ಬಿಡುಗಡೆಗೂ ಮುನ್ನವೇ ವೈರಲ್ ಆಯ್ತು ಒನ್‌ಪ್ಲಸ್ 5T ಅನ್‌ಬಾಕ್ಸಿಂಗ್ ವಿಡಿಯೋ...!

Written By:

ಚೀನಾ ಮೂಲದ ಒನ್‌ಪ್ಲಸ್ ತನ್ನ ನೂತನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5T ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿರುವ ಸಂದರ್ಭದಲ್ಲಿ ಒನ್‌ಪ್ಲಸ್ 5T ಅನ್‌ಬಾಕ್ಸಿಂಗ್ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನವೇ ವೈರಲ್ ಆಯ್ತು ಒನ್‌ಪ್ಲಸ್ 5T ಅನ್‌ಬಾಕ್ಸಿಂಗ್ ವಿಡಿಯೋ...!

ಓದಿರಿ: ಜಿಯೋಗೆ ರೂ.399ಕ್ಕೆ ರಿಚಾರ್ಜ್ ಮಾಡಿಸಿ ರೂ.2599 ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ..?

ಕೆಲವು ದಿನಗಳ ಹಿಂದೆ ಈ ಫೋನಿನ ಹಲವು ಚಿತ್ರಗಳು ಲೀಕ್ ಆಗಿತ್ತು. ಇದಾದ ಬೆನ್ನಲೇ ಒನ್‌ಪ್ಲಸ್ 5T ಅನ್‌ಬಾಕ್ಸಿಂಗ್ ವಿಡಿಯೋ ಲೀಕ್ ಆಗಿದ್ದು, ಸಖತ್ ಹವಾ ಕ್ರಿಯೇಟ್ ಮಾಡಿದೆ. ಈಗಾಗಲೇ ಹಲವಾರು ರೂಮರ್‌ಗಳಿಗೆ ಸಾಕ್ಷಿಯಾಗಿದ್ದ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ತನ್ನ ದರ್ಶನವನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ಗೆ ಸೈಡ್‌ ಹೊಡೆಯುವ ಫೇಸ್‌ಲಾಕ್:

ಆಪಲ್‌ಗೆ ಸೈಡ್‌ ಹೊಡೆಯುವ ಫೇಸ್‌ಲಾಕ್:

ಇದಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಐಫೋನ್ X ಫೇಸ್‌ ಐಡಿಗೆ ಸೆಡ್ಡು ಹೊಡೆಯುವಂತಹ ಫೇಸ್‌ಲಾಕ್ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರು ಫೋನ್ ನೋಡಿದರೆ ಸಾಕು ಅನ್‌ಲಾಕ್ ಆಗಲಿದೆ.

ವಿಡಿಯೋ ನೋಡಿ:

ಈಗಾಗಲೇ ಕೂತುಹಲವನ್ನು ಕೆರೆಳಿಸಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕುರಿತು ವಿಡಿಯೋ ಲೀಕ್ ಆಗಿದ್ದು, ನೀವೆ ಅದನ್ನು ನೋಡಿ.

ಡ್ಯುಯಲ್ ಲೆನ್ಸ್:

ಡ್ಯುಯಲ್ ಲೆನ್ಸ್:

ಒನ್‌ಪ್ಲಸ್ 5T ಫೋನ್‌ನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಈ ಹಿಂದಿನ ಫೋನ್‌ನಲ್ಲಿದ್ದಂತೆ ಎಡಭಾಗದ ಮೂಲೆಯಲ್ಲಿ ಇಡಲಾಗಿದೆ. ಫೋನಿನ ಹಿಂಭಾಗದಲ್ಲಿ ಒನ್‌ಪ್ಲಸ್ ಲೋಗೊ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ.

6 ವಿವಿಧ ಬ್ಯಾಕ್ ಕೇಸ್:

6 ವಿವಿಧ ಬ್ಯಾಕ್ ಕೇಸ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ಒಂದು ದೊಡ್ಡ ಬಾಕ್ಸ್‌ನಲ್ಲಿ ಲಭ್ಯವಿರಲಿದ್ದು, 6 ವಿವಿಧ ಮಾದರಿಯ ಬ್ಯಾಕ್‌ಕೇಸ್‌ಗಳನ್ನು ಕಂಪನಿಯೇ ನೀಡಿದೆ. ಎನ್ನಲಾಗಿದೆ. ಫೋ ಸೆಫ್ಟಿಗಾಗಿ ನೀವು ಮಾರುಕಟ್ಟೆಯಲ್ಲಿ ಕೇಸ್‌ಗಳಿಗೆ ಅಲೆದಾಡುವ ಅಗತ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus 5T unboxing video leaks. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot