4,999 ರೂ.ಗೆ ಬರಲಿದೆ ಶಿಯೋಮಿಯ ಹೊಸ ಫೋನ್ 'ರೆಡ್ ಮಿ ಗೋ'.!

|

ಗ್ರಾಹಕರಿಗೆ ಸದಾ ಹೊಸತನದ ಫೀಚರ್ ಪರಿಚಯಿಸುವುದರ ಮೂಲಕ ಸುದ್ದಿ ಮಾಡುತ್ತಾ ಬಂದಿರುವ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಶಿಯೋಮಿ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸುದ್ದಿಯು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಇದಕ್ಕಿಂತಲೂ ಹೆಚ್ಚು ಸದ್ದು ಮಾಡಲು ಇದೀಗ ಶಿಯೋಮಿ 'ರೆಡ್‌ಮಿ ಗೋ' ಹೆಸರಿನ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಮುಂದಾಗಿದೆ.

4,999 ರೂ.ಗೆ ಬರಲಿದೆ ಶಿಯೋಮಿಯ ಹೊಸ ಫೋನ್ 'ರೆಡ್ ಮಿ ಗೋ'.!

ಹೌದು, ಈಗಾಗಲೇ ಶಿಯೋಮಿ 'ರೆಡ್‌ಮಿ ಗೋ' ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಗೆಗೆ ಸುದ್ದಿ ಲೀಕ್ ಆಗಿದ್ದು, ಈ ಫೋನ್ ಶಿಯೋಮಿಯ ಫಸ್ಟ್‌ ಆಂಡ್ರಾಯ್ಡ್ ಗೋ ಫೋನ್‌ ಇದಾಗಿರುವುದು ಭಾರೀ ಕುತೋಹಲ ಮೂಡಿಸಿದೆ. ಮೈಕ್ರೋಮ್ಯಾಕ್ಸ್ ಸೇರಿದಂತೆ ಹಲವು ಮೊಬೈಲ್ ಕಂಪೆನಿಗಳು ಆಂಡ್ರಾಯ್ಡ್ ಗೋ ಸ್ಮಾರ್ಟ್‌ಪೋನ್‌ಗಳಿಂದ ಮಾರುಕಟ್ಟೆಯನ್ನು ಗಳಿಸಿಕೊಂಡಿದ್ದು, ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಇರುವುದು ಇದಕ್ಕೆ ಕಾರಣವಾಗಿದೆ.

4,999 ರೂ.ಗೆ ಬರಲಿದೆ ಶಿಯೋಮಿಯ ಹೊಸ ಫೋನ್ 'ರೆಡ್ ಮಿ ಗೋ'.!

ಇನ್ನು ರೆಡ್‌ಮಿ ಗೋ ಫೋನ್‌ ಬರಲಿರುವ ಬಗ್ಗೆ ಮಾಹಿತಿಯನ್ನು ಈ ಹಿಂದೆ ಕಂಪನಿ ನೀಡಿತ್ತು. ಆದರೆ, ಇದೀಗ ರೆಡ್‌ಮಿ ಗೋ ಫೋನಿನ ಚಿತ್ರಗಳು ಮತ್ತು ಫೀಚರ್ಸ್‌ಗಳ ಮಾಹಿತಿ ಲಿಕ್ ಆಗಿದೆ. ಈ ಫೋನ್ 5 ಇಂಚಿನ್ LCD ಡಿಸ್‌ಪ್ಲೇ ಮತ್ತು 3000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದ್ದು, ಕಡಿಮೆ ಬೆಲೆಯ ಫೋನಾಗಿರಲಿದೆ. ಹಾಗಾದರೆ, ಕಡಿಮೆ ಬೆಲೆಯ ಫೋನ್‌ಗಳಲ್ಲಿಯೂ ಉತ್ತಮ ಫೀಚರ್ಸ್ ನೀಡಬೆಕೆಂದಿರುವ 'ರೆಡ್‌ಮಿ ಗೋ' ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶಿಯೋಮಿ ಕಂಪನಿ ಬಿಡುಗಡೆ ಮಾಡಲಿರುವ ರೆಡ್‌ಮಿ ಗೋ ಆಂಡ್ರಾಯ್ಡ್ ಫೋನ್ 1280 x 720 ಪಿಕ್ಸಲ್ ಸಾಮರ್ಥ್ಯದೊಂದಿಗೆ 5 ಇಂಚಿನ LCD ಡಿಸ್‌ಪ್ಲೇ ಹೊಂದಿರಲಿದೆ. 16:9 ಇಮೇಜ್‌ನ ಅನುಪಾತವನ್ನು ಸ್ಕ್ರೀನ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಡಿಸ್‌ಪ್ಲೇ ಬಯಸುವವರಿಗೆ ಇದು ಅತ್ಯುತ್ತಮ ಅಂಡ್ರಾಯ್ಡ್ ಫೋನ್ ಎಂದು ಹೇಳಬಹುದು.

ಪ್ರೋಸೆಸರ್

ಪ್ರೋಸೆಸರ್

ರೆಡ್‌ ಮಿ ಗೋ ಆಂಡ್ರಾಯ್ಡ್ ಫೋನ್ 425 ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ಕ್ವಾಲಂ ಪ್ರೊಸೆಸರ್ ಅನ್ನು ಹೊಂದಿರಲಿದೆ ಇದೊಂದು ಎಂಟ್ರಿ ಲೆವೆಲ್ ಪ್ರೊಸೆಸರ್ ಆಗಿರಲಿದೆ ಎಂದು ತಿಳಿದಿದೆ. ಇದರೊಂದಿಗೆ 308 GPU, 1.4GHz ವೇಗದ 4x ARM ಕಾರ್ಟೆಕ್ಸ A53 ನೀಡಿರುವುದು ತನ್ನ ವರ್ಗದಲ್ಲಿಯೇ ವೇಗದ ಕಾರ್ಯದಕ್ಷತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಕ್ಯಾಮೆರಾ

ಕ್ಯಾಮೆರಾ

ರೆಡ್ ಮಿ ಫೋನ್‌ನಲ್ಲಿ ಎರಡು ಕ್ಯಾಮೆರಾ ನೀಡಲಾಗುವುದು ಮತ್ತು ಆ ಎರಡು ಕ್ಯಾಮೆರಾಗಳು ಸ್ಪೋರ್ಟ್ ಸಿಂಗಲ್ ಕ್ಯಾಮೆರಾಗಳಾಗಿರಲಿವೆ ಎನ್ನಲಾಗುತ್ತಿದೆ. ಫೋನಿನ ಹಿಂಬದಿಯಲ್ಲಿ 8ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹಾಗೂ ಮುಂಬದಿಯಲ್ಲಿ 5 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನೂ ಹಿಂಬದಿಯಲ್ಲಿ ಫ್ಲ್ಯಾಶ್ ಸಹ ಹೊಂದಿರಲಿದೆ.

ಮೆಮೋರಿ

ಮೆಮೋರಿ

ರೆಡ್ ಮಿ ಗೋ ಫೋನ್ ಒಂದೇ ವೇರಿಯಂಟ್ ನಲ್ಲಿ ಲಭ್ಯವಿದ್ದು, 1GB RAM ನೊಂದಿಗೆ 8GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನೂ ಮೈಕ್ರೋ ಎಸ್‌ಡಿ ಕಾರ್ಡ್‌ ಬಾಹ್ಯವಾಗಿ 128GB ವರೆಗೂ ವಿಸ್ತರಿಸುವ ಅವಕಾಶ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಕಡಿಮೆ ಬೆಲೆಯಲ್ಲಿ ಉತ್ತಮ ಸಂಗ್ರಹ ಸಾಮರ್ಥ್ಯ ಎನ್ನಬಹುದಾಗಿದೆ.

ಬ್ಯಾಟರಿ

ಬ್ಯಾಟರಿ

ಈ ಫೋನ್ 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, ಆರಾಮವಾಗಿ ಒಂದು ದಿನ ಬಾಳಿಕೆ ಬರುತ್ತದೆ. ಇದರೊಂದಿಗೆ 5V1A ಚಾರ್ಜರ್ ನೀಡಲಾಗುವುದು. ಈ ಮಧ್ಯಮ ಶ್ರೇಣಿಯ ದರ ಇತರೆ ಕಂಪನಿ ಫೋನ್‌ಗಳ ಬ್ಯಾಟರಿಗೆ ಹೊಲಿಸಿದರೆ ರೆಡ್‌ ಮಿ ಗೋ ಉತ್ತಮ ಬಾಳಿಕೆಯ ಸಾಮರ್ಥ್ಯ ಹೊಂದಿರುವ ಬ್ಯಾಟರಿ ಹೊಂದಲಿದೆ ಎನ್ನಲಾಗುತ್ತಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಶಿಯೋಮಿಯ ತನ್ನ ರೆಡ್‌ ಮಿ ಗೋ ಆಂಡ್ರಾಯ್ಡ್ ಫೋನ್ ನಿಖರ ಬೆಲೆಯ ಬಗ್ಗೆ ಇನ್ನು ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಕೇವಲ 4,999 ರೂ.ಗಳಿಗೆ ಗ್ರಾಹಕರಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲಿ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಈ ಫೋನ್ ಬರಲಿದೆ ಎಂದು ಹೇಳಲಾಗಿದೆ.

Best Mobiles in India

English summary
The Redmi Go is expected to launch in India by the end of this quarter.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X