ಇಂದು ಫ್ಲಿಪ್ ಕಾರ್ಟಿನಲ್ಲಿ ಶಿಯೋಮಿ ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್..!!!
ಜುಲೈ 5 ರಂದು 12 ಗಂಟೆಗೆ ಸೇಲ್ ಆರಂಭವಾಗಲಿದೆ. ಬಿಡುಗಡೆಯಾದ ನಂತರದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೆಡ್‌ಮಿ ನೋಟ್ 4 ಮತ್ತೊಮ್ಮೆ ಗ್ರಾಹಕರ ಮುಂದೆ ಬಂದಿದೆ.
ಬಿಡುಗಡೆಯಾದ ನಂತರದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೆಡ್‌ಮಿ ನೋಟ್ 4 ಮತ್ತೊಮ್ಮೆ ಗ್ರಾಹಕರ ಮುಂದೆ ಬಂದಿದೆ. ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಇಂದು ಫ್ಲಿಪ್ ಕಾರ್ಟ್ ಮತ್ತು ಮಿ.ಕಾಂ ನಲ್ಲಿ ಮಾರಾಟವಾಗುತ್ತಿದೆ. ಜುಲೈ 5 ರಂದು 12 ಗಂಟೆಗೆ ಸೇಲ್ ಆರಂಭವಾಗಲಿದೆ.
ಓದಿರಿ: GST ಎಫೆಕ್ಟ್: ಡಬ್ಬಲ್ ಆಯ್ತು ಜಿಯೋ 4G VoLTE ಫೀಚರ್ ಪೋನ್ ಬೆಲೆ..!!

ಈಗಾಗಲೇ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಶಿಯೋಮಿ ತಯಾರಿಸಿ ನಡೆಸಿದ್ದರೂ ಸಹ ರೆಡ್‌ಮಿ ನೋಟ್ 4 ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಇನ್ನು ಸಹ ಅಭಿಮಾನಿಗಳು ಈ ಫೋನನ್ನು ಕೊಂಡುಕೊಳ್ಳಲು ತುದಿಗಾಗಿ ನಿಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಫೋನಿನ ಕುರಿತಾದ ಮಾಹಿತಿ ಇಲ್ಲಿದೆ.

Full HD ಡಿಸ್‌ಪ್ಲೇ
ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ನೋಡಲು ಉತ್ತಮವಾಗಿದೆ

ಮೂರು ಆವೃತ್ತಿಗಳಲ್ಲಿ ಲಭ್ಯ
ರೆಡ್‌ಮಿ ನೋಟ್ 4 ಪೋನ್ ಮೂರು ಮಾದರಿಯಲ್ಲಿ ಲಭ್ಯವಿದ್ದು, ಒಂದು 2GB RAM ಜೊತೆಗೆ 32GB ಇಂಟರ್ನಲ್ ಮೆಮೊರಿಯೊಂದಿಗೆ, ಮತ್ತೊಂದು 3GB RAM ಜೊತೆಗೆ 32GB ಇಂಟರ್ನಲ್ ಮೊಮೊರಿ ಜೊತೆಗೆ, ಇನ್ನೊಂದು ಆವೃತ್ತಿ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಉತ್ತಮವಾದ ಕ್ಯಾಮೆರಾ:
ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

4G VoLTE ಸಫೋರ್ಟ್ ಮಾಡಲಿದೆ:
ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ ಹೊಂದಿರುವ ಫೋನಿನಲ್ಲಿ ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಪವರ್ ಫುಲ್ ಬ್ಯಾಟರಿ:
ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಬೆಲೆ ಕ್ರಮವಾಗಿ ರೂ.9,999, ರೂ.10,999 ಮತ್ತು ರೂ.12,999 ಗಳಾಗಿದೆ.


Click it and Unblock the Notifications








