ಭಾರತದಲ್ಲಿ ಲಾಂಚ್ ಆಯ್ತು ರೆಡ್‌ಮಿ ನೋಟ್ 4: ಬೆಲೆ ಎಷ್ಟು..? ವೈಶಿಷ್ಟ್ಯಗಳೇನು..?
ಸದ್ಯ ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣದಲ್ಲಿ ಲಭ್ಯವಿದೆ, ಸಿಲ್ವರ್, ಗೋಲ್ಡ್ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ.
ಕಳೆದ ಹಲವು ದಿನಗಳಿಂದಲೂ ಕುತೂಹಲವನ್ನು ಕೆರಳಿಸಿದ ಚೀನಾ ಮೂಲದ ಕ್ಸಿಯೋಮಿ ಕಂಪನಿ ಕೊನೆಗೂ Redmi Note 4 ಪೋನನ್ನು ಭಾರತದಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಿದೆ. ಇಂದಿನಿಂದಲೇ ಆನ್‌ಲೈನಿನಲ್ಲಿ ಈ ಪೋನ್ ಲಭ್ಯವಿರಲಿದ್ದು, ಫ್ಲಿಪ್ ಕಾರ್ಟ್‌ನಲ್ಲಿ ಸೇಲ್ ಆರಂಭವಾಗಲಿದೆ.

ಓದಿರಿ..: ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!
ಸದ್ಯ ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣದಲ್ಲಿ ಲಭ್ಯವಿದೆ, ಸಿಲ್ವರ್, ಗೋಲ್ಡ್ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ.

ಮೂರು ಮಾದರಿಯ ಪೋನ್ ಲಾಂಚ್:
ಒಟ್ಟು ಮೂರು ಮಾದರಿಯಲ್ಲಿ ಪೋನನ್ನು ಪರಿಚಯಿಸಿದ್ದು, 2GB RAM/ 32GB ಮೆಮೊರಿ ಇರುವ ಪೋನಿನ ಬೆಲೆ ರೂ. 9,999, 3GB RAM/ 32GB ಮೊಮೊರಿಯ ಪೋನಿನ ಬೆಲೆ 10,999 ರೂಗಳಾಗಿದ್ದು, 4GB RAM/ 64GB ಮೆಮೋರಿ ಇರುವ ಪೋನಿನ ಬೆಲೆ ರೂ. 12,999 ಆಗಿದೆ.

5.5 ಇಂಚಿನ Full HD ಡಿಸ್‌ಪ್ಲೇ
ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

13MP ಕ್ಯಾಮೆರಾ ವಿಥ್ ಡುಯಲ್ ಫ್ಲಾಷ್
ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

4G ಸಪೋರ್ಟ್ , ಆಂಡ್ರಾಯ್ಡ್ 6.0:
ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಪವರ್ ಫುಲ್ 4100mAH ಬ್ಯಾಟರಿ
ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಈ ಪೋನಿನ ಬೆಲೆ ಸುಮಾರು 10 ಸಾವಿರದ ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ.


Click it and Unblock the Notifications








