ಹೊಸ ದಾಖಲೆ ನಿರ್ಮಿಸಿದ ಕ್ಸಿಯೋಮಿ ರೆಡ್‌ಮಿ ನೋಟ್ 4...!
Mi.com and Flipkart ನಲ್ಲಿ ಜನವರಿ 23 ರಂದು ಕ್ಸಿಯೋಮಿ ಕಂಪನಿ ತನ್ನ ರೆಡ್‌ಮಿ ನೋಟ್ 4 ಪೋನುಗಳನ್ನು ಮಾರಾಟಕ್ಕೆ ಇಟ್ಟಿತ್ತು.
ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಚೀನಾ ಮೂಲದ ಕ್ಸಿಯೋಮಿ ರೆಡ್‌ಮಿ ನೋಟ್ 4 ಫಸ್ಟ್ ಸೇಲಿನಲ್ಲಿಯೇ ಭರ್ಜರಿ ದಾಖಲೆ ನಿರ್ಮಾಣ ಮಾಡಿದೆ, ಸೇಲ್ ಆರಂಭವಾಗಿ 10 ನಿಮಿಷದಲ್ಲಿ ಸುಮಾರು 250,000 ಕ್ಸಿಯೋಮಿ ರೆಡ್‌ಮಿ ನೋಟ್ 4 ಪೋನುಗಳು ಮಾರಾಟವಾಗುವ ಮೂಲಕ ಹೊಸದೊಂದು ದಾಖಲೆ ಬರೆದಿದೆ.

ಓದಿರಿ: 7,800mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪಾಡ್ 3ಎಸ್ 10 ಟ್ಯಾಬ್ಲೆಟ್
Mi.com and Flipkart ನಲ್ಲಿ ಜನವರಿ 23 ರಂದು ಕ್ಸಿಯೋಮಿ ಕಂಪನಿ ತನ್ನ ರೆಡ್‌ಮಿ ನೋಟ್ 4 ಪೋನುಗಳನ್ನು ಮಾರಾಟಕ್ಕೆ ಇಟ್ಟಿತ್ತು. ಮೊದಲ ಸೇಲಿಗೆ ಜನರಿಂದ ಭಾರೀ ಪ್ರತಿಕ್ರಿಯೇ ವ್ಯಕ್ತವಾಗಿದ್ದು, ನೋಟ್ 4 ಕೊಂಡುಕೊಳ್ಳಲು ಮುಗಿ ಬಿದಿದ್ದು, ದೇಶದಾದ್ಯಂತ ಫ್ಲಾಷ್ ಸೇಲನ್ನೇ ಕಾಯುತ್ತಾ ಕುಳಿತಿದ್ದ ಮಂದಿ ಕೇವಲ 10 ನಿಮಿಷದಲ್ಲಿ 250,000 ಪೋನುಗಳನ್ನು ಕಂಡುಕೊಂಡಿದ್ದಾರೆ.
ಈ ಹಿಂದೆ ರೆಡ್‌ಮಿ ನೋಟ್ 3 ಪೋನು ಬಿಡುಗಡೆ ಮಾಡಿದ ಸಂದರ್ಭದಲ್ಲಿಯೂ ಜನರಿಂದ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಮೂರು ವಿಧದಲ್ಲಿ ಲಭ್ಯವಿತ್ತು. ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಬಲಿಷ್ಠವಾಗಿ ಬೇರೂರಿರುವ ಚೀನಾ ಮೂಲಕ ಶ್ಯೋಮಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಗುಣ ಮಟ್ಟದ ಪೋನ್ ಬಿಡುಗಡೆ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಚಾರ ಕಲೆಯನ್ನು ಕರಗತ ಮಾಡಿಕೊಂಡಂತಿದೆ.

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!
2GB RAM/ 32GB ಮೆಮೊರಿ ಇರುವ ಪೋನಿನ ಬೆಲೆ ರೂ. 9,999, 3GB RAM/ 32GB ಮೊಮೊರಿಯ ಪೋನಿನ ಬೆಲೆ 10,999 ರೂಗಳಾಗಿದ್ದು, 4GB RAM/ 64GB ಮೆಮೋರಿ ಇರುವ ಪೋನಿನ ಬೆಲೆ ರೂ. 12,999 ಆಗಿತ್ತು.


Click it and Unblock the Notifications





