ದೇಶ್ ಕಾ ಸ್ಮಾರ್ಟ್‌ಪೋನ್ ರೆಡ್‌ಮಿ 5A ಸ್ಮಾರ್ಟ್‌ಫೋನ್ ರೂ.3,999ಕ್ಕೆ ದೊರೆಯುತ್ತಿದೆ: ಇಲ್ಲಿ ಮಾತ್ರ..!

ಶಿಯೋಮಿ ಇಂದು ಲಾಂಚ್ ಮಾಡಿದ ದೇಶ್ ಕಾ ಸ್ಮಾರ್ಟ್‌ಪೋನ್ ರೆಡ್‌ಮಿ 5A ಬೆಲೆಯ ಮೂಲಕವೇ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಇದರೊಂದಿಗೆ ಆಕರ್ಷಕ ಪ್ಲಾನ್‌ವೊಂದನ್ನು ಲಾಂಚ್ ಮಾಡಿದ್ದು, ಜಿಯೋ ದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡು ಹೊಸ ಮಾದರಿಯ ಆಫರ್ ಅನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದೆ.

ಓದಿರಿ: ಠುಸ್ ಆಗುತ್ತಾ 'ಟೈಗರ್ ಕ್ಯಾಬ್': ಆಪ್ ಬಗ್ಗೆ ಚಕಾರ ಎತ್ತಿದ ಬಳಕೆದಾರರು! ತೊಂದರೆ ಏನು?
ಜಿಯೋ ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೂ.1000 ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಈಗಾಗಲೇ ಶಿಯೋಮಿಯಿಂದ ರೂ.1000 ಕಡಿತಗೊಂಡಿದ್ದು, ಇದೇ ಮಾದರಿಯಲ್ಲಿ ಜಿಯೋ ಸಹ ರೂ.1000 ಕ್ಯಾಷ್ ಬ್ಯಾಕ್ ನೀಡುತ್ತಿದೆ. ಇದರಿಂದಾಗಿ ರೆಡ್‌ಮಿ 5A ರೂ.3999ಕ್ಕೆ ಲಭ್ಯವಿರಲಿದೆ. ಆದರೆ ಇದಕ್ಕೊಂದು ಟ್ರಿಕ್ ಅನ್ನು ಮಾಡಿದೆ.

ಜಿಯೋ ಕ್ಯಾಷ್ ಬ್ಯಾಕ್ ಹೇಗೆ:
ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ಟ್ಯಾರಿಫ್ ಪ್ಲಾನ್ ಘೊಷಣೆ ಮಾಡಿದೆ. ರೂ. 199ಕ್ಕೆ ರಿಚಾರ್ಜ್ ಮಾಡಿದರೆ ಪ್ರತಿ ನಿತ್ಯ 1GB ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ ಉಚಿತ ಕರೆಗಳನ್ನು ಮಾಡಬಹುದಾಗಿದೆ ಜೊತೆಗೆ ಉಚಿತ SMS ಕಳುಹಿಸಬಹುದಾಗಿದೆ. ಅಲ್ಲದೇ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ.

12 ತಿಂಗಳು ರಿಚಾರ್ಜ್ ಮಾಡಿಸಬೇಕು:
ಪ್ರತಿ ತಿಂಗಳು ರೂ.199ಕ್ಕೆ ರಿಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು ರೂ.100 ಕ್ಯಾಷ್ ಬ್ಯಾಕ್ ನೀಡಲಿದ್ದು, 12ನೇ ತಿಂಗಳ ಕೊನೆಯಲ್ಲಿ ಒಟ್ಟಾಗಿ ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ರೆಡ್‌ಮಿ 5A ಬಳಕೆದಾರರು ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ.

ರೆಡ್‌ಮಿ 5A ಸ್ಮಾರ್ಟ್‌ಫೋನ್:
5 ಇಂಚಿನ HD+ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ಇದರಲ್ಲಿ ಕಾಣಬಹುದಾಗಿದೆ. ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. 2GB/3GB RAM ಮತ್ತು 16GB/32GB ಇಂಟರ್‌ನಲ್ ಮೆಮೊರಿಯನ್ನು ಕಾಣಬಹುದು.

ವಿಶೇಷತೆಗಳು:
ಶಿಯೋಮಿ ರೆಡ್‌ಮಿ 5A ಫೋನ್ 3000mAh ಬ್ಯಾಟರಿಯನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಫೀಚರ್ ಅನ್ನು ನೀಡಿಲ್ಲ. ಈ ಫೋನ್ ಡ್ಯುಯಲ್ ಸಿಮ್, ಬ್ಲೂ ಟೂತ್, 4G ವೋಲ್ಟ್ ಸಪೋರ್ಟ್ ಹಾಗೂ ಯುಎಸ್‌ಬಿ ಒಟಿಜಿ ಯಂತಹ ಎಲ್ಲಾ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.


Click it and Unblock the Notifications