ಬರಲಿದೆ ಮತ್ತೊಂದು ಬಜೆಟ್ ಬೆಲೆಯ ಫೋನ್: ಯಾವುದು?
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ವಿಚಾರದಲ್ಲಿ ಶಿಯೋಮಿ ಭಾರತೀಯರ ನಾಡಿ ಮಿಡಿತವನ್ನು ಅರಿತಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.
ಶಿಯೋಮಿ ಭಾರತೀಯ ಮಾರುಕಟ್ಟೆಯ ರುಚಿಕಂಡಿದ್ದು, ದಿನಕ್ಕೊಂದು ಹೊಸ ಫೋನ್ ಲಾಂಚ್ ಮಾಡುವ ಸೂಚನೆ ನೀಡುತ್ತಿದೆ. ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ವಿಚಾರದಲ್ಲಿ ಶಿಯೋಮಿ ಭಾರತೀಯರ ನಾಡಿ ಮಿಡಿತವನ್ನು ಅರಿತಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.


ಓದಿರಿ: ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಟಾಪ್ ಎಂಡ್ ಫೋನ್
ಈ ಹಿಂದೆ ಮಾಹಿತಿ ನೀಡಿದಂತೆ ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅನ್ನು ಶೀಘ್ರವೇ ಲಾಂಚ್ ಮಾಡಲಿದ್ದು, ಒಟ್ಟು ಎರಡು ಆವೃತ್ತಿಯಲ್ಲಿ ಈ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಈ ಫೋನಿನ ಕುರಿತ ಹಲವು ವಿಷಯಗಳು ಲೀಕ್ ಆಗಿದ್ದು, ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಶಿಯೋಮಿ 5A ಒಟ್ಟು ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, 2GB RAM ಮತ್ತು 16GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ ಮತ್ತು 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯೂ ಲಭ್ಯವಿರಲಿದೆ ಎನ್ನಲಾಗಿದೆ.

ಎಂಟು ಬಣ್ಣದಲ್ಲಿ ಲಭ್ಯ:
ಇದೇ ಮೊದಲ ಬಾರಿಗೆ ಶಿಯೋಮಿ ಒಟ್ಟು ಎಂಟು ಬಣ್ಣದಲ್ಲಿ ಶಿಯೋಮಿ 5A ಫೋನ್ ಅನ್ನು ಬಿಡುಗಡೆ ಮಾಡುತ್ತಿದ್ದು, ಬ್ಲಾಕ್, ರೋಸ್ ಗೋಲ್ಡ್, ಗೊಲ್ಡ್, ವೈಟ್, ರೆಡ್, ಪಿಕ್, ಗ್ರೇ ಮತ್ತು ಸಿಲ್ವರ್ ಬಣ್ಣದಲ್ಲಿ ಈ ಫೋನ್ ದೊರೆಯಲಿದೆ.

ಫೋನಿನ ವಿಶೇಷತೆ:
ಶಿಯೋಮಿ 5A ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 137 ಗ್ರಾಂ ತೂಕವನ್ನು ಹೊಂದಿದೆ. 1.4GHz ವೇಗದ ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಇದರಲ್ಲಿ ಕಾಣಬಹುದಾಗಿದೆ.

ಕ್ಯಾಮೆರಾ:
ಶಿಯೋಮಿ 5A ಫೋನಿನಲ್ಲಿ 8MP ಹಾಗೂ 5MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ 7.1.2 ನಲ್ಲಿ ಇದು ಕಾರ್ಯನಿರ್ವಹಿಸಲಿದೆ.


Click it and Unblock the Notifications