ಇಂದು ಶಿಯೋಮಿ ರೆಡ್‌ಮಿ ನೋಟ್ 4 ಸೇಲ್!!
ಕೇವಲ ಹತ್ತು ನಿಮಿಷದಲ್ಲಿ 2,50,000 ಸ್ಮಾರ್ಟ್‌ಫೋನ್ ಮಾರಾಟವಾದ ಶಿಯೋಮಿ ರೆಡ್‌ಮಿ ನೋಟ್ 4 ಇಂದು ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿದೆ.!
ಕೇವಲ ಹತ್ತು ನಿಮಿಷದಲ್ಲಿ 2,50,000 ಸ್ಮಾರ್ಟ್‌ಫೋನ್ ಮಾರಾಟವಾದ ಶಿಯೋಮಿ ರೆಡ್‌ಮಿ ನೋಟ್ 4 ಇಂದು ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿದೆ.! ಇಂದು ಮಧ್ಯಾಹ್ನ 12 ಗಂಟೆಗೆ mi.com ನಲ್ಲಿ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬುಕ್ ಮಾಡಬಹುದಾಗಿದೆ.!!
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.! ಇದೇ ಮೊದಲ ಸಾರಿ ರೆಡ್‌ಮಿ ತನ್ನ ವೆಬ್‌ಸೈಟ್‌ನಲ್ಲಿಯೇ ಫ್ಲಾಶ್‌ಸೇಲ್‌ಗೆ ಇಟ್ಟಿದೆ.!!
ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ! ಇದು ಪಕ್ಕಾ ಬ್ಯುಸಿನೆಸ್!!
ಪ್ರಸ್ತುತ ಬೆಲೆಯಲ್ಲಿ ರೆಡ್‌ಮಿ ಸ್ಮಾರ್ಟ್‌ಫೊನ್‌ಗಳು ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿದ್ದು, ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚಿನ ಹೆಚ್ ಡಿಸ್‌ಪ್ಲೇ!
ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ.ಜೊತೆಗೆ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

13MP ರಿಯರ್ 5MP ಸೆಲ್ಫಿ ಕ್ಯಾಮೆರಾ
ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

ಆಂಡ್ರಾಯ್ಡ್ 6.0:
ರೆಡ್‌ಮಿ ನೋಟ್ 4 ಪೋನ್ 4ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಸಹ ಹೊಂದಿದೆ.

ಪವರ್ ಫುಲ್ 4100mAH ಬ್ಯಾಟರಿ!!
ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ನಿರಂತರವಾಗಿ 3 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎನ್ನಲಾಗಿದೆ.


Click it and Unblock the Notifications




