Home
ಮೊಬೈಲ್

ಮುಂದಿನ ತಿಂಗಳು ಭಾರತದಲ್ಲಿ ಶಿಯೋಮಿ "ರೆಡ್‌ಮಿ ನೋಟ್ 5" ರಿಲೀಸ್!!

ಶಿಯೋಮಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಲಿಂಟನ್ ಜೆಫ್ ಈ ಬಗ್ಗೆ ಮಾಹಿತಿ ನೀಡಿದ್ದು, 2018 ರ ಫೆಬ್ರವರಿ ತಿಂಗಳಿನಲ್ಲಿ ಶಿಯೋಮಿ ಭಾರತದಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ತಿಳಿಸಿದ್ದಾರೆ.!

By Bhaskar N J

2018ನೇ ವರ್ಷ ಶುರವಾಗಿ ಹತ್ತಿರ ಹತ್ತಿರ ಒಂದು ತಿಂಗಳು ಕಳೆಯುತ್ತಾ ಬಂದರೂ ಶಿಯೋಮಿ ಇಂಡಿಯಾ ಯಾವುದೇ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡದೆ ಮೂಕವಾಗಿದೆ.!! ಆದರೆ, ಇದೇ ಫೆಬ್ರವರಿ ತಿಂಗಳಿನಲ್ಲಿ ಶಿಯೋಮಿ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚು ಹರಿಸಲು ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುತ್ತಿದೆ.!!

ಹೌದು, ಶಿಯೋಮಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಲಿಂಟನ್ ಜೆಫ್ ಈ ಬಗ್ಗೆ ಮಾಹಿತಿ ನೀಡಿದ್ದು, 2018 ರ ಫೆಬ್ರವರಿ ತಿಂಗಳಿನಲ್ಲಿ ಶಿಯೋಮಿ ಭಾರತದಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ತಿಳಿಸಿದ್ದಾರೆ.! ಬಿಡುಗಡೆ ಮಾಡುತ್ತಿರುವ ಫೋನ್ ಯಾವುದು ಎಂಬುದನ್ನು ಅವರು ಹೇಳದಿದ್ದರೂ ಸಹ ಶಿಯೋಮಿ ರೆಡ್‌ಮಿ 5 ಫೋನ್ ಎಂಬುದು ಸ್ಪಷ್ಟವಾಗಿದೆ.!!

ಮುಂದಿನ ತಿಂಗಳು ಭಾರತದಲ್ಲಿ ಶಿಯೋಮಿ

ಶಿಯೋಮಿ ಇಂಡಿಯಾದ ಮೂಲಗಳ ಪ್ರಕಾರ, 2018 ರ ಫೆಬ್ರವರಿ ತಿಂಗಳಿನಲ್ಲಿ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಯಾಗುತ್ತದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.! ಹಾಗಾದರೆ, ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಶಿಯೋಮಿ ರೆಡ್‌ಮಿ ನೋಟ್ 5 ಫೀಚರ್ ಏನಿವೆ? ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ರೆಡ್‌ಮಿ ನೋಟ್ 4 ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಯಾಗಿದ್ದು, ಚೀನಾದ ಮತ್ತೊಂದು ವೆಬ್‌ಸೈಟ್ 'ವಿಬೊ' ನೀಡಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 1080 x 2160 ಪಿಕ್ಸೆಲ್ ರೆಸಲ್ಯೂಶನ್ ಹೈ ಹೆಚ್‌ಡಿ 5.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. 18:9 ರೆಷ್ಯೂ ಸ್ಕ್ರೀನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.!!

ಕ್ಯಾಮೆರಾಗೆ ಹೆಚ್ಚು ಒತ್ತು!!

ಕ್ಯಾಮೆರಾಗೆ ಹೆಚ್ಚು ಒತ್ತು!!

ರೆಡ್‌ಮಿ ನೋಟ್ 5 ಕ್ಯಾಮೆರಾದಲ್ಲಿ ಭಾರಿ ಬದಲಾವಣೆಯಾಗಿದ್ದು, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ಇರಲಿವೆ.!! ಇದು ರೆಡ್‌ಮಿ ನೋಟ್ 4ನಲ್ಲಿದ ನೂನ್ಯತೆಗಳನ್ನು ಸರಿಪಡಿಸಲಿದೆ ಎಂದು 'ವಿಬೊ' ವೆಬ್‌ಸೈಟ್ ಅಭಿಪ್ರಾಯ ವ್ಯಕ್ತಪಡಿಸಿದೆ!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!

ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿದೆ ವರದಿ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1
ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!

ರೆಡ್‌ಮಿ ನೋಟ್ 5 ಬೆಲೆ ಎಷ್ಟು?

ರೆಡ್‌ಮಿ ನೋಟ್ 5 ಬೆಲೆ ಎಷ್ಟು?

ಚೀನಾದ ಪ್ರಮುಖ ವೆಬ್‌ಸೈಟ್ ಗಿಜ್ಮೊ ಚೈನಾ ವರದಿಯಂತೆ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬೆಲೆ ಕೇವಲ 699ಯೆನ್‌ಗಳಂತೆ.!! ಅಂದರೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 6,800 ರೂಪಾಯಿಗಳಿಗೆ ರೆಡ್‌ಮಿ ನೋಟ್ 5 ಮಾರುಕಟ್ಟೆಗೆ ಬರಲಿದೆಯಂತೆ.!!

ಓದಿರಿ:ಅಮೆಜಾನ್‌ನಲ್ಲಿ ಈ 3 ದಿನ ಮೊಬೈಲ್ ಖರೀದಿಸುವವರಿಗೆ ಬಂಪರ್!..ಇದೇ ಮೊದಲು ಇಂತಹ ಆಫರ್!!

ಚಿತ್ರ ಮೂಲ: 91ಮೊಬೈಲ್ಸ್

Best Mobiles in India

English summary
Xiaomi Redmi Note 5 May Launch in India Next Month as the Company Promises Exciting February. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+