ಜೂನ್ 30ರವರೆಗೂ ಜಿಯೋ ಫುಲ್ ಫ್ರೀ, ಆದರೆ ತಿಂಗಳು ತಿಂಗಳು ಹಣ ಕಟ್ಟಬೇಕು..!
ಈಗ ಇದಾದ ಮೇಲೆ ಮತ್ತೆ ಮೂರು ತಿಂಗಳು ಉಚಿತ ಕೊಡುಗೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದೆ.
ರಿಲಯನ್ಸ್ ಮಾಲಿಕತ್ವದ ಜಿಯೋ ತನ್ನ ಉಚಿತ ಕೊಡುಗೆಗಳನ್ನು ಮತ್ತೇ ಮೂರು ತಿಂಗಳೂ ವಿಸ್ತರಿಸುವ ಮನಸ್ಸು ಮಾಡಿದೆ. 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೊದಲ ಮೂರು ತಿಂಗಳು ಉಚಿತವಾಗಿ ಕರೆ ಮತ್ತು ಡೇಟಾ ಸೇವೆ ನೀಡಿದ್ದ ಜಿಯೋ, ನಂತರ 'ಹ್ಯಾಪಿ ನ್ಯೂ ಇಯರ್' ಹೆಸರಲ್ಲಿ ಮತ್ತೆ ಮೂರು ತಿಂಗಳು ಉಚಿತ ಕೊಡುಗೆಯನ್ನು ನೀಡಿತ್ತು.

ಓದಿರಿ..: ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?
ಈಗ ಇದಾದ ಮೇಲೆ ಮತ್ತೆ ಮೂರು ತಿಂಗಳು ಉಚಿತ ಕೊಡುಗೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದೆ. ಇನ್ನು ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನ್ನು ತನ್ನ ಬಳಿಗೆ ಸೆಳೆದುಕೊಳ್ಳಲು ಜಿಯೋ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.
ಈ ಬಾರಿ ಜಿಯೋ ಉಚಿತ ಕೊಡುಗೆಯನ್ನು ನೀಡಲು ಇತರೆ ಕಂಪನಿಗಳ ವಿರೋಧ ಎದುರಿಸಬೇಕಾಗಿದ್ದು, ಮಾರುಕಟ್ಟೆಯಲ್ಲಿ ಸ್ಪರ್ಧೇ ಎದುರಿಸಲಾಗಿದೆ ಇರುವ ಕಂಪನಿಗಳು ಈಗಾಗಲೇ ಜಿಯೋ ವಿರುದ್ಧ ಆರೋಪಗಳ ಸುರಿಮಳೆಯನ್ನು ಸುರಿಸುತ್ತವೆ. ಈ ಹಿನ್ನಲೆಯಲ್ಲಿ ಈ ಬಾರಿ ಉಚಿತ ಕೊಡುಗೆಗಳನ್ನು ಬಳಸಲು ಜಿಯೋ ದರವನ್ನು ವಿಧಿಸಲು ಮುಂದಾಗಿದೆ.

ಓದಿರಿ..: ಜಿ-ಮೇಲ್ ಆಕೌಂಟ್ ಸಹ ಸೇಫ್ ಆಲ್ವಾ.? ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು
ಮಾರ್ಚ್ ನಿಂದ ಜೂನ್ ವರೆಗೂ ಉಚಿತ ಕೊಡುಗೆಯನ್ನು ಪಡೆಯಲು ಜಿಯೋ ಗ್ರಾಹಕರು ಪ್ರತಿ ತಿಂಗಳು ನೂರು ರೂ. ಪಾವತಿ ಮಾಡಬೇಕಾಗಿದೆ. ಹೆಚ್ಚಿನ ಡೇಟಾ ಪ್ಲಾನ್ ಬೇಕು ಅಂದವರು ಮಾತ್ರ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ.


Click it and Unblock the Notifications








