Home
ಮೊಬೈಲ್

ರೆಡ್ಮಿ ನೋಟ್ 10 ಪ್ರೊ ವಿಮರ್ಶೆ: ಬಜೆಟ್‌ ದರದಲ್ಲಿ ಹೈ ಎಂಡ್‌ ಕ್ಯಾಮೆರಾ ಫೋನ್!

ಶಿಯೋಮಿ ಸಂಸ್ಥೆಯು ತನ್ನ ಜನಪ್ರಿಯ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಇತ್ತೀಚಿಗೆ ಹೊಸದಾಗಿ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಬಜೆಟ್‌ ಪ್ರೈಸ್‌ ಮತ್ತು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. 5,000mAh ಸಾಮರ್ಥ್ಯದ ಬ್ಯಾಟರಿ, ಹೈ ಎಂಡ್ ಕ್ಯಾಮೆರಾ ಸೆನ್ಸಾರ್ ಸೇರಿದಂತೆ ಫುಲ್‌ ಹೆಚ್‌ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಆಗಿ ಕಾಣಿಸುತ್ತದೆ.

ನೋಟ್

ಶಿಯೋಮಿ ಸಂಸ್ಥೆಯು ತನ್ನ ಜನಪ್ರಿಯ ನೋಟ್ 10 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಇತ್ತೀಚಿಗೆ ಹೊಸದಾಗಿ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಬಜೆಟ್‌ ಪ್ರೈಸ್‌ ಮತ್ತು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. 5,000mAh ಸಾಮರ್ಥ್ಯದ ಬ್ಯಾಟರಿ, ಹೈ ಎಂಡ್ ಕ್ಯಾಮೆರಾ ಸೆನ್ಸಾರ್ ಸೇರಿದಂತೆ ಫುಲ್‌ ಹೆಚ್‌ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಆಗಿ ಕಾಣಿಸುತ್ತದೆ.

ಕ್ಯಾಮೆರಾವು

ಶಿಯೋಮಿಯ ಕಂಪನಿಯ ಹೊಸ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ವೇಗದ ಕಾರ್ಯವೈಖರಿಯನ್ನು ಒಳಗೊಂಡಿದೆ. ಹಾಗಾದರೇ ಹೊಸ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಹೇಗಿದೆ? ಈ ಪೋನಿನ ಇತರೆ ಫೀಚರ್ಸ್‌ಗ ಕಾರ್ಯವೈಖರಿ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿದೆ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 100% ಡಿಸಿಐ-ಪಿ 3 ವೈಡ್ ಕಲರ್ ಗ್ಯಾಮಟ್, HDR-10 ಬೆಂಬಲ ಮತ್ತು ಟಿವಿ ರೈನ್‌ಲ್ಯಾಂಡ್ ಕಡಿಮೆ ಹೊಂದಿದೆ. ಈ ಡಿಸ್‌ಪ್ಲೇ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ. ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಉತ್ತಮ ಡಿಸ್‌ಪ್ಲೇ ಇದಾಗಿದೆ ಎನ್ನಬಹುದು.

ಪ್ರೊಸೆಸರ್‌ ಕಾರ್ಯವೈಖರಿ ಹೇಗೆ

ಪ್ರೊಸೆಸರ್‌ ಕಾರ್ಯವೈಖರಿ ಹೇಗೆ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. MIUI 12.5.2 ಸಪೋರ್ಟ್‌ ಸಹ ಒಳಗೊಂಡಿದೆ. ಹಾಗೆಯೇ ಈ ಫೋನ್ 6GB RAM + 64GB ಮತ್ತು 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ವೇಗದ ಪ್ರೊಸೆಸರ್ ಮಲ್ಟಿಟಾಸ್ಕಿಂಗ್ ಕೆಲಸಗಳಿಗೆ ಪೂರಕವಾಗಿದೆ. ಹಾಗೆಯೇ ಅಧಿಕ ಡೇಟಾ ಬೇಡುವ ಗೇಮಿಂಗ್‌ ಅನ್ನು ಬೆಂಬಲಿಸಲಿದೆ.

ಕ್ವಾಡ್‌ ಕ್ಯಾಮೆರಾ ಸೆನ್ಸಾರ್ ರಚನೆ

ಕ್ವಾಡ್‌ ಕ್ಯಾಮೆರಾ ಸೆನ್ಸಾರ್ ರಚನೆ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಐಸೊಸೆಲ್ GW3 ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೂಪರ್ ಮ್ಯಾಕ್ರೋ ಶೂಟರ್ ಜೊತೆಗೆ 2x ಜೂಮ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್- ಆಂಗಲ್ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಮುಖ್ಯ ಕ್ಯಾಮೆರಾ ಅತ್ಯುತ್ತಮವಾಗಿದೆ. 1080p 30fps ವಿಡಿಯೋ ರೇಕಾರ್ಡಿಂಗ್ ಮಾಡುವ ಬೆಂಬಲ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, ಇನ್ಫ್ರಾರೆಡ್ (IR), USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್‌ ಜ್ಯಾಕ್ ಅನ್ನು ಒಳಗೊಂಡಿದೆ. ಜೊತೆಗೆ ಹೈ-ರೆಸ್ ಬೆಂಬಲದೊಂದಿಗೆ ನೀವು ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಪಡೆಯುತ್ತೀರಿ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6GB RAM + 64GB ಶೇಖರಣಾ ಮಾದರಿಗೆ 15,999ರೂ. ಆಗಿದೆ. ಹಾಗೆಯೇ 6GB RAM + 128 GB ಸ್ಟೋರೇಜ್‌ ಆಯ್ಕೆಗೆ 16,999ರೂ ಮತ್ತು 6GB + 128GB ಶೇಖರಣೆ ಸಂಪೂರ್ಣ ಹೈ ಎಂಡ್‌ ರೂಪಾಂತರಕ್ಕೆ 18,999ರೂ. ಹೊಂದಿದೆ. ಅಮೆಜಾನ್ ಹಾಗೂ ಮಿ.ಕಾಮ್ ತಾಣಗಳಲ್ಲಿ ಖರೀದಿಗೆ ಲಭ್ಯ.ಆದ್ರೆ ಇದೀಗ ಬೆಲೆ ಏರಿಕೆ ಕಂಡಿದ್ದು, ರೆಡ್ಮಿ ನೋಟ್ 10 ಪ್ರೊ ಫೋನಿನ 6GB+128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 17,499ರೂ. ಆಗಿದೆ.

Best Mobiles in India

English summary
Xiaomi Redmi Note 10 Pro Review: Best Camera Phone At Budget Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+