮಾರುಕಟ್ಟೆಯಲ್ಲಿ ಟಾರ್ಚ್‌ಲೈಟ್ ಬದಲು ಟ್ಯೂಬ್‌ಲೈಟ್ ಹೊಂದಿರುವ ಫೀಚರ್ ಫೋನ್‌..!

English summary
Xiaomi Redmi 5 launch offers and more. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot