Subscribe to Gizbot

GST ಎಫೆಕ್ಟ್: ಡಬ್ಬಲ್ ಆಯ್ತು ಜಿಯೋ 4G VoLTE ಫೀಚರ್ ಪೋನ್ ಬೆಲೆ..!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಈಗಾಗಲೇ 4G VoLTE ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಿದೆ ಎನ್ನುವ ವಿಚಾರವನ್ನು ಈಗಾಗಲೇ ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಸದ್ಯ ದೊರೆಯುತ್ತಿರುವ ಮಾಹಿತಿಯ ಪ್ರಕಾರ ಜಿಯೋ ಲಾಂಚ್ ಮಾಡುವ ಫೀಚರ್ ಫೋನ್ ರೂ.1000ಕ್ಕೆ ದೊರೆಯುವುದಿಲ್ಲ ಎನ್ನಲಾಗಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ.

GST ಎಫೆಕ್ಟ್: ಡಬ್ಬಲ್ ಆಯ್ತು ಜಿಯೋ 4G VoLTE ಫೀಚರ್ ಪೋನ್ ಬೆಲೆ..!!

ಓದಿರಿ: ಜಿಯೋ ವಿರುದ್ಧ ಜಿದ್ದಿಗೆ ಬಿದ್ದ ಏರ್‌ಟೆಲ್ ಬೆಸ್ಟ್ ಯಾಕೆ..? ಉತ್ತರ ಇಲ್ಲಿದೆ

ರಿಲಯನ್ಸ್ 4G VoLTE ಫೀಚರ್ ಪೋನ್ ಅನ್ನು ಜಿಯೋ ಬ್ರಾಂಡ್ ಬದಲಾಗಿ LFY ಬ್ರಾಂಡ್ ನ ಹೆಸರಿನಲ್ಲಿ ಲಾಂಚ್ ಮಾಡಲಿದ್ದು, ಬೆಲೆಯೂ ರೂ.2,369 ಆಗಲಿದೆ ಎನ್ನಲಾಗಿದೆ. ಈ ಕುರಿತು ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು ಎರಡು ಫೀಚರ್ ಫೋನ್:

ಒಟ್ಟು ಎರಡು ಫೀಚರ್ ಫೋನ್:

ರಿಲಯನ್ಸ್ LFY ಬ್ರಾಂಡ್ ನಲ್ಲಿ ಒಟ್ಟು ಎರಡು 4G VoLTE ಫೀಚರ್ ಪೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಒಂದು ಕ್ವಾಲ್ಕಮ್ 205 ಪ್ರೋಸೆಸರ್ ಹಾಗೂ ಸ್ಪೆರೆಡ್ರಮ್ ಪ್ರೋಸೆಸರ್ ಅನ್ನು ಒಳಗೊಂಡಿರಲಿದೆ.

ಫೋನಿನ ವಿಶೇಷತೆಗಳು:

ಫೋನಿನ ವಿಶೇಷತೆಗಳು:

ಈ ಎರಡು ಫೋನಿನಲ್ಲಿಯೂ ಪ್ರೋಸೆಸರ್ ಬಿಟ್ಟರೇ ಇನ್ನೇಲ್ಲ ಆಯ್ಕೆಗಳು ಒಂದೇ ಮಾದರಿಯಲ್ಲಿ ಇರಲಿದೆ. ಎರಡರಲ್ಲೂ 512 MB RAM ಕಾಣಬಹುದಾಗಿದೆ. ಅಲ್ಲದೇ 4GB ಇಂಟರ್ನಲ್ ಮೆಮೊರರಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಇವುಗಳಲ್ಲಿ 2000mAh ಬ್ಯಾಟರಿಯನ್ನು ಕಾಣಬಹುದಾಗಿದೆ.

ಅಸಲಿ ಬೆಲೆ ಎಷ್ಟು..?

ಅಸಲಿ ಬೆಲೆ ಎಷ್ಟು..?

ಈ ಎರಡು ಫೀಚರ್ ಫೋನ್ ಗಳ ಅಸಲಿ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ. ಕ್ವಾಲ್ಕಮ್ 205 ಪ್ರೋಸೆಸರ್ ಇರುವ ಫೋನಿಗೆ ರೂ.1800 ಆಗಿದ್ದು, ಸ್ಪೆರೆಡ್ರಮ್ ಪ್ರೋಸೆಸರ್ ಇರುವ ಫೋನಿನ ಬೆಲೆ ರೂ.1.730 ಆಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಲೆ ಏರಿಕೆಗೆ GST ಕಾರಣ ಎನ್ನಲಾಗಿದೆ.

ಅಪ್‌ಡೇಟ್ ವರದಿ.!!

ಇದೀಗ ಬಂದಿರುವ ಸುದ್ದಿಯ ಪ್ರಕಾರ ಜಿಯೋ 4G ಫೀಚರ್ ಫೋನ್ ಕೇವಲ 500 ರೂಪಾಯಿಗಳಿಗೆ ಬಿಡುಗಡೆಯಾಗುತ್ತದೆ ಎನ್ನಲಾಗಿರುವ ಸುದ್ದಿ ಹೊರಬಿದ್ದಿದೆ. ಹಾಗಾಗಿ, ಎರಡೂ ಸುದ್ದಿಗಳು ಏಕಕಾಲದಲ್ಲಿ ಪ್ರಕಟವಾಗಿದ್ದು, ಈ ನೂತನ ಅಪ್‌ಡೇಟ್ ಸುದ್ದಿ ನೋಡಿರಿ.!!

ಓದಿರಿ:ಇದೇ 21ಕ್ಕೆ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆ!..ಪ್ರಮುಖ ಪತ್ರಿಕೆ ವರದಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
We know that Reliance Jio is working on a new VoLTE capable feature phone. We have come across rumors that this feature phone will be priced disruptively in the Indian market. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot