ಠುಸ್ ಆಗುತ್ತಾ 'ಟೈಗರ್ ಕ್ಯಾಬ್': ಆಪ್‌ ಬಗ್ಗೆ ಚಕಾರ ಎತ್ತಿದ ಬಳಕೆದಾರರು! ತೊಂದರೆ ಏನು?

|

ಆಪ್‌ ಆಧಾರಿತ ಕ್ಯಾಬ್ ಸೇವೆ ನೀಡುವ ಮೂಲಕ ಭಾರೀ ಸದ್ದು ಮಾಡುತ್ತಿರುವ ಓಲಾ, ಉಬರ್‌ ಕಂಪನಿಗಳಿಗೆ ಪರ್ಯಾಯವಾಗಿ ಕಾರ್ಯಚರಣೆಯನ್ನು ಆರಂಭಿಸಿರುವ ನಮ್ಮದೇ ನೆಲೆದ 'ನಮ್ಮ ಟೈಗರ್‌' ಕ್ಯಾಬ್‌ಗಳು ಇಂದಿನಿಂದ ಬೆಂಗಳೂರಿನ ರಸ್ತೆಗೆ ಇಳಿಯಲಿದೆ. ಆದರೆ ಆರಂಭಕ್ಕೂ ಮುನ್ನವೇ ಟೈಗರ್ ಕ್ಯಾಬ್ ಆಪ್ ಬಗ್ಗೆ ಬಳಕೆದಾರರು ಚಕಾರ ಎತ್ತಿದ್ದಾರೆ ಎನ್ನಲಾಗಿದ್ದು, ಓಲಾ, ಉಬರ್ ಮಾದರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ಆಪ್‌ ವಿಫಲವಾಗಿದೆ ಎನ್ನಲಾಗಿದೆ.

ಠುಸ್ ಆಗುತ್ತಾ 'ಟೈಗರ್ ಕ್ಯಾಬ್': ಆಪ್‌ ಬಗ್ಗೆ ಚಕಾರ ಎತ್ತಿದ ಬಳಕೆದಾರರು!

ಓದಿರಿ: ಬೆಂಗಳೂರಿನಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದ ನೋಕಿಯಾ..!

'ನಮ್ಮ ಟೈಗರ್‌' ಕ್ಯಾಬ್ ಸೇವೆಯನ್ನು ಪಡೆಯುವ ಸಲುವಾಗಿ ಸ್ಮಾರ್ಟ್‌ಫೋನ್ ಹೊಂದಿರುವವರು ಆಪ್ ಇನ್ಸಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಬಳಕೆದಾರರು ನೋಂದಣಿ ಮಾಡಿಕೊಳ್ಳುವ ಸಲುವಾಗಿ ತಮ್ಮ ಮೊಬೈಲ್‌ ಸಂಖ್ಯೆ, ಛಾಯಾಚಿತ್ರ, ಸ್ನೇಹಿತರ ಮೊಬೈಲ್‌ ಸಂಖ್ಯೆಗಳನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಆದರೆ ಇದಕ್ಕೆ ಆಪ್ ಕ್ಯಾಬ್ ಬಳಕೆ ಮಾಡುವ ಪ್ರಯಾಣಿಕರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಪ್ಲೇ ಸ್ಟೋರಿನಲ್ಲಿ ಅಸಮಾಧಾನ:

ಪ್ಲೇ ಸ್ಟೋರಿನಲ್ಲಿ ಅಸಮಾಧಾನ:

ಗೂಗಲ್ ಪ್ಲೇಸ್ಟೋರಿನಲ್ಲಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡ ಬಳಕೆದಾರರು ಇದರ ಕಾರ್ಯ ವೈಕರಿಯ ಕುರಿತು ಅಲ್ಲಿಯೇ ಅಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಕನ್ನಡಿಗರೇ ಇದ್ದಾರೆ ಎನ್ನಲಾಗಿದೆ. ಕ್ಯಾಬ್‌ನಲ್ಲಿ ಪ್ರಯಾಣಿಸುವವರ ಮಾಹಿತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಆಪ್‌ ಅಪ್ಡೇಟ್ ಮಾಡಲು ಸಲಹೆ:

ಆಪ್‌ ಅಪ್ಡೇಟ್ ಮಾಡಲು ಸಲಹೆ:

ಪ್ಲೇ ಸ್ಟೋರಿನಲ್ಲಿ ಆಪ್‌ ಕುರಿತು ಕಾಮೆಂಟ್ ಮಾಡಿರುವ ಅನೇಕ ಮಂದಿ, ಕ್ಯಾಬ್‌ನಲ್ಲಿ ಪ್ರಯಾಣಿಸಲು ಅಗತ್ಯಕ್ಕಿಂತ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನೀಡಲು ಯಾರು ಮುಂದಾಗುವುದಿಲ್ಲ. ಇದಕ್ಕಾಗಿ ಆಪ್‌ ಪರಿಷ್ಕರಣೆ ಮಾಡಿ ನೂತನ ಅಪ್ಡೇಟ್ ಬಿಡುಗಡೆ ಮಾಡುವಂತೆ ಸಲಹೆಯನ್ನು ನೀಡಿರುವುದನ್ನು ಕಾಣಬಹುದಾಗಿದೆ.

24 ಗಂಟೆ ಕಾರ್ಯಚರಣೆ:

24 ಗಂಟೆ ಕಾರ್ಯಚರಣೆ:

ಟೈಗರ್ ಕ್ಯಾಬ್‌ಗಳು ನಗರದಲ್ಲಿ ದಿನದ 24 ಗಂಟೆ ಸಂಚರಿಸಲಿವೆ. ದಿನದ ಎಲ್ಲಾ ಸಮಯದಲ್ಲಿಯೂ ಒಂದೇ ಪ್ರಯಾಣ ದರವಿರಲಿದೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸಣ್ಣ ಕ್ಯಾಬ್‌ಗಳಿಗೆ ಪ್ರತಿ ಕಿ.ಮೀಗೆ ರೂ.12.50 ನಿಗಧಿಯಾಗಿದ್ದು, ಇದೇ ಮಾದರಿಯಲ್ಲಿ ದೊಡ್ಡ ಕ್ಯಾಬ್‌ಗಳಿಗೆ ರೂ.14.50 ಹಾಗೂ AC ಕ್ಯಾಬ್‌ಗಳಿಗೆ ರೂ. 18.50 ನಿಗಧಿ ಮಾಡಲಾಗಿದೆ.

10,000 ಕ್ಯಾಬ್‌ಗಳು ರಸ್ತೆಗೆ:

10,000 ಕ್ಯಾಬ್‌ಗಳು ರಸ್ತೆಗೆ:

ಸದ್ಯ ಬೆಂಗಳೂರಿನಲ್ಲಿ 10,000 ಕ್ಯಾಬ್‌ಗಳು ಟೈಗರ್ ಕ್ಯಾಬ್‌ನೊಂದಿಗೆ ಸೇರಿಕೊಂಡಿದ್ದು, ನವೆಂಬರ್ 30ರಿಂದ ರಸ್ತೆಗೆ ಇಳಿಯಲಿವೆ. ಈ ಆಪ್‌ ನಿರ್ವಹಣೆಯನ್ನು ಕೊಲ್ಕತ್ತಾದ ಕಂಪನಿಯೊಂದು ವಹಿಸಿಕೊಂಡಿದೆ ಎನ್ನಲಾಗಿದೆ.

ಆಟೋ, ಆಂಬ್ಯೂಲೆನ್ಸ್ ಸಹ ಆರಂಭ:

ಆಟೋ, ಆಂಬ್ಯೂಲೆನ್ಸ್ ಸಹ ಆರಂಭ:

ಒಲಾ ಆಟೋ ಮಾದರಿಯಲ್ಲಿ ಆಟೊ ಸೇವೆಯನ್ನು ಆರಂಭಿಸುವುದಲ್ಲದೇ ಶೀಘ್ರವೇ ಆಂಬುಲೆನ್ಸ್‌, ಬಸ್‌ ಹಾಗೂ ಕೋರಿಯರ್‌ ಸೇವೆಗಳನ್ನು ನೀಡುವ ಯೋಜನೆಯನ್ನು ಟೈಗರ್‌ ಕ್ಯಾಬ್ ಹೊಂದಿದೆ. ಮೊದಲಿಗೆ ಕ್ಯಾಬ್ ಸೇವೆಯನ್ನು ಆರಂಭಿಸಲಿದ್ದು, ಇದರ ಯಶಸ್ಸಿನ ನಂತರದಲ್ಲಿ ಮಿಕ್ಕ ಸೇವೆಗಳನ್ನು ನೀಡಲು ಮುಂದಾಗಲಿದೆ.

Best Mobiles in India

English summary
'Namma Tiger Cab' starts. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X