ಬಜೆಟ್‌ ಬೆಲೆಯಲ್ಲಿ ಮೊದಲ ಆಯ್ಕೆ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್.?!

|

ಶಿಯೋಮಿ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂದರೇ ಸಾಕು ಸ್ಮಾರ್ಟ್‌ಫೋನ್‌ ಪ್ರಿಯರು ಒಂದು ಕ್ಷಣ ಕಣ್ಣರಳಿಸಿ ನೋಡುತ್ತಾರೆ. ಇತ್ತೀಚಿಗಷ್ಟೆ ರಿಲೀಸ್‌ ಆಗಿರುವ ಬಹುನಿರೀಕ್ಷಿತ 'ರೆಡ್ಮಿ ನೋಟ್‌ 7' ಮತ್ತು 'ರೆಡ್ಮಿ ನೋಟ್‌ 7 ಪ್ರೋ' ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮುನ್ನ ಕೆಲ ತಿಂಗಳಿಂದ ಗ್ರಾಹಕರ ಕುತೂಹಲ ಹೆಚ್ಚಿಸಿದ್ದವು. ಹೀಗಾಗಿ ಬಜೆಟ್‌ ಬೆಲೆಯ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್‌ ಸೌಂಡಮಾಡಲಿದೆ.

ಬಜೆಟ್‌ ಬೆಲೆಯಲ್ಲಿ ಮೊದಲ ಆಯ್ಕೆ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್.?!

ಹೌದು, ನೂತನ ಫೀಚರ್ಸ್‌ಗಳನ್ನು ಹೊಂದಿರುವ ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್‌ ಮೊನ್ನೆ ಫ್ಲಿಪ್‌ಕಾರ್ಟ್‌ ಫ್ಲಾಶ್ ಸೇಲ್‌ನಲ್ಲಿ 2,00,000 ಸೇಲ್‌ ಆಗಿ ಅಚ್ಚರಿ ಮೂಡಿಸಿತ್ತು. ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 3GB RAM ವೇರಿಯಂಟ್‌ ಸ್ಮಾರ್ಟ್‌ಫೋನ್ ಬೆಲೆಯು 9999ರೂ.ಗಳು ಮತ್ತು 4GB RAM ವೇರಿಯಂಟ್‌ ಬೆಲೆಯು 11999ರೂ.ಗಳು ಆಗಿದೆ. ಪ್ರಸಕ್ತ ವರ್ಷದಲ್ಲಿ ಅತ್ಯಧಿಕ ಸೇಲ್‌ ಆಗಲಿದೆ ಎನ್ನಲಾಗುತ್ತಿದೆ.

ಬಜೆಟ್‌ ಬೆಲೆಯಲ್ಲಿ ಮೊದಲ ಆಯ್ಕೆ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್.?!

ರೆಡ್ಮಿ ನೋಟ್‌ 7 ಸ್ಮಾರ್ಟ್‌ಫೋನ್ 'ಫುಲ್‌ ಹೆಚ್‌ಡಿ ಪ್ಲಸ್‌' ಡಿಸ್‌ಪ್ಲೇಯನ್ನು ಹೊಂದಿದ್ದು ಡಿಸ್‌ಪ್ಲೇಯ ಮೆಲ್ಭಾಗದಲ್ಲಿ ಪುಟ್ಟ ಟಿಯರ್‌ಡ್ರಾಪ್‌ ನಾಚ್‌ ಇದೆ. ಇದರೊಂದಿಗೆ ಆಕ್ಟಾಕೋರ್‌ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660soc ಪ್ರೊಸೆಸರ್‌ನೊಂದಿಗೆ ಆಂಡ್ರಾಯ್ಡ್‌ 9.0 ಪೈ ಓಎಸ್‌ನಲ್ಲಿ ಕಾರ್ಯ ನಿರ್ವಹಿಸಲಿರುವ ಈ ಸ್ಮಾರ್ಟ್‌ಫೋನ್‌ 3GB RAM ಮತ್ತು 4GB RAM ವೇರಿಯಂಟ್‌ ಆಯ್ಕೆಯಲ್ಲಿ ದೊರೆಯಲಿದೆ.

ಬಜೆಟ್‌ ಬೆಲೆಯಲ್ಲಿ ಮೊದಲ ಆಯ್ಕೆ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್.?!

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 12 ಮೆಗಾಪಿಕ್ಸಲ್ ಮತ್ತು 2 ಮೆಗಾಪಿಕ್ಸಲ್ ಸಾಮರ್ಥ್ಯದ ಎರಡು ರೇರ್‌ ಕ್ಯಾಮೆರಾಗಳನ್ನು ನೀಡಲಾಗಿದ್ದು, ಫೋನಿನ ಮುಂಬದಿಯಲ್ಲಿ ಸೆಲ್ಫಿಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಸೆಲ್ಫಿ ಕ್ಯಾಮೆರಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಬ್ಯುಟಿಫಿಕೇಶನ್ ಆಯ್ಕೆ ಇದ್ದು, ಸ್ಟುಡಿಯೋ ಪೋರ್ಟ್‌ರೇಟ್ ಲೈಟಿಂಗ್ ಎಫೆಕ್ಟ್ಸ್ ಆಯ್ಕೆಯನ್ನು ಸಹ ಒಳಗೊಂಡಿದೆ.

ಬಜೆಟ್‌ ಬೆಲೆಯಲ್ಲಿ ಮೊದಲ ಆಯ್ಕೆ 'ರೆಡ್ಮಿ ನೋಟ್‌ 7' ಸ್ಮಾರ್ಟ್‌ಫೋನ್.?!

ರೆಡ್ಮಿ ನೋಟ್‌ 7 ಪ್ರೋ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಇದ್ದು, ಈ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ಅನ್ನು ಹೊಂದಿದ್ದು, ಇನ್ನು ಎರಡನೇ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಇದರಲ್ಲಿ ಆಟೋಮ್ಯಾಟಿಕ್ ಆಗಿ ವಾಲ್‌ಪೇಪರ್‌ ಬದಲಾಗುವ ಆಯ್ಕೆ ಇದ್ದು, ಪ್ರತಿಬಾರಿ ಫೋನ್‌ ತೆರೆದಾಗಲೂ ವಾಲ್‌ಪೇಪರ್ ಬದಲಾಗುತ್ತದೆ. ಸ್ಮಾರ್ಟ್‌ಫೋನ್‌ಗೆ ಭದ್ರತೆ ಆಪ್‌ ನೀಡಲಾಗಿದೆ.

ರೆಡ್ಮಿ ನೋಟ್‌ 7 ಸ್ಮಾರ್ಟ್‌ಫೋನಿನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಈ ಬ್ಯಾಟರಿ ಸುಮಾರು ಎರಡು ದಿನ ಬಾಳುವ ಶಕ್ತಿ ಹೊಂದಿದೆ. ಕ್ವಿಕ್‌ ಚಾರ್ಜ್‌ 4.0 ತಂತ್ರಜ್ಞಾನವನ್ನು ಹೊಂದಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ.

Best Mobiles in India

English summary
Xiaomi Redmi Note 7 is priced at Rs. 9,999 for the 3GB RAM variant and at Rs. 11,999 for the 4GB RAM variant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X