ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ 'ರೆಡ್‌ಮಿ ನೋಟ್ 4' ಸೇಲ್ ಆರಂಭ
ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣ (ಸಿಲ್ವರ್, ಗೋಲ್ಡ್ ಮತ್ತು ಗ್ರೇ) ಹಾಗೂ ಮೂರು ವಿಧದಲ್ಲಿ ಲಭ್ಯವಿದೆ.
ಜನವರಿ 19ರಂದು ಭಾರತದಲ್ಲಿ ಲಾಂಚ್ ಆದ ಚೀನಾ ಮೂಲದ ಕ್ಸಿಯೋಮಿ ಕಂಪನಿಯ 'ರೆಡ್‌ಮಿ ನೋಟ್ 4' ಪೋನು ಇಂದು ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಮತ್ತು ಮಿ.ಕಾಮ್ (Flipkart and Mi.com) ನಲ್ಲಿ ಮಾರಾಟಗೊಳ್ಳಿದ್ದು, ಮಧ್ಯಾಹ್ನ 12ಕ್ಕೆ ಸೇಲ್ ಆರಂಭಾವಾಗಲಿದೆ.

ಓದಿರಿ..: ಜೂನ್ 30ರವರೆಗೂ ಜಿಯೋ ಫುಲ್ ಫ್ರೀ, ಆದರೆ ತಿಂಗಳು ತಿಂಗಳು ಹಣ ಕಟ್ಟಬೇಕು..!
ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣ (ಸಿಲ್ವರ್, ಗೋಲ್ಡ್ ಮತ್ತು ಗ್ರೇ) ಹಾಗೂ ಮೂರು ವಿಧದಲ್ಲಿ ಲಭ್ಯವಿದೆ, 2GB RAM/ 32GB ಮೆಮೊರಿ ಇರುವ ಪೋನಿನ ಬೆಲೆ ರೂ. 9,999, 3GB RAM/ 32GB ಮೊಮೊರಿಯ ಪೋನಿನ ಬೆಲೆ 10,999 ರೂಗಳಾಗಿದ್ದು, 4GB RAM/ 64GB ಮೆಮೋರಿ ಇರುವ ಪೋನಿನ ಬೆಲೆ ರೂ. 12,999 ಆಗಿದ್ದು, ಈ ಪೋನಿನ ಕುರಿತು ನೋಡುವುದಾದರೆ.

ದೀರ್ಘಕಾಲದ ಬ್ಯಾಟರಿ ಬಾಳಿಕೆ
ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ.

ಗುಣಮಟ್ಟದ ಡಿಸ್‌ಪ್ಲೇ:
ಇಂದು ಸೇಲಿಗೆ ಇರುವ ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

ಉತ್ತಮ ಕ್ಯಾಮೆರಾ:
ಉತ್ತಮ ಚಿತ್ರಗಳನ್ನು ಸೆರೆ ಹಿಡಿಯುವ ಸಲುವಾಗಿ ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

ಇತರೆ ವಿಶೇಷತೆಗಳು:
ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.


Click it and Unblock the Notifications








