ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

|

ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭವಾದ ನಂತರದಿಂದ ಇಲ್ಲಿಯವರೆಗೂ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಮತ್ತು ಉಚಿತ 4G ಡೇಟಾ ಬಳಕೆ ಮಾಡಿಕೊಳ್ಳುವ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ಮುಂದೆಯೂ ಇದನ್ನು ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ಓದಿರಿ..:ವರ್ಷವೆಲ್ಲಾ ಉಚಿತ ಸೇವೆ ನೀಡಿದರೂ ಜಿಯೋಗೆ ಲಾಸ್ ಆಗೊಲ್ಲಾ!! ಹೇಗೆ?

ಆರಂಭದಲ್ಲಿ 'ವೆಲ್ ಕಮ್ ಆಫರ್' ಹೆಸರಿನಲ್ಲಿ ಉಚಿತ ಕೊಡುಗೆಯನ್ನು ನೀಡಿದರೆ, ನಂತರ ಮೂರು ತಿಂಗಳಾದ ಮೇಲೆ 'ಹ್ಯಾಪಿ ನ್ಯೂ ಇಯರ್' ಹೆಸರಿನಲ್ಲಿ ಮತ್ತೊಂದು ಸುತ್ತಿನ ಉಚಿತ ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡಿತ್ತು. ಈ ಕೊಡುಗೆಯೂ ಮಾರ್ಚ್ 31ಕ್ಕೆ ಕೊನೆಯಾಗಲಿದ್ದು, ಇದಾದ ನಂತರವೂ ಜಿಯೋ ಉಚಿತ ಕೊಡುಗೆಗಳು ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರ್ಚ್‌ 31ರ ನಂತರ ಡೇಟಾಗೆ ಸಾಮಾನ್ಯ ದರವನ್ನು ವಿಧಿಸುವ ಸಾಧ್ಯತೆ ಇದ್ದು, ಮತ್ತೆ ಮೂರು ತಿಂಗಳ ಕಾಲ ಉಚಿತ ಕರೆ ಮಾಡುವ ಸೇವೆಯನ್ನು ಮುಂದುವರೆಸಲಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಮೂಲಗಳ ಪ್ರಕಾರ ಜೂನ್ 30ರ ವರೆಗೂ ಉಚಿತ ಕೊಡುಗೆಯನ್ನು ನೀಡಲು ಜಿಯೋ ತೀರ್ಮಾನಿಸಿದೆ ಎನ್ನಲಾಗಿದೆ.

ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ಓದಿರಿ..: ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

ಈ ಅವಧಿಯಲ್ಲಿ ಡೇಟಾಗಾಗಿ ತನ್ನ ಗ್ರಾಹಕರಿಗೆ 100 ರೂ. ಗಳ ದರ ವಿಧಿಸಲಿದ್ದು, ಅನಿಯಮಿತ ಉಚಿತ ಕರೆ ಸೇವೆಯನ್ನು ಸಹ ನೀಡಲಿದೆ ಎನ್ನಲಾಗಿದೆ. ಇದು ಸಹ ಬೇರೆ ಕಂಪನಿಗಳು ಉಚಿತ ಕೊಡುಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ದರ ವಿಧಿಸಲು ಮುಂದಾಗಿರುವುದಾಗಿ ಜಿಯೋ ಮೂಲಗಳು ತಿಳಿಸಿವೆ.

ಜಿಯೋ ಕಳೆದ ವರ್ಷ ಸೆಪ್ಟೆಂಬರ್ 5 ರಂದು ಲಾಂಚ್ ಆಗಿದ್ದು, ಈಗಾಗಲೇ ಭಾರತದಾದ್ಯಂತ ಸುಮಾರು 72 ಮಿಲಿಯನ್ ಬಳಕೆದಾರನ್ನು ಹೊಂದಿದ್ದು, ಈ ಸಂಖ್ಯೆಯನ್ನು ಮತಷ್ಟು ಹೆಚ್ಚಿಸುವ ಸಲುವಾಗಿ ಉಚಿತ ಕೊಡುಗೆಯನ್ನು ಮುಂದುವರೆಸಲಾಗುತ್ತಿದೆ ಎನ್ನಲಾಗಿದೆ.

Best Mobiles in India

Read more about:
English summary
After a six-month free run which ends on March 31, Reliance Jio Infocomm subscribers may continue to enjoy data services at a nominal rate, combined with free voice calls, for another three months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X