ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

|

ಇತ್ತೀಚಿಗೆ 'ರೆಡ್ಮಿ ನೋಟ್‌ 7 ಪ್ರೊ ಸ್ಮಾರ್ಟ್‌ಫೋನ್‌ ಮೂಲಕ 48ಎಂಪಿ ಕ್ಯಾಮೆರಾ ಪರಿಚಯಿಸಿ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸುದ್ದಿಯಾಗಿದ್ದ 'ಶಿಯೋಮಿ' ಕಂಪನಿಯು ಇದೀಗ ಗ್ರಾಹಕರಿಗೆ ಮತ್ತೊಂದು ಅಚ್ಚರಿಯನ್ನು ನೀಡಿದೆ. ಇದೀಗ ಮತ್ತೆ 48ಎಂಪಿ ಕ್ಯಾಮೆರಾ ರೆಡ್ಮಿ ನೋಟ್ 7ಎಸ್‌ ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್ ಮಾಡಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ.

ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

ಹೌದು, ಶಿಯೋಮಿ ಕಂಪನಿಯು ರೆಡ್ಮಿ ನೋಟ್ 7ಎಸ್‌ ಸ್ಮಾರ್ಟ್‌ಫೋನ್‌ ಅನ್ನು ಇಂದು (ಮೇ.20) ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿದೆ. ಡ್ಯುಯಲ್ ಗೊರಿಲ್ಲಾ ಗ್ಲಾಸ್‌, ಸೂಪರ್‌, ಪಿಕ್ಸಲ್ ಆಯ್ಕೆಗಳು ಸೇರಿದಂತೆ 4000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಈ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ.

ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

ರೆಡ್ಮಿ ನೋಟ್ 7ಎಸ್‌ ಸ್ಮಾರ್ಟ್‌ಫೋನ್ ಗಟ್ಟಿಮುಟ್ಟಾದ ರಚನೆಯನ್ನು ಪಡೆದಿದ್ದು, ಸ್ಕ್ರಾಚ್ ಮತ್ತು ಸ್ಲಾಶ್‌ಗಳಿಂದ ಮುಕ್ತವಾಗಿದೆ. ಹಾಗೆಯೇ 'IR ಬ್ಲಾಸ್ಟರ್' ಆಯ್ಕೆಯನ್ನು ನೀಡಲಾಗಿದ್ದು, ಈ ಆಯ್ಕೆಯಿಂದ ಇತರೆ ಡಿವೈಸ್‌ಗಳಿಗೆ ಸ್ಮಾರ್ಟ್‌ಫೋನ್‌ ಕನೆಕ್ಟ್ ಮಾಡಬಹುದಾಗಿದೆ. ಹಾಗಾದರೇ ಶಿಯೋಮಿ ರೆಡ್ಮಿ ನೋಟ್‌ 7ಎಸ್‌ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

ಡಿಸೈನ್

ಡಿಸೈನ್

ರೆಡ್ಮಿ ಸ್ಮಾರ್ಟ್‌ಫೋನ್‌ ಗ್ಲಾಸಿ ಫಿನಿಶಿಂಗ್‌ ಲುಕ್‌ನಲ್ಲಿದ್ದು, ಸ್ಟನ್ನಿಂಗ್ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇ ಸುತ್ತಲೂ 2.5D ಕರ್ವ್ ಆಕಾರವನ್ನು ಹೊಂದಿದ್ದು, ಡಿಸ್‌ಪ್ಲೇಗೆ ಗೊರಿಲ್ಲಾ ಗ್ಲಾಸ್‌ ರಕ್ಷಣೆ ಯೊಂದಿಗೆ ಹಿಂಬದಿಯಲ್ಲೂ ಸಹ ಗೊರಿಲ್ಲಾ ಗ್ಲಾಸ್‌ ನೀಡಲಾಗಿದೆ. ಹೀಗಾಗಿ ಸ್ಕ್ರಾಚ್‌ನಿಂದ ಮುಕ್ತವಾಗಿದೆ. ಬ್ಲ್ಯಾಕ್, ಬ್ಲೂ ಮತ್ತು ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

ಡಿಸ್‌ಪ್ಲೇ

ಡಿಸ್‌ಪ್ಲೇ

ರೆಡ್ಮಿ ನೋಟ್ 7ಎಸ್‌ ಸ್ಮಾರ್ಟ್‌ಫೋನ್ 6.3 ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ಅನ್ನು ಒದಗಿಸಲಾಗಿದೆ. ಹಾಗೇ ಡಿಸ್‌ಪ್ಲೇಯಲ್ಲಿ ಡಾಟ್ ನಾಚ್‌ ನೀಡಲಾಗಿದ್ದು ಜೊತೆ ತೆಳುವಾದ 1.95 ಎಂಎಂ ಬೆಜಲ್ ರಚನೆಯನ್ನು ಪಡೆದುಕೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

ರೆಡ್ಮಿ ನೋಟ್‌ 7ಎಸ್‌ ಸ್ಮಾರ್ಟ್‌ಫೋನಿನಲ್ಲಿ 48 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದ್ದು, ಇದರ ಅಪರ್ಚರ್ ಸಾಮರ್ಥ್ಯವು f/1.8 ಆಗಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದೆ.ಅತ್ಯುತ್ತಮ ಗುಣಮಟ್ಟದಲ್ಲಿ ಫೋಟೊಗಳನ್ನು ಸೆರೆಹಿಡಿಯಬಲ್ಲ ಸೂಪರ್‌ ಪಿಕ್ಸಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಸೆಲ್ಫಿಗಾಗಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ.

ಸೂಪರ್‌ ಪಿಕ್ಸಲ್

ಸೂಪರ್‌ ಪಿಕ್ಸಲ್

ಕಂಪನಿಯು ಹೊಸದಾಗಿ ಸೂಪರ್‌ ಪಿಕ್ಸಲ್ ಟೆಕ್ನೊಲಜಿ ಪರಿಚಯಿಸಿದ್ದು, ಈ ತಂತ್ರಜ್ಞಾನದಲ್ಲಿ ಝೂಮ್‌ ಮಾಡಿದರು ಫೋಟೊ ಪಿಕ್ಸಲ್ ಒಡೆಯುವುದಿಲ್ಲ. ಅತ್ಯುತ್ತಮ ಝೂಮ್‌ ಆಯ್ಕೆಯನ್ನು ಈ ಫೋನ್‌ ಒಳಗೊಂಡಿದ್ದು, AI ತಂತ್ರಜ್ಞಾನ ನೆರವಿನಿಂದ ಮಂದಬೆಳಕಿನಲ್ಲೂ ಉತ್ತಮ ಬ್ರೈಟ್‌ನೆಸ್‌ ಕಂಡುಕೊಳ್ಳಲಿದೆ. ರಾತ್ರಿವೇಳೆಯಲ್ಲಿ ನೈಟ್‌ಮೋಡ್‌ ಆಯ್ಕೆಯು ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, 2.2ಗಿಗಾಹರ್ಡ್ಜ ಶಕ್ತಿ ಇದೆ. ಹಾಗೆಯೇ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದ್ದು ಅವು ಕ್ರಮವಾಗಿ 3GB RAM ಮತ್ತು 32GB ಆಂತರಿಕ ಸಂಗ್ರಹ ಹಾಗೂ 4GB RAM ಮತ್ತು 64 GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಈ ಸ್ಮಾರ್ಟ್‌ಫೋನಿನಲ್ಲಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಆಯ್ಕೆಯನ್ನು ಒದಗಿಸಲಾಗಿದೆ. ಇದರೊಂದಿಗೆ 'IR ಬ್ಲಾಸ್ಟರ್' ಸೌಲಭ್ಯವನ್ನು ನೀಡಲಾಗಿದ್ದು, ಇದರ ನೆರವಿನಿಂದ ಟಿವಿ ಸೇರಿದಂತೆ ಇತರೆ ಡಿವೈಸ್‌ಗಳಿಗೆ ಫೋನ್‌ ಕನೆಕ್ಟ್‌ ಮಾಡುವ ಆಯ್ಕೆ ದೊರೆಯಲಿದೆ. ಹಾಗೆಯೇ 3.5ಎಂ ಎಂ ಆಡಿಯೊ ಜಾಕ್‌ ಫೋನಿನಲ್ಲಿ ಕಾಣಬಹುದಾಗಿದೆ.

ಬ್ಯಾಟರಿ

ಬ್ಯಾಟರಿ

ರೆಡ್ಮಿ ನೋಟ್‌ 7ಎಸ್‌ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದ್ದು, 2.0 ಕ್ವಾಲ್ಕಮ್ ಕ್ವಿಕ್‌ ಚಾರ್ಜರ್‌(10w) ಸೌಲಭ್ಯವನ್ನು ಪಡೆದಿದೆ. ನಿರಂತರ 13 ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಸಾಮರ್ಥ್ಯ ಪಡೆದಿದೆ ಹಾಗೂ 150 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಶಕ್ತಿ ಇದ್ದು, ಒಟ್ಟು 250 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್‌ ಸಾಮರ್ಥ್ಯವನ್ನು ಹೊಂದಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ರೆಡ್ಮಿ ನೋಟ್ 7ಎಸ್‌ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ ಮಾದರಿಗಳಲ್ಲಿ ಲಾಂಚ್‌ ಆಗಿದ್ದು, 3GB RAM ಮತ್ತು 32GB ವೇರಿಯಂಟ್ ಬೆಲೆಯು 10,999ರೂ.ಗಳು ಆಗಿದೆ ಹಾಗೂ 4GB RAM ಮತ್ತು 64 GB ಬೆಲೆಯು 12,999 ಆಗಿದೆ. ಇದೇ ಮೇ 23ರಂದು ಮೊದಲ ಸೇಲ್ ಆರಂಭಿಸಲಿದ್ದು, ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.

ಓದಿರಿ : ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!ಓದಿರಿ : ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!

Best Mobiles in India

English summary
Xiaomi Redmi Note 7S with 48MP camera unveiled: Live updates.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X