Just In
Don't Miss
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರೆಡ್‌ಮಿ X'..ಶಾಕ್ ಇಂದು ಫಿಕ್ಸ್.! ಶಿಯೋಮಿಯ ಮೊದಲ 48 ಮೆಗಾಪಿಕ್ಸಲ್ ಕ್ಯಾಮರಾ.!!
ವಿಶ್ವದ ಜನಪ್ರಿಯ ಬ್ರ್ಯಾಂಡ್ ಶಿಯೋಮಿ ಕಂಪನಿಯು ಇಂದು ಭಾರೀ ಅಚ್ಚರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವುದು ಕನ್ಫರ್ಮ್ ಆಗಿದೆ. ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮೊಬೈಲ್ ಪ್ರಿಯರ ಮನೆ ಮಾತಾಗಿದ್ದ ಶಿಯೋಮಿ ಕಂಪೆನಿ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸುವ ಸಲುವಾಗಿ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಒಂದನ್ನು ಇಂದು ಬಿಡುಗಡೆ ಮಾಡುತ್ತಿದೆ.

ಹೌದು, ಶಿಯೋಮಿ ಕಂಪೆನಿ ಏನೇ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದರೂ ಸಹ ಅದು ಹೊಸ ಹೊಸ ಫೀಚರ್ಸ್ ಹೊಂದ ಬಯಸುವ ಸ್ಮಾರ್ಟ್‌ಫೋನ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುತ್ತದೆ. ಹಾಗೆಯೇ, ಇತ್ತೀಚಿಗೆ ಸ್ಮಾರ್ಟ್‌ಫೋನ್ ಖರೀದಿಸುವವರು ಉತ್ತಮ ಕ್ಯಾಮರಾ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇಷ್ಟಪಡುತ್ತಾರೆ ಎನ್ನುವ ಅಂಶವನ್ನು ಮನಗಂಡಿರುವ ಶಿಯೋಮಿ ಇದೀಗ 48MP ಮೆಗಾಪಿಕ್ಸಲ್‌ನ 'ರೆಡ್‌ಮೀ X' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಾಂಚ್ ಮಾಡಲು ಕ್ಷಣಗಣನೆ ಎಣಿಸುತ್ತಿದೆ.

ವಿಶ್ವದಾಧ್ಯಂತ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸಲು ಇಚ್ಚಿಸುವ ನಿರ್ದಿಷ್ಟ ಗ್ರಾಹಕರ ಬಳಗವನ್ನೆ ಹೊಂದಿರುವ ಶಿಯೋಮಿ, 48 ಮೆಗಾಪಿಕ್ಸಲ್ ಕ್ಯಾಮರಾದೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಹೊಸ ಸ್ಮಾರ್ಟ್‌ಫೋನ್ ತನ್ನ ಗ್ರಾಹಕ ವರ್ಗದಲ್ಲಿ ಕೂತುಹಲ ಸೃಷ್ಠಿಸಿದೆ. ಹಾಗಾದರೇ ಈ ಮೊಬೈಲ್ ಎಂಟ್ರಿಯಿಂದಾ ಮೊಬೈಲ್ ಮಾರುಕಟ್ಟೆಯಲ್ಲಿ ಆಗಬಹುದಾದ ಪರಿಣಾಮಗಳು ಯಾವುವು ಎಂಬುದನ್ನು ರೆಡ್‌ಮೀ X' ಸ್ಮಾರ್ಟ್‌ಪೋನಿನ ಬಗ್ಗೆ ತಿಳಿದು ನೀವೇ ಊಹಿಸಿ.

ಎಷ್ಟು MP ಕ್ಯಾಮರಾ ಇರಲಿದೆ ?
ಶಿಯೋಮಿ ನಾಳೆ ರಿಲೀಸ್ ಮಾಡಲಿರುವ ರೆಡ್‌ಮೀ X ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೇ ಅದರ ಕ್ಯಾಮರಾ ಫೀಚರ್. ಬಹುನಿರೀಕ್ಷಿತ ಈ 'ರೆಡ್‌ಮೀ ಎಕ್ಸ್' ಸ್ಮಾರ್ಟ್‌ಫೋನಿನಲ್ಲಿ 48 ಮೆಗಾಪಿಕ್ಸಲ್ಸ್ ಸಾಮರ್ಥ್ಯದ ಮೊದಲ ಶಿಯೋಮಿ ಮೊಬೈಲ್ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಸೆನ್ಸಾರ್ ನೀಡಿರುವುದು ಶಿಯೋಮಿ ಗ್ರಾಹಕರಲ್ಲಿ ಕೂತುಹಲವನ್ನು ಹೆಚ್ಚಿಸಿದೆ.

ಬ್ಯಾಟರಿ ಎಷ್ಟಿದೇ?
ಶಿಯೋಮಿ ತನ್ನ ಮೊಬೈಲ್‌ಗಳಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯ ನೀಡುತ್ತಾ ಬಂದಿದೆ, ಅದರಂತೆ ನೂತನ ರೆಡ್‌ಮೀ ಎಕ್ಸ್ ಸ್ಮಾರ್ಟ್‌ಫೋನ್‌ನಲ್ಲೂ ಸಹ 4000mAh ಪವರಫುಲ್ ಬ್ಯಾಟರಿ ಒದಗಿಸಿದೆ. ಬ್ಯಾಟರಿ ಡೌನ ಆಗುತ್ತಿದೆ. ಮೊಬೈಲ್ ಚಾರ್ಜ್ ನಿಲ್ಲೊದೇ ಇಲ್ಲ ಎನ್ನುವ ಗ್ರಾಹಕರಿಗೆ ಶಿಯೋಮಿಯ ಈ ರೆಡ್‌ಮಿ ಎಕ್ಸ್ ಸ್ಮಾರ್ಟ್‌ಫೋನ್ ಇಷ್ಟವಾಗುವುದೇ ಕಾದು ನೋಡಬೇಕು.

ಬ್ಯುಟಿಫುಲ್ ಡಿಸ್‌ಪ್ಲೇ
ತನ್ನ ಸ್ಮಾರ್ಟ್‌ಫೋನ್‌ಗಳ ಔಟ್ ಲುಕ್ ಚೆನ್ನಾಗಿರುವಂತೆ ಮೊದಲಿನಿಂದಲೂ ಗಮನ ನೀಡುತ್ತಾ ಬಂದಿರುವ ಶಿಯೋಮಿಯು, ತನ್ನ ಹೊಸ ಫೋನ್‌ನಲ್ಲೂ ಇದನ್ನು ಮುಂದುವರೆಸಿದೆ. ರೆಡ್‌ಮೀ ಎಕ್ಸ್ ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ ಸಂಪೂರ್ಣ HD ಆಗಿದೆ, ವಾಟರ್ ಡ್ರಾಪ್ ಲುಕ್ ಇದೆ. ಇದು ಸ್ಮಾರ್ಟ್‌ಫೋನ್ ಔಟ್ ಲುಕ್‌ನ ಅಂದವನ್ನು ಹೆಚ್ಚಿಸಿದೆ.

ಎಲ್ಲಿ ಸಿಗುತ್ತೇ ಈ ಫೋನ್ ?
ಭಾರಿ ಸುದ್ಧಿಯೊಂದಿಗೆ ಬಿಡುಗಡೆ ಆಗುತ್ತಿರುವ ಶಿಯೋಮಿ ರೆಡ್‌ಮೀ ಎಕ್ಸ್ ಸ್ಮಾರ್ಟ್‌ಪೋನ್ ಇಂದು ಲಾಂಚ್ ಆಗುತ್ತಿರುವುದು ಚೀನಾದಲ್ಲಿ. ಚೀನಾದ ಮಾರುಕಟ್ಟೆಯಲ್ಲಿ ಇದರ ಬೆಲೆ CNY 9,999/- ಆಗಿರುತ್ತದೆ. ನಮ್ಮ ರೂಪಾಯಿ ಮೊತ್ತದಲ್ಲಿ 1,03,324 ರೂಪಾಯಿ ಆಗಿದೆ. ಈ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿ ದೊರೆಯುವ ಬಗ್ಗೆ ಮಾಹಿತಿ ನಿಖರವಾಗಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470